ವಾಮಂಜೂರು:ಇಂದಿನ ಯುವ ಸಮುದಾಯದಲ್ಲಿ ಶಾಂತಿ, ಸೌಹಾರ್ದತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ಯು.ಎಸ್. ಎ. ಆಯೋಜಿಸಿದ ಈ ಕ್ರೀಡಾಕೂಟವು ಸೌಹಾರ್ದ ಕ್ರೀಡಾಕೂಟವಾಗಿದ್ದು ಇದರಿಂದ ಪರಸ್ಪರ ಯುವಕ ಸಂಘಟನೆಗಳು ತಮ್ಮನ್ನು ತಾವು ಅರಿತುಕೊಂಡು ಸಮುದಾಯದ ಏಳಿಗೆಯಲ್ಲಿ ಯುವ ಸಂಘಟನೆಗಳು ತೊಡಗಿಕೊಳ್ಳ ಬೇಕಾಗಿದೆ ಎಂದು ಚೈಲ್ಡ್ ಪಂ ಡ್ ಇಂಟರ್ ನ್ಯಾಷನಲ್ಯು.ಎಸ್. ಎ.ಯಯೋಜನಾಧಿಕಾರಿ ಪುನೀತ್ ಡಿ. ಶೆಟ್ಟಿ ಹೇಳಿದರು.

ಅವರು ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ಫಂಡ್ಇಂಟರ್ ನ್ಯಾಷನಲ್ಯು.ಎಸ್. ಎ. ಇದರ ಆಶ್ರಯದಲ್ಲಿ ಯೋಜನ ವಲಯಕ್ಕೆ ಒಳಪಟ್ಟ ಯುವಕ ಸಂಘಗಳ ವಾರ್ಷಿಕ ಕ್ರೀಡಾಕೂಟವನ್ನು ಎ.17ರಂದು ಭಾನುವಾರ ಮಂಗಳ ಜ್ಯೋತಿ ಸಮಗ್ರ ಶಾಲೆಯ ಕ್ರೀಡಾಂಗಣದಲ್ಲಿ ಟ್ರೋಪಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿಯೋಜನಾ ವಲಯಕ್ಕೆ ಒಳ ಪಟ್ಟಒಟ್ಟು 8ಯುವಕ ಸಂಘಗಳು ಉದ್ದಜಿಗಿತ, ಗುಂಡುಎಸೆತ, 100 ಮೀಟರ್ಓಟ ಮತ್ತು ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರಿಕೆಟ್ ಪಂದ್ಯಾಟದಲ್ಲಿ ಅನಿಕೇತನ ಯುವಕ ಸಂಘ, ಮಂಗಳ ನಗರ ಮತ್ತು ವಿಜಯಲಕ್ಷ್ಮಿ ಫ್ರೆಂಡ್ಸ್ ಕ್ಲಬ್ ಪರಾರಿಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಪಡೆದರು.
ಚೈಲ್ಡ್ ಪಂಡ್ಇಂಟರ್ ನ್ಯಾಷನಲ್ಯು.ಎಸ್. ಎ. ವತಿಯಿಂದ ವಿಜೇತರಿಗೆ ಟ್ರೋಪಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಕಾರ್ಯಕ್ರಮ ಸಂಯೋಜಕರಾದ ಹರೀಶ್ ಕುಲಶೇಖರ್, ಅಕೌಟೆಂಟ್ ರೂಪೇಶ್ ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ವೀಕ್ಷಕ ವಿವರಣೆಯನ್ನು ಶಿವಶಂಕರ್ ಶೆಟ್ಟಿಗಾರ್ ನಿರ್ವಹಿಸಿದ್ದರು.

