ಫರಂಗಿಫೇಟೆ: ಯಾವುದೇ ಕ್ರೀಡಾಪಟುವನ್ನು ಧರ್ಮ, ಜಾತಿಯ ಆಧಾರದಲ್ಲಿ ಗುರುತಿಸುವುದಿಲ್ಲ, ಬದಲಾಗಿ ಆತ ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದ ಗುರುತಿಸುತ್ತಾರೆ. ಇತರ ಯಾವುದೇ ಕ್ಷೇತ್ರದ ಸಾಧಕಿರಿಗಿಂತ ಕ್ರೀಡಾಕ್ಷೇತ್ರದ ಸಾಧಕರಿಗೆ ಹೆಚ್ಚಿನ ಗೌರವ ಮನ್ನಣೆ ಇರುತ್ತದೆ ಎಂದು ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಹೇಳಿದರು.
ಫರಂಗಿಪೇಟೆಯ ನೇತ್ರಾವತಿ ನದಿ ಕಿನಾರೆಯಲ್ಲಿರುವ ಮೈದಾನದಲ್ಲಿ ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ನಡೆದ ಯುಪಿಎಲ್-2016 ಪುಟ್ಬಾಲ್ ಲೀಗ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಭಾರತದಲ್ಲೂ ಕೂಡ ಪುಟ್ಬಾಳ್ ಆಟವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕು, ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಹಾಗೂ ಹೆಚಚಿನ ದೇಶಗಳು ಆಡುವ ಆಟವಾಗಿರುವ ಪುಟ್ಬಾಲ್ಗೆ ಭಾರತದಲ್ಲೂ ಪ್ರಾಧನ್ಯತೆ ಸಿಗಬೇಕು ಎಂದ ಅವರು ಕಾಲೇಜು ದಿನಗಳಲ್ಲಿ ತಾನು ಒರ್ವ ಪುಟ್ಬಾಲ್ ಆಟಗಾರ ಎಂದು ಕಾಲೇಜು ದಿನಗಳನ್ನು ನೆನೆಪಿಸಿಕೊಂಡರು. ಕ್ರೀಡಾಂಗಣ ನಿಮರ್ಿಸುವ ನಿಟ್ಟಿನಲ್ಲಿ ಫರಂಗಿಪೇಟೆ ಪ್ರದೇಶದಲ್ಲಿ ಸಕರ್ಾರಿ ಜಮೀನು ಗುರುತಿಸುವಂತೆ ಸಲಹೆ ನೀಡಿದ ಅವರು ತನ್ನ ಸಹಕಾರ ನೀಡುವುದಾಗಿ ತಿಳಿಸಿದರು.
ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ವಿವಿಧ ಕ್ರೀಡೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮ ಕ್ಲಬ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿರುವುದಾಗಿ ತಿಳಿಸಿದರು ಐಎಎಸ್ ಅಥವಾ ಐಪಿಎಸ್ ಮಾಡುವ ಆಸಕ್ತ ವಿದ್ಯಾರ್ಥಿಗಳಿದ್ದಲ್ಲಿ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು.
ಅಟ್ಲಾಸ್ ಗೋಲ್ಡ್ನ ಮಾಲಕ ಮಹಮ್ಮದ್ ಶಫಿ, ಜಬ್ಬಾರ್ ಮಾರಿಪಳ್ಳ, ರಫೀಕ್ ಪೇರಿಮಾರ್, ಕ್ಲಬ್ನ ಉಪಾಧ್ಯಕ್ಷ ಆಸೀಫ್ ಮೇಲ್ಮನೆ, ಗಫೂರ್ ದುಬೈ, ಶಾಹುಲ್ ಹಮೀದ್, ತಾ.ಪಂ.ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್ ಮಾರಿಪಳ್ಳ, ಇಬ್ರಾಹಿಂ ಕುಂಪಣಮಜಲು, ಲತೀಫ್, ಇಂತಿಹಾಸ್ ತುಂಬೆ, ಬಾಫಿ, ಸಲೀಂ ತೆಲ್ಲಿ ಮತ್ತಿತರರು ಹಾಜರಿದ್ದರು.
ಅರ್ಕುಳ ತಂಡಕ್ಕೆ ಪ್ರಶಸ್ತಿ:
ಎಂಟು ತಂಡಗಳ ನಡುವೆ ಲೀಗ್ ಪಂದ್ಯಾಟ ನಡೆದಿದು ಅಂತಿಮ ಸೆಣಸಾಟದಲ್ಲಿ ಅರ್ಕುಳದ ಇಲೆವೆನ್ ಜಾಗೋರ್ಸ್ ತಂಡ ಟುಡೆ ಸೋಕರ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಸಹಾಯುಕ ಆಯುಕ್ತ ಡಾ. ಅಶೋಕ್ ಡಿ.ಆರ್.ಗೆದ್ದ ತಂಡಕ್ಕೆ ಬಹುಮಾನ ವಿತರಿಸಿದರು.
