ಕೈಕಂಬ: ಹಲವು ಗುತ್ತಿನ ಮನೆಗಳ ಯಜಮಾನರನ್ನು ಒಟ್ಟು ಸೇರಿಸುವ ಕೆಲಸ ಪುಣ್ಯದ ಕೆಲಸ ಇಂತಹ ಕೆಲಸಗಳು ಗುತ್ತಿನ ಯಜಮಾನರಿಂದ ಇನ್ನಷ್ಠು ಆಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಗುರುಪುರ ಗೋಳಿದಡಿಗುತ್ತಿನ ಶ್ರೀ ವೈದ್ಯನಾಥದ್ಯ ಪಂಚದೈವಗಳ ಪುನರ್ ನಿರ್ಮಾಣಗೊಂಡ ತೀರ್ಥ ಪುಷ್ಕರಣೆಯ ಸಮರ್ಪಣೆಯ ಹಾಗೂ ಗುತ್ತಿನ ಗಾಥೆ ಧ್ವನಿ ಸುರುಳಿಯ ಬಿಡುಗಡೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ನುಡಿದರು.

ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ದೇವತಾ ಕಾರ್ಯಗಳು ಜರಗಿತು ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್.ನಿತ್ಯಾನಂದರಿಂದ ರಚಿಸಲ್ಪಟ್ಟ ಗುತ್ತಿನಮನೆಗಳ ಗಡಿಕಾರರ ಧರ್ಮಾ ಡಳಿತ ಇತಿಹಾಸದ ಸತ್ಯ ವೃತ್ತಾಂತಗಳನ್ನೊಳಗೊಂಡ ಗುತ್ತಿನ ಗಾಥೆ ಧ್ವನಿ ಸುರುಳಿಯ ಬಿಡುಗಡೆ ಹಾಗೂ ತೀರ್ಥ ಪುಷ್ಕರಣೆಯ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಮೂಳೂರು ಮುಂಡಿತ್ತಾಯಿ ದೈವಸ್ಥಾನದ ಜಿ ಟಿ ಅನ್ನು ಭಟ್ ಆಶೀರ್ವದಿಸಿದರು. ಇದೇ ಸಂದರ್ಭ ತೀರ್ಥ ಪುಷ್ಕರಣೆಯ ಕೆಲಸ ನಿರ್ವಹಿಸಿದ ಮೋಹನದಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ತಿಮರೋಡಿ ಬೀಡು ಉಜಿರೆಯ ಮಹೇಶ ಶೆಟ್ಟಿ ತಿಮರೋಡಿ, ಏತಮೊಗರು ಗುತ್ತು ಬೈಲು ಮಾಗಣೆ ಗಡಿಕಾರರು ಜಯ ಶೆಟ್ಟಿ ಯಾನೆ ಸದಾಶಿವ ಶೆಟ್ಟಿ, ದೋಣಿಂಜೆಗುತ್ತು ಗಡಿಕಾರರು ಗುರುಪುರ ಪ್ರಮೋದ ಕುಮಾರ ರೈ, ಬೀರಣ್ಣ ಶೆಟ್ಟಿ ಮನೆ, ಮುಕ್ಕ ಗಡಿಕಾರರು ಬೀರಣ್ಣ ಶೆಟ್ಟಿ ಯಾನೆ ಕೇಶವ ಶೆಟ್ಟಿ, ಇರುವೈಲು ದೊಡ್ಡ ಗುತ್ತು ಗಡಿಕಾರರು ಇಂದ್ರಾ ಳ ಕೊರಗ ಶೆಟ್ಟಿ ಯಾನೆ ಜಗದೀಶ ಶೆಟ್ಟಿ, ಶ್ರೀ ಬಲವಾಂಡಿ ಕ್ಷೇತ್ರ ಪೆರಾರ ಶ್ರೀ ಬಾಲಕೃಷ್ಣ ಶೆಟ್ಟಿ ಆಳಕೆಗುತ್ತು ಉಪಸ್ಥಿತರಿರುವರು. ಮಾಜಿ ಮೇಯರ್ ದಿವಾಕರ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಹೆಗ್ಡೆ ವಂದಿಸಿದರು. ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಸ್ವಾಗತಿಸಿದರು.






