ಉಳಿತಾಯಕ್ಕೆ ಬ್ಯಾಂಕ್‍ಗಳೇ ಭದ್ರತೆಯಾಗಿವೆ: ಶಾರದಾ ಐಪಿಎಸ್
ಮುಂಬಯಿ, ಮೇ.28: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ `ಉತ್ಕೃಷ್ಟ ಬ್ಯಾಂಕ್’ ಪುರಸ್ಕೃತ ಹಾಗೂ ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್’ಸ್‍ನಿಂದ `ಶ್ರೇಷ್ಠ ಬ್ಯಾಂಕ್’ ಪ್ರಶಸ್ತಿ ವಿಜೇತ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ 17ನೇ ನೂತನ ಶಾಖೆಯು ಇಂದಿಲ್ಲಿ ಶನಿವಾರ ಪೂರ್ವಾಹ್ನ ಪಾಲ್ಘಾರ್ ಪಶ್ಚಿಮದ ಗಿರೀಶ್ ನಗರ್ ಮುಂಭಾಗದಲ್ಲಿನ ರಾಮ್ ಶ್ರೀ ವರ್ಮ ಕಾಂಪ್ಲೆಕ್ಸ್‍ನಲ್ಲಿ ಉದ್ಘಾಟಿಸಲ್ಪಟ್ಟಿತು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಘಾರ್ ಪಶ್ಚಿಮದ ನೇಟಿವ್ಹಿಟಿ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಜೇಮ್ಸ್ ಡಿ’ಸಿಲ್ವಾ ಧಾರ್ಮಿಕ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ಮುಖ್ಯ ಅತಿಥಿüಯಾಗಿ ಉಪಸ್ಥಿತ ಪಾಲ್ಘಾರ್ ಜಿಲ್ಲಾ ಪೆÇೀಲಿಸ್ ಆಯುಕ್ತೆ ಶಾರದಾ ರಾವುತ್ (ಐಪಿಎಸ್) ರಿಬ್ಬನ್ ಕತ್ತರಿಸಿ ಶಾಖೆಯನ್ನು ಸೇವಾರ್ಪಣೆಗೈದರು.

ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಮಹಾರಾಷ್ಟ್ರ ರಾಜ್ಯದ ಪಾಲ್ಘಾರ್‍ನ ಮಾಜಿ ಉಸ್ತುವರಿ ಸಚಿವ ರಾಜೇಂದ್ರ ಗಾವಿತ್ ಮತ್ತು ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಜೆ.ಸಿಕ್ವೇರಾ, ಉಸ್ತುವರಿ ನಿರ್ದೇಶಕ ತೋಮಸ್ ಡಿ.ಲೋಬೊ ವೇದಿಕೆಯಲ್ಲಿ ಆಸೀನರಾಗಿದ್ದರು.

Model Bank-17th Palghar West-A1

Model Bank-17th Palghar West-1

Model Bank-17th Palghar West-5

Model Bank-17th Palghar West-6

Model Bank-17th Palghar West-7

Model Bank-17th Palghar West-10

Model Bank-17th Palghar West-11

Model Bank-17th Palghar West-12

Model Bank-17th Palghar West-14

Model Bank-17th Palghar West-18

Model Bank-17th Palghar West-19

 

Model Bank-17th Palghar West-A2

ಶಾರದಾ ರಾವುತ್ “ಗ್ರಾಹಕರ ವಿಶ್ವಾಸನೀಯ ಸಹಯೋಗ ಬ್ಯಾಂಕಿನ ಶ್ರೇಯಸ್ಸಿಗೆ ಸ್ಫೂರ್ತಿಯಾಗಿದೆ. ಭವಿಷ್ಯತ್ತಿನ ಬದುಕನ್ನು ಮನಗಂಡು ಅನನ್ಯ ಪರಿಶ್ರಮದ ಮೂಲಕ ಜೀವನವನ್ನೇ ಮುಡುಪಾಗಿರಿಸಿ ಜನರು ಗಳಿಸುತ್ತಾರೆ. ಅವರ ಆದಾಯ ಮತ್ತು ಉಳಿಸುವಿಕೆಯ ಹಣಕ್ಕೆ ಬ್ಯಾಂಕ್‍ಗಳೇ ಭದ್ರತೆಯಾಗಿದೆ. ಇಂತಹ ವಿಶ್ವಾಸಕ್ಕೆ ಬ್ಯಾಂಕ್‍ಗಳು ಸುರಕ್ಷತೆಯ ರಕ್ಷಕರಾಗಬೇಕು. ಜನಸಾಮಾನ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಯೋಗವನ್ನೀಡಬೇಕು. ಇಂತಹ ಸಂಬಂಧಗಳಿಂದ ಬ್ಯಾಂಕ್ ಹಾಗೂ ಜನತೆಯೆ ವಿಕಾಸ ಸಾಧ್ಯ. ನಾವೀನ್ಯ ಮತ್ತು ತಾಂತ್ರಿಕ ಸುಧಾರಣಾ ಯತ್ನಗಳ ಮುಖೇನ ಸೇವೆ ಸಲ್ಲಿಸುವುದರೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿ ಸೇವಾ ಬದ್ಧತರಾಗಿ ಬ್ಯಾಂಕನ್ನು ಮುನ್ನಡೆಸಿ” ಎಂದು ಹಾರೈಸಿದರು.

ಗಾವಿತ್ ಮಾತನಾಡಿ `ಶಿಸ್ತು ಬದ್ಧತೆ ಮೋಡೆಲ್ ಬ್ಯಾಂಕ್‍ನ ವಿಶೇಷತೆಯಾಗಿದೆ. ಯಾವುದೇ ಬ್ಯಾಂಕ್ ತನ್ನ ಸೇವೆ ಮತ್ತು ನಿಷ್ಪಕ್ಷತೆಯಿಂದ ಮುನ್ನಡೆಯಲು ಸಾಧ್ಯ. ಜಾಗತೀಕರಣದಿಂದಾಗಿ ದೇಶದಲ್ಲಿ ಅಂತರಾಷ್ಟ್ರೀಯ ಬ್ಯಾಂಕುಗಳು ಶೀಘ್ರಗತಿಯಲ್ಲಿ ಬೆಳೆದು ಹಣಕಾಸು ಕ್ಷೇತ್ರÀದಲ್ಲಿ ಅನನ್ಯ ಬದಲಾವಣೆ ಕಂಡರೂ ಇದು ಸಹಕಾರಿ ಬ್ಯಾಂಕುಗಳಿಗೆ ಅಡ್ಡಿಯಾಗಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಪೈಪೆÇೀಟಿ ನಡೆಯುತ್ತಿದ್ದರೂ ಬಡ ಮತ್ತು ಮಧ್ಯಮ ಹಾಗೂ ಕಾರ್ಮಿಕ ವರ್ಗದ ಜನತೆಯಿಂದ ಸಹಕಾರಿ ಬ್ಯಾಂಕುಗಳು ಇನ್ನಷ್ಟು ಬಲಯುತವಾಗಿದೆ. ರಾಷ್ಟ್ರದ ಸಹಕಾರಿ ಕ್ಷೇತ್ರದಲ್ಲಿ ಮೋಡೆಲ್ ಬ್ಯಾಂಕ್ ಸಾಧನೆ ಗಣನೀಯವಾಗಿದ್ದು, ಗ್ರಾಹಕರ ಸಂತೃಪ್ತಿ ಹಾಗೂ ಪರಿಪೂರ್ಣತೆಯಿಂ ದ ಬ್ಯಾಂಕ್ ಮುನ್ನಡೆ ಸಾಧಿಸಿಸಲಿ’ ಎಂದರು.

“ಈ ಶಾಖೆಯು ಸ್ಥಾನೀಯ ಜನತೆಗೆ ಅಭಿಮಾನಪೂರ್ವಕ ಕೊಡುಗೆ ಆಗಿದೆÉ. ಮಹಾನಗರದಿಂದ ಗ್ರಾಮೀಣದತ್ತ ಸೇವೆ ವಿಸ್ತಾರಿಸಿದ ಬ್ಯಾಂಕ್ ಇಲ್ಲಿನ ಜನತೆಯ ಸೇವೆಗಳನ್ನು ಪೂರೈಸಲಿ. ಒಂದೆಡೆ ಬ್ಯಾಂಕ್ ಅಭಿವೃದ್ಧಿ ಗೊಂಡಂತೆಯೇ ಪಾಲ್ಘಾರ್ ಕೂಡಾ ಪ್ರಗತಿ ಹೊಂದಲಿ” ಎಂದÀು ಫಾ| ಜೇಮ್ಸ್ ಡಿ’ಸಿಲ್ವಾ ಹಾರೈಸಿದರು.

ಜೋನ್ ಡಿ’ಸಿಲ್ವಾ ಮಾತನಾಡಿ `ನಾವು ಕರ್ಮಭೂಮಿ ಬೃಹನ್ಮುಂಬಯಿಯಲ್ಲಿ ಬ್ಯಾಂಕನ್ನು ಸ್ಥಾಪಿಸಿ ಇದೀಗ ಮಹಾರಾಷ್ಟ್ರದಾದ್ಯಂತ ಶಾಖೆಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಅದರ ಭಾಗವೇ ಈ ಶಾಖೆಯಾಗಿದೆ. ತಾವೆಲ್ಲರೂ ಗ್ರಾಹಕರಾಗಿ ಬ್ಯಾಂಕ್ ಜೊತೆ ಭಾಗಿಗಳಾಗಿ ಹಣಕಾಸು ಮಾಲಕರಾಗಿರಿ. ನಮ್ಮ ಸೇವೆಯ ತೃಪ್ತಿಯನ್ನು ಅನುಭವಿಸಿರಿ. ತಮ್ಮೆಲ್ಲರ ಸಹಭಾಗಿತ್ವದಿಂದಲೇ ನಮ್ಮನಿಮ್ಮೆಲ್ಲರ ವಿಕಾಸ ಸಾಧ್ಯ. ವೈಯಕ್ತಿಕ ಪ್ರಗತಿ ಮತ್ತು ವ್ಯವಹಾರಿಕ ಉನ್ನತಿಗಾಗಿ ಬ್ಯಾಂಕ್‍ನ ಫಲಾನುಭವ ಪಡೆಯಿರಿ. ಶಾಖೆಯ ತೆರವಿನ ಅವಕಾಶಕ್ಕಾಗಿ ಅಭಾರಿಗಳಾಗಿದ್ದೇವೆÉ”ಎಂದರು.

ಇದೊಂದು ಸುರಕ್ಷಿತ ಬ್ಯಾಂಕ್ ಎಂದೇ ಕರೆಯಲ್ಪಡುವ ಮಧ್ಯಮ ವರ್ಗದ ಜನತೆಯ ಬ್ಯಾಂಕ್ ಆಗಿದೆ. ಹತ್ತಾರು ರಾಷ್ಟ್ರೀಕೃತ ಬ್ಯಾಂಕ್‍ಕ್ಕಿಂತ ಪ್ರಾಚೀನ ಬ್ಯಾಂಕ್ ಕೂಡಾ ಹೌದು. ಇತ್ತೀಜೆಗಷ್ಟೇ ಶತಮಾನ ಸಂಭ್ರಮಿಸಿದ ಈ ಬ್ಯಾಂಕ್ ಜನಪರ ನಿಲುವು ಹೊಂದಿದೆ. ಸಾಂಸ್ಕೃತಿಕ ಅನನ್ಯತೆ ಮತ್ತು ನೈತಿಕ ಮೌಲ್ಯಗಳ ಪಾಲನೆಯೇ ಈ ಬ್ಯಾಂಕ್‍ನ ಧೋರಣೆಯಾಗಿದ್ದು, ಅವುಗಳ ಪರಂಪರೆಯನ್ನು ಕಾಯ್ದುಕೊಂಡು ಮುನ್ನಡೆಯುತ್ತಿದ್ದೇವೆ. ಗ್ರಾಹಕ ಫಲಾನುಭವಿ ಗಳಿಗೆ ಸ್ವಂತಿಕೆಯ ಭದ್ರತೆಯ ಸೂರು ಒದಗಿಸಿ ಗ್ರಾಹಕರ ಆಥಿರ್üಕ ರಕ್ಷಣೆಯ ಮನೋಬಲವನ್ನು ಬಲಪಡಿಸಿದೆ ಆದುದರಿಂದ ಸಾಧನೀಯ ಯೋಜನೆಗಳು ಇಂದೂ ಶಾಸ್ವತವಾಗಿ ಪರಿಣಮಿಸಿದೆ. ಸ್ಪರ್ಧಾತ್ಮಕ ಯುಗದಲ್ಲಿ ಆತ್ಮ ವಿಶ್ವಾಸವೇ ಪ್ರಮುಖವಾದದ್ದು. ಇಂತಹ ಕ್ರಿಯಾತ್ಮಕ ದೃಷ್ಠಿಕೋನ ಇರಿಸಿ ಬ್ಯಾಂಕ್ ಮಂಡಳಿ ಮತ್ತು ನೌಕರವೃಂದದ ನಿಷ್ಕಾಲಂಕ ಸೇವೆಯಿಂದ ಬ್ಯಾಂಕ್‍ನ ಮುನ್ನಡೆ ಸಾಧ್ಯವಾಗಿದೆ. ಇದರ ಫಲಾನುಭ ಪಡೆಯುವ ಜವಾಬ್ದಾರಿ ಇಲ್ಲಿನ ಜನತೆಯದ್ದಾಗಲಿ” ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಆಲ್ಬರ್ಟ್ ಡಿ’ಸೋಜಾ ಕರೆಯಿತ್ತರು.

ತೋಮಸ್ ಲೋಬೊ ಮಾತನಾಡಿ `ಸಹಕಾರಿರಂಗದಲ್ಲಿ ಗುರುತರವಾದ ಸೇವೆಗೆ ಪಾತ್ರವಾದ ಈ ಬ್ಯಾಂಕ್ ಪರಿಸರದ ರವಿವಾಸಿಗಳ ಸೇವೆಗೆ ಸನ್ನದ್ಧಗೊಳಿಸಿದೆ. ಹೆಸರಿನಿಂದಲೇ ಈ ಬ್ಯಾಂಕ್‍ನ ಸೇವೆ ತಿಳಿದುಕೊಳ್ಳಬಹುದು. ಪ್ರಸಕ್ತ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ’ಸೋಜಾರ ದೂರದೃಷ್ಠಿತ್ವ ಹಾಗೂ ವ್ಯಕ್ತಿಗತ ಸ್ಪರ್ಶವೇ ಬ್ಯಾಂಕ್‍ನ ಶೀಘ್ರಗತಿಯ ಹಿಂದಿನ ಶಕ್ತಿಯಾಗಿದ್ದು, 17ನೇ ಶಾಖೆಯ ಸೇವಾರ್ಪಣೆಗೆ ಕಾರಣವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಬೆನೆಡಿಕ್ಟಾ ಬಿ.ರೆಬೆಲ್ಲೋ, ವಿನ್ಸೆಂಟ್ ಮಥಾಯಸ್, ಪೌಲ್ ನಝರೆತ್, ಸಂಜಯ್ ಶಿಂಧೆ, ನ್ಯಾ| ಪಿಯುಸ್ ವಾಸ್, ಮಾರಿಟಾ ಡಿ’ಮೆಲ್ಲೋ, ಅಬ್ರಹಾಂ ಕ್ಲೇಮೆಂಟ್ ಲೊಬೋ, ಕಟ್ಟಡ ಮಾಲೀಕ ಜಯಂತಿಲಾಲ್ ಶಪರಿಯಾ, ಎಲ್ವೀನಾ ಎ.ಡಿ’ಸೋಜಾ ಜೆಸಿಂತಾ ವಿ.ಸಿಕ್ವೇರಾ, ನ್ಯಾಯವಾದಿ ಆನಂದ್ ನಾಘೆ, ಆರ್ಕಿಟೆಕ್ ಮಹೇಂದ್ರ ಕಾಳೆ, ಚಂದ್ರಕಾಂತ್ ಪಾಟೀಲ್ ಸೇರಿದಂತೆ ಸ್ಥಳೀಯ ಗ್ರಾಹಕರನೇಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭೇಚ್ಛ ಕೋರಿದರು.

ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್. ಡಿ’ಸೋಜಾ ಹಾಗೂ ಹೆಚ್ಚುವರಿ ಪ್ರಧಾನ ಪ್ರಬಂಧÀಕ ಹರೋಲ್ಡ್ ಎಂ.ಸೆರಾವೋ ಅತಿಥಿüಗಳಿಗೆ ಪುಷ್ಫಗುಪ್ಚವನ್ನೀಡಿ ಅಭಿವಂದಿಸಿದರು. ಡೈನಾ ಫೆರ್ನಾಂಡಿಸ್ ಬೈಬಲ್ ವಾಚಿಸಿದರು. ಎಡ್ವರ್ಡ್ ರಸ್ಕೀನ್ಹಾ ಕಾರ್ಯಕ್ರಮ ನಿರೂಪಿಸಿದರು. ಪಾಲ್ಘಾರ್ ಪಶ್ಚಿಮ ಶಾಖಾ ಪ್ರಬಂಧಕ ಭರತ್ ದೆಹೆರ್ಕರ್ ಅಭಾರ ಮನ್ನಿಸಿದರು.

By suddi9

Leave a Reply

Your email address will not be published. Required fields are marked *