ಬಂಟ್ವಾಳ, ಜೂ. 6: ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ರವಿವಾರ ನಂದರಬೆಟ್ಟು ಮದೀನ ಮಸೀದಿ ವಠಾರದಲ್ಲಿ ರಂಝಾನ್ ಸ್ವಾಗತ ಭಾಷಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ದುಅ ಮೂಲಕ ಉದ್ಘಾಟಿಸಿದರು. ಮಂಗಳನಗರ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಪ್ರಾಂಶುಪಾಲ ಕೆ.ಎಂ.ಕಾಸಿಂ ದಾರಿಮಿ ಸವಣೂರು ಮುಖ್ಯ ಪ್ರಭಾಷಣಗೈದರು.

ವೇದಿಕೆಯಲ್ಲಿ ಮಿತ್ತಬೈಲ್ ಜುಮಾ ಮಸೀದಿಯ ಸಹಾಯಕ ಮುದರ್ರಿಸ್ ಹಾಜಿ ಅಬ್ದುಲ್ ಹಮೀದ್ ದಾರಿಮಿ, ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಅಧ್ಯಕ್ಷ ಹಬೀಬುಲ್ಲಾ, ನಂದರಬೆಟ್ಟು ಮದೀನ ಮಸೀದಿ ಇಮಾಂ ಎಂ.ಕೆ.ಮುಹಮ್ಮದ್ ಮುಸ್ಲಿಯಾರ್, ಅಧ್ಯಕ್ಷ ಮುಹಮ್ಮದ್, ಕಾರ್ಯದರ್ಶಿ ಇಕ್ಬಾಳ್, ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷ ಅಲ್ತಾಫ್ ಮಿತ್ತಬೈಲ್ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಕೆ.ಪಿ.ಇರ್ಶಾದ್ ಹುಸೈನ್ ದಾರಿಮಿ ಸ್ವಾಗತಿಸಿ, ಧ್ಯನ್ಯವಾದಗೈದರು. ಫಾರೂಕ್ ಪಲ್ರ್ಯ ಮತ್ತು ಬಶೀರ್ ಮಜಲ್ ಕಾರ್ಯಕ್ರಮ ನಿರೂಪಿಸಿದರು.
