ಸುರತ್ಕಲ್: ಕೇಂದ್ರ ಸರಕಾರದ ಸಹಕಾರದೊಂದಿಗೆ “ಸ್ವದೇಶ ದರ್ಶನ ” ಎಂಬ ಹೊಸ ಯೋಜಯ ಮೂಲಕ ಸುಮಾರು 92 ಕೋಟಿ ರೂ. ವೆಚ್ಚದಲ್ಲಿ ಕರಾವಳಿಯ ಬೀಚ್ ಗಳನ್ನು ಅಭಿವೃದ್ದಿ ಪಡಿಸಲಾಗುವುದು ಇದರಲ್ಲಿ ಕರಾವಳಿ ಜಿಲ್ಲೆಯ ಮುರ್ಡೇಶ್ವರ ಮರವಂತೆ, ತ್ರಾಸಿ, ಮಾವಿನಕುರ್ವೆ , ಸೋಮೇಶ್ವರ, ಸುರತ್ಕಲ್, ಮಲ್ಪೆ, ಓಂ ಬೀಚ್ ಸೇರಿದಂತೆ 9 ಬೀಚ್ ಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಮತ್ತು ಭಾರಿ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.

ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ,ಆಲ್ ಕಾರ್ಗೋ ಸಂಸ್ಥೆ,ಮಂತ್ರ ಸರ್ಪೀಂಗ್ ಕ್ಲಬ್ ಮೂಲ್ಕಿ,ಕೆನರಾ ಸರ್ಫೆಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಪ್ರಮೋಶನಲ್ ಕೌನ್ಸಿಲ್, ಮತ್ತು ಸರ್ಫೆಂಗ್ಗ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಸಿಹಿತ್ಲುವಿನ ಮುಂಡ ದಲ್ಲಿನ ಬೀಚ್ ನಲ್ಲಿ ಮೂರು ದಿನಗಳ ಕಾಲ ಜರಗಲಿರುವ ರಾಷ್ತ್ರ ಮಟ್ಟದ ಭಾರತೀಯ ಮುಕ್ತ ಸರ್ಫೆಂಗ್ಗ್ -2016 ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದಂತಹ ಜಿಲ್ಲಾ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ , ಶಾಸಕ ಬಿ ಎ ಮೊಯಿದಿನ್ ಬಾವಾ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ. ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮದ್ ಮೋನು, ಸದಸ್ಯ ಜೀವನ್ ಪ್ರಕಾಶ್, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಪೋಲಿಸ್ ಕಮಿಷನರ್ ಎಂ ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಉದ್ಯಮಿ ರೊನಾಲ್ಡ್ ಕೊಲಾಸೋ, ಮಂತ್ರ ಸರ್ಫೆಂಗ್ ಕ್ಲಬ್ ನ ಸ್ಥಾಪಕ ಸರ್ಫೆಂಗ್ ಸ್ವಾಮಿ ನರಸಿಂಗ, ಯತೀಶ್ ಬೈಕಂಪಾಡಿ, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜಾ, ಸದಸ್ಯ ವಸಂತ್ ಬೆರ್ನಾಡ್, ಧನ್ ರಾಜ್ ಶೆಟ್ಟಿ, ಮತ್ತಿತರರು ಇದ್ದರು.



