ಬಂಟ್ವಾಳ: ತಾಲೂಕಿನ ಕಂದಾಯ ಇಲಾಖಾ ವತಿಯಿಂದ ಪಿಂಚಣಿ ಮತ್ತು ಕಂದಾಯ ಅದಾಲತ್ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗುರುವಾರ ನಡೆಯಿತು.

IMG-20160526-WA0024
ಬಿ.ಮೂಡ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಗ್ರಾಮಗಳನ್ನೊಳಗೊಂಡ ಈ ಅದಾಲತ್ತನ್ನು ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಉದ್ಘಾಟಿಸಿ ಗ್ರಾಮಸ್ಥರು ಈ ಕಂದಾಯ ಅದಾಲತ್ನ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಉಪ ತಹಶೀಲ್ದಾರ್ ಜೆ.ಪಿ.ರೋಡ್ರಿಗಸ್, ಎ.ಡಿ.ಎಲ್.ಆರ್. ಎಸ್.ಎಂ.ನಿಂಗೇ ಗೌಡ, ತಾಲೂಕು ಅಧಿಕಾರಿಗಳಾದ ಗ್ರೆಟ್ಟ ಐರಿನ್, ಪಾಣೆಮಂಗಳೂರು ಹೋಬಲಿ ಆರ್.ಐ. ನಾರಾಯಣ ಪೂಜಾರಿ, ಪಿಡಿಒ ರೀಟಾ ಡಿಸೋಜ, ಪಂಚಾಯತ್ ಅಧ್ಯಕ್ಷ ಜಯಂತಿ ಬಟ್ಟಾಜೆ, ಉಪಾಧ್ಯಕ್ಷರಾದ ಯೋಗಿಶ್ ಸೂರ್ಲ, ಚಂದ್ರಶೇಖರ್ ರಾವ್ , ಗ್ರಾಮ ಕರಣಿಕರಾದ ದಾಕ್ಷಾಯಿಣಿ, ಬಸವರಾಜ ಸನಾದಿ, ಜ್ಯೋತಿ ಭಾಯಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *