ಉಳ್ಳಾಲ.ಜೂ, 01: ಇಂದು ಹಾಲು ” ವಿಶ್ವಆಹಾರ ” ವೆಂದು (ತಿoಡಿಟಜ gಟobಚಿಟ ಜಿooಜ)ಅಂತÀರಾಷ್ಟ್ರೀಯಆಹಾರ ಮತ್ತು ಕೃಷಿ ಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ. ಹಾಲು ಪರಿಪೂರ್ಣಆಹಾರವಾಗಿ ವಿಶ್ವ ಮಾನ್ಯತೆ ಪಡೆದಿದೆಎಂದುದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕಡಾ: ಬಿ.ವಿ. ಸತ್ಯನಾರಾಯಣ ಹೇಳಿದರು.
ಅವರುಬುಧವಾರದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರಒಕ್ಕೂಟದ ವತಿಯಿಂದನಡೆದ 16ನೇ ವಿಶ್ವ ಹಾಲು ದಿನಾಚರಣೆ ಪ್ರಯುಕ್ತಕೊಣಾಜೆಯ ಅಸೈಗೋಳಿಯ ಅಭಯಆಶ್ರಯದಲ್ಲಿ ಹಿರಿಯ ನಾಗರಿಕರು ಮತ್ತು ಪುಟಾಣಿಗಳಿಗೆ ನಂದಿನಿ ಸುವಾಸಿತ ಹಾಲು ಮತ್ತು ಸಿಹಿ ತಿಂಡಿ ವಿತರಿಸಿ ಮಾತನಾಡಿದರು.

Milk day 01

Milk day 02

milk day 03

Milk day 04

Milk day 05

milk day 06
ವಿಶ್ವ ಹಾಲು ದಿನಾಚರಣೆಯಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಸರಬರಾಜಿನಲ್ಲಿ ಸಂಯೋಜನೆಗೊಂಡಿರುವ ವ್ಯವಸ್ಥೆಯನ್ನು ಪರಿಚಯ ಮಾಡುವುದು ಮುಖ್ಯಉದ್ದೇಶವಾಗಿರುತ್ತದೆ. ಮಾನವನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಹಾಲಿನ ಮಹತ್ವದ ಬಗ್ಗೆ ಗ್ರಾಹಕರಿಗೆಅರಿವು ಮೂಡಿಸುವುದು ಹಾಗೂ ಹೈನುಗಾರಿಕೆಚಟುವಟಿಕೆಯಲ್ಲಿ ವರ್ಷಪೂರ್ತಿ ಸಕ್ರಿಯವಾಗಿ ಶ್ರಮಿಸಿ, ಹಾಲು ಉತ್ಪಾದಿಸುವ ಉತ್ಪಾದಕರು, ಹಾಲು ಸಂಗ್ರಹಣೆಯಲ್ಲಿ ನಿರತರಾಗಿರುವ ಸಂಸ್ಥೆಗಳು ಹಾಲನ್ನು ಸ್ವೀಕರಿಸಿ, ಸಂಸ್ಕರಿಸಿ, ಹಾಲು ಮತ್ತು ಹಾಲಿನ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ, ವಿವಿಧ ಹಂತಗಳಲ್ಲಿ ಸಮನ್ವಯತೆ ಸಾಧಿಸುವವರ ಸೇವೆಯನ್ನು ಸ್ಮರಿಸುವ ಮೂಲಕ ವಿಶ್ವ ಹಾಲು ದಿನಾಚರಣೆಯನ್ನುಅರ್ಥಪೂರ್ಣವಾಗಿ ಪ್ರತಿ ವರ್ಷಜೂನ್ 1ರಂದು ಆಚರಿಸಲಾಗುತ್ತಿದೆಎಂದು ಹೇಳಿದರು.
ಅಭಯಅಶ್ರಯದಅಧ್ಯಕ್ಷ ಶ್ರೀನಾಥ್ ಹೆಗ್ಡೆ ಕಾರ್ಯಕ್ರಮದಆಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಯಾವುದೆಕಾರ್ಯ ಮಾಡಬೇಕಾದರೆ ಮಹಾಗಣಪತಿ ಮತ್ತು ಸತ್ಯನಾರಾಯಣನ್ನು ನೆನಪಿಸುದು.ಅದರೆಇವತ್ತುಜೀವಂತವಾಗಿ ಸತ್ಯನಾರಾಯಣದೇವರು ನಮ್ಮಅಶ್ರಮಕ್ಕೆ ಬಂದಿದ್ದು ಹಿರಿಯ ನಾಗರಿಕರಿಗೆ ಮತ್ತು ಪುಟಾಣಿಗಳಿಗೆ ಹಾಲು ಸಿಹಿ ತಿಂಡಿ ಹಂಚಿದಾರೆದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರಒಕ್ಕೂಟಕ್ಕೆಧನ್ಯವಾದವನ್ನು ನಮ್ಮ ಸಂಸ್ಥೆಯ ವತಿಯಿಂದಧನ್ಯವಾದ ಸಲ್ಲಿಸುತ್ತಿದೆನೆಎಂದು ಹೇಳಿದರು
ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕಡಾ: ಕೆ.ಎಂ. ಲೋಹಿತೇಶ್ವರ, ರವಿ ಮುಂತಾವರು ಈ ಸಂದರ್ಭ ಉಪಸ್ಥಿತರಿದರು
ಅಭಯಅಶ್ರಯದ ಪುಟಾಣಿ ವೇಣುಗೋಪಾಲ್ ಪ್ರಾರ್ಥಿಸಿದರು.ಸಹಾಯಕ ವ್ಯವಸ್ಥಾಪಕಜಯದೇವಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *