ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆ ಮಾತೆಯರದು- ವೈ.ಮಂಗೇಶ್ ಶೆಣೈ
ಕುಂದಾಪುರ: ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದ ಹೊಣೆ ಮಾತೆಯರಿಗೆ ಸೇರಿದೆ. ಅವರು ಆ ಕೆಲಸಕ್ಕೆ ಮುಂದಾದರೆ ಮಾತ್ರ ದೇಶ ಸುಸಂಸ್ಕøತ ಪ್ರಜೆಗಳನ್ನು ಹೊಂದಲು ಸಾಧ್ಯವೆಂದು ಎಳ್ಜಿತ ಸಿದ್ಧಿವಿನಾಯಕ ಸಾಂಸ್ಕ್ರತಿಕ ಕೇಂದ್ರದ ಸಂಚಾಲಕ ವೈ. ಮಂಗೇಶ್ ಶೆಣೈ ಹೇಳಿದರು.
ಖಂಬದಕೋಣೆ ಮಾಣಿಕ್ಯನಾಗ ಸನ್ನಿಧಿಯ 14ನೇ ವಾರ್ಷಿಕೋತ್ಸವದ ನಿಮಿತ್ತ ಗುರುವಾರ ನಡೆದ `ಅರಸಿನ ಕುಂಕುಮ’ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಭಾರತೀಯ ಪರಂಪರೆಯಲ್ಲಿ ಎಲ್ಲಾ ಮಹಿಳೆಯರಿಗೆ ಎಲ್ಲಾ ಕಾಲದಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುವ ಅವಕಾಶವಿತ್ತು. ಅದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ. ಆದರೆ ಯಾವುದೋ ಒಂದು ಹಂತದಲ್ಲಿ ನಿರ್ಧಿಷ್ಟ ಸಂದರ್ಪಗಳಲ್ಲಿ ಅವರನ್ನು ದೂರವಿಡುವ ಪದ್ದತಿ ಆರಂಭವಾಯಿತು. ಅದಕ್ಕೆ ಅಂತ್ಯಕಾಣಬೇಕಾದ ಕಾಲ ಬಂದಿದೆ ಎಂದು ಅವರು ನುಡಿದರು.
ಹಾಗೆ ಮುಂದುವರಿಸಿಮಾತನಾಡುತ್ತ, ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದ ಬೈಂದೂರು ವಲಯ ಕ್ಷೇತ್ರದಲ್ಲಿ ಸಾರ್ವಜನಿಕ ಅರಸಿನ ಕುಂಕುಮ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಪ್ರಥಮ ಎಂದು ಅವರು ಅಭಿಪ್ರಾಯ ಪಟ್ಟರು.
ಕುಂದಾಪುರದ ಮೂಕಾಂಬಿಕಾ ಮಹಿಳಾ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಜಯಂತಿ ಎನ್. ಐತಾಳ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಸರಕಾರಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಐ. ವಸಂತ ಕುಮಾರಿ, ಕೊಲ್ಲೂರು ಡಾಟ್.ಕಾಂನ ಸಂಯೋಜಕಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್, ಖಂಬದಕೋಣೆ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ನಾಗಮ್ಮ ದೇವಾಡಿಗ ಗೊಬ್ರಾಣಿಮನೆ ಮುಖ್ಯ ಅತಿಥಿಗಳಾಗಿದ್ದರು. `ಪ್ರೀತಿ ಸೇವಾ ಫೌಂಡೇಶನ್’ ಇದರ ಉಪಕೋಶಾಧಿಕಾರಿ ಜಾನಕಿ ಪೂಜಾರಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಟ್ರಸ್ಟಿ ಬೇಬಿ ರಂಗ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಅರಸಿನ ಕುಂಕುಮದ ಮಹತ್ವದ ಬಗ್ಗೆ ವಿವರಣೆ ನೀಡಿದರು. ಆಡಳಿತ ವಿಶ್ವಸ್ಥ ರಂಗ ಎಸ್. ಪೂಜಾರಿ ಅತಿಥಿಗಳನ್ನು ಗೌರವಿಸಿದರು. ಟ್ರಸ್ಟಿ ನಾಗರಾಜ ಅಪ್ಪೇಡಿ ವಂದಿಸಿದರು. ಉಪಕಾರ್ಯದರ್ಶಿ ಸುರೇಶ್ ವಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.
ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅರಸಿನ ಕುಂಕುಮ, ನೆನಪಿನಕಾಣಿಕೆ, ಅನ್ನ ಪ್ರಸಾದ ನೀಡಲಾಯಿತು.
(ಸಭಾ ಕಾರ್ಯಕ್ರಮ)
ತೊಡಕುಗಳನ್ನು ಸವಾಲಾಗಿ ಸ್ವೀಕರಿಸಿ-ಕೆ.ಪ್ರತಾಪಚಂದ್ರ ಶೆಟ್ಟಿ
ಬೈಂದೂರು: ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ದುಡಿಯುವವರಿಗೆ ಹತ್ತಾರು ತೊಡಕುಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಿನಂತೆ ಸ್ವೀಕರಿಸಿ ಮುನ್ನುಗ್ಗಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ಫಲಾಪೇಕ್ಷೆ ನುಸುಳದಿದ್ದರೆ ಮಾತ್ರ ಅವುಗಳು ಸೇವೆ ಎನಿಸುತ್ತವೆ. ಕಂಬದಕೋಣೆಯ `ಪ್ರೀತಿ ಸೇವಾ ಸಂಸೆ’್ಥ ಸಮುದಾಯದ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ತೋರುತ್ತಿರುವ ಕಾಳಜಿ ಅನುಕರಣೀಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಕಂಬದಕೋಣೆ ಪ್ರೀತಿ ಸೇವಾಪೌಂಡೇಶನ್ನ 2ನೇ ವಾರ್ಷಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಯಕ್ಷಗಾನ ಭಾಗವತ ಸುಬ್ರಮಣ್ಯ ಧಾರೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೇವಾ ಕಾರ್ಯದಲ್ಲಿ ಹೊಂದಿರುವ ಪ್ರೀತಿಗೆ ಸಮಾನವಾದ ತೃಪ್ತಿ ಮಾಡಿದವನಿಗೆ ಲಭಿಸುತ್ತದೆ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ , ಹಾಲಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ ಅಧ್ಯಕ್ಷ ರಾಜೇಶ ದೇವಾಡಿಗ, ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ನಾವುಂದ ಶುಭದಾ ಆಂಗ್ಲಮಾಧ್ಯಮ ಶಾಲೆ ಸಂಸ್ಥಾಪಕ ಡಾ.ಎನ್.ಕೆ.ಬಿಲ್ಲವ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಾಕಬ್ ಡಿ`ಸೋಜಾ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಅಂತಾರಾಷ್ಟ್ರೀಯ ಮಟ್ಟದ ಅತ್ಲೆಟ್ ಶಂಕರ್ ಪೂಜಾರಿ ಕಾಡಿನತಾರು ಅವರಿಗೆ 2016ನೇ ಸಾಲಿನ ಪ್ರೀತಿಯ `ಸಾಧನಶ್ರೀ’ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮತ್ತು ಎತ್ತರ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಅಕ್ಷತಾ ಪೂಜಾರಿ ಗುಡ್ಡಿಮನೆ, ಅಂತಾರಾಷ್ಟ್ರ ಮಟ್ಟದ ಗಣಿತ ಪ್ರತಿಭೆ ವಿಘ್ನೇಶ್ ಶ್ರೀಧರ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಿಪಂ ಹಾಲಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಮಹೇಂದ್ರ ಪೂಜಾರಿ ಅವರನ್ನು ಗೌರವಿಸಲಾಯಿತು. ಕಂಬದಕೋಣೆ ಗ್ರಾಪಂ ಹಾಲಿ ಸದಸ್ಯರುಗಳನ್ನು ಮತ್ತು ನಾವುಂದ ಗ್ರಾಪಂ. ಸದಸ್ಯ ರಾಮ ಪೂಜಾರಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಅಂಗ ವೈಕಲ್ಯಕ್ಕೊಳಗಾಗಿರುವ ಕಂಬದಕೋಣೆಯ ಬಟ್ರಹಿತ್ಲು ಸುರೇಶ ದೇವಾಡಿಗ ಮತ್ತು ಪಡುವಾಯಿನಮನೆ ನಾಗರಾಜ ದೇವಾಡಿಗರಿಗೆ ನೆರವು ವಿತರಣೆ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಿತು. ಸಂಸ್ಥೆಯ ಆಡಳಿತ ವಿಶ್ವಸ್ಥ ರಂಗ ಎಸ್. ಪೂಜಾರಿ, ಉಪಾಧ್ಯಕ್ಷ ಚಂದ್ರ ಅಮೀನ್ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳಾದ ಕೃಷ್ಣ ಪೂಜಾರಿ, ಸಂತೋಷ ಪೂಜಾರಿ, ಸುರೇಶ ವಿ.ಕೆ., ಜಾನಕಿ ಪೂಜಾರಿ, ನಾಗರಾಜ ಅಪ್ಪೇಡಿ, ರಾಮ ಪೂಜಾರಿ ನಾಯ್ಕನಕಟ್ಟೆ, ರಾಮ ಪೂಜಾರಿ ನಾವುಂದ, ಭಾಸ್ಕರ ಪೂಜಾರಿ ಬಳ್ಕೂರು, ಲಕ್ಷ್ಮಣ ಕೊಡೇರಿ, ಬೇಬಿ ರಂಗ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯ ಮತ್ತು ಸದಸ್ಯೆಯರು ಉಪಸ್ಥಿತರಿದ್ದರು.
ಸ್ಥಳೀಯ ಪುಟಾಣಿಗಳಿಂದ ನಾಟ್ಯ ವೈವಿದ್ಯ, ಮುಂಬಯಿಯ ಅಂಕಿತಾ ನಾಯಕ್, ಸೌಜನ್ಯಾ ಬಿಲ್ಲವ ಮತ್ತು ಪೃಥ್ವಿ ಸುಧಾಕರ ಪುಜಾರಿಯವರಿಂದ ನೃತ್ಯತರಂಗ ಹಾಗೂ ಜಾನಪದ ನೃತ್ಯ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ಭಾಗವತ ಸುಬ್ರಮಣ್ಯ ಧಾರೇಶ್ವರ ಮತ್ತು ಬೈಂದೂರು ರಿದಂ ಡ್ಯಾನ್ಸ್ ಸಂಸ್ಥೆಯ ನಾಗೇಂದ್ರ ದೇವಾಡಿಗ ತೀರ್ಪುಗಾರರಾಗಿ ಭಾಗವಹಿಸಿದ್ದರು. ಅನುಶಾ, ಶಾಂತಿ, ಜ್ಯೋತಿ ಪ್ರಾರ್ಥನೆ ಗೈದರು. ಸಂಸ್ಥೆಯ ಟ್ರಸ್ಟಿ ನಾಗರಾಜ ಅಪ್ಪೆಡಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಇನ್ನೊಬ್ಬ ಟ್ರಸ್ಟಿ ಸುರೇಶ ವಿ.ಕೆ. ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಚಂದ್ರ ಅಮಿನ್ ವಂದಿಸಿದರು. ಶಿಕ್ಷಕ ಸುಬ್ರಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.


