ಬಂಟ್ವಾಳ: ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಅಗ್ರಾರ್, ಪರಿಸರ ದಿನಾಚರಣೆಯನ್ನು ಜಾಗೃತಿ ಜಾಥಾ ಮಾಡುವುದರೊಂದಿಗೆ ಆಚರಿಸಿತು. ಮುಖ್ಯ ಅತಿಥಿಯಾದ ಶ್ರೀಯುತ ಪಿಯುಸು.ಎಲ್. ರೋಡ್ರಿಗಸ್ ಹಾಗೂ ಅಗ್ರಾರ್ ಚರ್ಚ್‍ನ ಮುಖ್ಯ ಗುರುಗಳಾದ ವಂದನೀಯ ಫಾ. ಗ್ರೆಗೋರಿ ಡಿ’ಸೋಜರವರು ಗಿಡ ನೆಡುವುದರ ಮೂಲಕ ಬಾರೆಕಾಡಿನಲ್ಲಿ ಉದ್ಘಾಟಿಸಿದರು. ಪಿಯುಸ್.ಎಲ್ ರೋಡ್ರಿಗಸ್‍ರವರು ಪರಿಸರ ರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಿದರು ಹಾಗೂ ಪರಿಸರವನ್ನು ತಂತ್ರಜ್ಜಾನಗಳ ಬಳಕೆಯೊಂದಿಗೆ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವೆಂದು ತಿಳಿಸಿದರು. ನಂತರ ಸಂಸ್ಥೆಯ ಸಂಚಾಲಕರಾದ ಫಾ. ಗ್ರೆಗೋರಿ ಡಿ’ಸೋಜ ಮಾತನಾಡುತ್ತಾ ಪರಿಸರದ ಮೂಲ ಮತ್ತು ಅದರ ಸೂಕ್ಷ್ಮತೆಯನ್ನು ವಿವರಿಸಿದರು. ಈ ಮೆರವಣಿಗೆಯು ಬಾರೆಕಾಡಿನಿಂಡ ಅಗ್ರಾರ್ ಚರ್ಚ್ ನವರೆಗೆ ಮಕ್ಕಳ ಘೋಷಣೆ ಹಾಗೂ ವಾದ್ಯ ತಂಡದೊಂದಿಗೆ ಸಾಗಿತ್ತು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರೀತಿ ಫೆರ್ನಾಂಡಿಸ್ ರವರು ಎಲ್ಲರಿಗೂ ವಂದಿಸಿ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಬಾರೆಕಾಡಿನ ಪರಿಸರವಾಸಿಗಳು ಉಪಸ್ಥಿತರಿದ್ದರು.

