ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಪುರುಷರ ಬಾಲ್ಬ್ಯಾಡ್ಮಿಂಟನ್ ತಂಡ ಇಲ್ಲಿನ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಮಂಗಳವಾರ ಸತತ 12 ನೇ ಬಾರಿಗೆ ಮಂಗಳೂರು ವಿವಿ ಪುರುಷರ ಬಾಲ್ ಬಾಡ್ಮಿಂಟನ್ ಪ್ರಶಸ್ತಿ ಪಡೆಯುವುದರ ಮೂಲಕ ಎಂ.ಕೆ ಅನಂತರರಾಜ್ ಸ್ಮಾರಕ ಪರ್ಯಾಯ ಫಲಕವನ್ನು ತನ್ನಲ್ಲೇ ಉಳಿಸಿಕೊಂಡಿದೆ..
ಮಂಗಳೂರು ವಿವಿ ವ್ಯಾಪ್ತಿಯ 14 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಪೈನಲ್ನಲ್ಲಿ ಆಳ್ವಾಸ್ ತಂಡ ವಾಮದ ಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 29-6 ಹಾಗೂ 29-4 ನೇರ ಸೆಟ್ಗಳಿಂದ ಸೋಲಿಸಿತು. ಸೆಮಿಪೈನಲ್ನಲ್ಲಿ ಆಳ್ವಾಸ್ ತಂಡ ಭಂಡಾರ್ಕಾರ್ಸ್ ತಂಡವನ್ನು 29-4 , 29-4 ಅಂಕಗಳಿಂದ ಸೋಲಿಸಿ ಫೈನಲ್ಗೆ ತೇರ್ಗಡೆ ಹೊಂದಿತು. ವಾಮದ ಪದವು ತಂಡ ಎಸ್.ಹೆಚ್.ಸಿ ಮಂಡತ್ಯಾರ್ ತಂಡವನ್ನು 29-8, 29-27 ಅಂತರದಿಂದ ಸೋಲಿಸಿ ಪೈನಲ್ ಪ್ರವೇಶಿಸಿತ್ತು.
ಆಳ್ವಾಸ್ ತಂಡದ ಗೋಪಾಲ್ ಟೂರ್ನಿಯ ಅತ್ಯುತ್ತಮ ಆಟಗಾರನೆನಿಸಿದರು. ಸಮಾರೋಪ ಸಮಾರಂಭದಲ್ಲಿ ಅಂಡಾರು ಗುಣಪಾಲ ಹೆಗ್ಡೆ ಅತಿಥಿಯಾಗಿ ಪಾಲ್ಗೊಂಡು ಬಹುಮಾನ ವಿತರಿಸಿದರು.
