ಮುಂಬಯಿ, ಮೇ.24: ಕಳೆದ ಸೋಮವಾರ ದೈವಕ್ಯರಾದ ಮಂಗಳೂರು ಉಳ್ಳಾಲ ಸನಿಹದ ಕೋಟೆಕರ್ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಸ್ವಾಮೀಜಿ ಶ್ರೀ ಶ್ರೀ ಜಗದ್ಗುರು ರಾಜಯಾಗಿ ರಾಮನಂದ ಸ್ವಾಮೀಜಿ ಅವರಿಗೆ ಜಗದ್ಗುರು ರಾಮನಂದಶ್ರಮ ಸೇವಾ ಸಮಿತಿ ಮುಂಬಯಿ ಇದರ ಸರ್ವ ಪದಾಧಿಕಾರಿಗಳು ಮತ್ತು ಸರ್ವ ಸಮಿತಿಯ ಸದಸ್ಯರು ಹಾಗೂ ಭಕ್ತ ವೃಂದ ಸಂತಾಪ ಸೂಚಿಸಿದ್ದಾರೆ.

Koolya Sri Ramananda Swamiji-Photo

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ದೇವಾಡಿಗರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಭಂಡಾರಿ ಮಹಾ ಮಂಡಲ ಸ್ಥಾಪಕ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಬಿಲ್ಲವರ ಜಾಗ್ರತಿ ಬಳಗ ಮುಂಬಯಿ ಇದರ ಅಧ್ಯಕ್ಷ ಎನ್.ಟಿ.ಪೂಜಾರಿ, ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಉಪಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಭಂಡಾರಿ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ನ್ಯಾ| ಶೇಖರ್ ಪಿ.ಭಂಡಾರಿ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಕೆ.ಎಂ ಕೋಟ್ಯಾನ್, ಮೋಹಿಸಿ ರಾಜ ಶೆಟ್ಟಿ ಸಾಕಿನಾಕ, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ನೂರಾರು ಭಕ್ತಾಭಿಮಾನಿಗಳು ಸಂತಾಪ ಸೂಚಿಸಿ ಶ್ರೀಗಳ ಅಸ್ತಂಗತದಿಂದ ಶೋಕತಃಪ್ತ ಆಗಿರುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *