ಬಂಟ್ವಾಳ: ಜನಪ್ರತಿನಿಧಿಗಳು, ಸಾರ್ವಜನಿಕರು ಸಮಸ್ಯೆಗಳಿಗೆ ಸಂಬಂಧಿಸಿ ಕರೆ ಮಾಡಿದಾಗ ಇದಕ್ಕೆ ಅಧಿಕಾರಿಗಳು ಉದಾಸಿನ ತೋರದೆ ತುರ್ತಾಗಿ ಸ್ಪಂದಿಸುವ ಮೂಲಕ ಕಾರ್ಯ ದಕ್ಷತೆ ಮೆರೆಯಬೇಕೆಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ತಾಕೀತು ಮಾಡಿದ್ದಾರೆ.
ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸೋಮವಾರ ಬಿ.ಸಿ.ರೋಡಿನ ಎಸ್ಜಿಎಸ್ಆರ್ವೈ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯತ್ನ ಪ್ರಥಮ ಸಾಮಾನ್ಯ ಸಭೆಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಎಲ್ಲವನ್ನು ಕಾನೂನಿನ ದೃಷ್ಟಿಯಲ್ಲೇ ನೋಡದೆ ಅದರ ಹೊರತಾಗಿ ಜನ ಸಾಮಾನ್ಯರ ಹಿತ ದೃಷ್ಟಿಯಿಂದ ಸಮಸ್ಯೆಯನ್ನು ಪರಿಹರಿಸುವ ದೆಸೆಯಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದ ಅವರು, ಬಂಟ್ವಾಳ ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕು ಪಂಚಾಯತ್ ಆಗಿ ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಸದಸ್ಯರು ಆಡಳಿತದೊಂದಿಗೆ ಕೈ ಜೋಡಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಮುಂದಿನ ಸಭೆಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಸದಸ್ಯರಿಗೆ ತಮ್ಮ ಇಲಾಖೆಯಲ್ಲಾದ ಪ್ರಗತಿಯ ಬಗ್ಗೆ ಪಾಲನಾ ವರದಿಯನ್ನು ಖಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಸದಸ್ಯರು ಕೇಳುವ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡದೆ ಸ್ಪಷ್ಟವಾದ ಮಾಹಿತಿ ನೀಡಬೇಕೆಂದರು.
ಧನಲಕ್ಷ್ಮೀ ಅಧ್ಯಕ್ಷೆ: ತಾಲೂಕು ಪಂಚಾಯತ್ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆಯಾಗಿ ಮಾಜಿ ಜಿಪಂ ಸದಸ್ಯೆಯೂ ಆದ ಧನಲಕ್ಷ್ಮೀ ಬಂಗೇರ ಅವರು ಅವಿರೋಧವಾಗಿ ಆಯ್ಕೆಯಾದರು. ಇದೇ ವೇಳೆ ತಾಲೂಕು ಪಂಚಾಯತ್ ಸಭೆಗೆ ಭಾಗವಹಿಸಲು ತಾಲೂಕಿನ 12 ಗ್ರಾಮ ಪಂಚಾಯತ್ಗಳ ಅಧ್ಯಕ್ಷರನ್ನು ಚೀಟಿ ಎತ್ತುವ ಮೂಲಕ ಆಯ್ಕೆಗೊಳಿಸಲಾಯಿತು. ಸಂಗಬೆಟ್ಟು, ಪಂಜಿಕಲ್ಲು, ಪಿಲಾತಬೆಟ್ಟು, ಮೇರಮಜಲು, ಗೋಳ್ತಮಜಲು, ಸಜಿಪಮೂಡ, ನರಿಕೊಂಬು, ಅನಂತಾಡಿ, ಕರಿಯಂಗಳ, ವೀರಕಂಬ, ನರಿಂಗಾಣ, ಪುಣಚ ಈ ಗ್ರಾಪಂನ ಅಧ್ಯಕ್ಷರುಗಳಿಗೆ ಮುಂದಿನ ಒಂದು ವರ್ಷದ ಅವಧಿಗೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಆಯ್ಕೆಮಾಡಲಾಯಿತು.
ಆಡಳಿತ ಪಕ್ಷದ ಸದಸ್ಯ ಗರಂ: ತಾಲೂಕು ಪಂಚಾಯತ್ ಹಿರಿಯ ಸದಸ್ಯ, ಮಾಜಿ ಉಪಾಧ್ಯಕ್ಷ ಉಸ್ಮಾನ್ ಕರೋಪಾಡಿಯವರು ಮೊದಲ ಸಾಮಾನ್ಯ ಸಭೆಯಲ್ಲೇ ಆಡಳಿತ ಪಕ್ಷದ ವಿರುದ್ಧ ಗರಂ ಆದ ಪ್ರಸಂಗವೂ ನಡೆಯಿತು. ಹೊಸ ಆಡಳಿತ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಸಭಾಂಗಣದ ಮೈಕ್ನ ವ್ಯವಸ್ಥೆ ಸರಿಪಡಿಸದಿರುವುದು ಸೇರಿದಂತೆ ಸಣ್ಣ ಪುಟ್ಟ ವಿಚಾರಗಳಿಗೂ ಅವರು ಅಧಿಕಾರಿಗಳ ವಿರುದ್ಧ ಕಿಡಿ ಕಿಡಿ ಮಾಡಿದರು.
182 ವಿದ್ಯಾಥರ್ಿಗಳ ಆಯ್ಕೆ: ತಾಲೂಕಿನಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅಜರ್ಿ ಸಲ್ಲಿಸಿದವರ ಪೈಕಿ ಮೊದಲ ಹಂತದಲ್ಲಿ 182 ವಿದ್ಯಾಥರ್ಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಆದಂ ಕುಂಞಿ, ಜಿ.ಪಂ.ಸದಸ್ಯೆ ಮಮತಾ ಗಟ್ಟಿಯವರು, ಆರ್ಟಿಐ ವಿಚಾರದಲ್ಲಿ ತಾಲೂಕಿನ ಹಲವು ಪೋಷಕರಲ್ಲಿ ಇನ್ನೂ ಗೊಂದಲಗಳು ಇವೆ, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಳಜಿಯಿಂದ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದರು. ಇದೇ ವೇಳೆ ತಾಲೂಕಿಗೆ ಶೇಕಡ 90ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿದ್ದು, ಈಗಾಗಲೇ ಶಾಲೆಗಳಿಗೆ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.
ಸೂಕ್ತ ಪರಿಹಾರ ನೀಡಿ: ಕಳೆದ ವಾರ ಬಂಟ್ವಾಳ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಡಿ ಕೃಷಿ ಹಾನಿಯಾದವರಿಗೆ ಸಕರ್ಾರದಿಂದ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಜಿ.ಪಂ.ಸದಸ್ಯೆ ತುಂಗಪ್ಪ ಬಂಗೇರ ಆರೋಪಿಸಿದರಲ್ಲದೆ ಪರಿಹಾರ ಧನ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈ ಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕಾ ಅಧಿಕಾರಿ ದಿನೇಶ್, ಕಂದಾಯ ಇಲಾಖೆ ಮೂಲಕ ಈಗಾಗಲೇ 120 ಅಜರ್ಿಗಳು ಬರುವ ನಿರೀಕ್ಷೆ ಇದ್ದು, ಈಗಾಗಲೇ ಬಂದಿರುವಂತಹ ಅಜರ್ಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ, 125 ಕೃಷಿ ಹಾನಿ, 10 ಸಾವಿರಕ್ಕೂ ಹೆಚ್ಚು ಅಡಿಕೆ ಮರ, 300 ಕ್ಕೂ ಹೆಚ್ಚು ತೆಂಗಿನ ಮರಗಳಿಗೆ ಹಾನಿಯಾಗಿರುವ ಪ್ರಕರಣ ನಡೆದಿರುವ ಬಗ್ಗೆ ಮಾಹಿತಿ ಇದೆ. ಈ ಕುರಿತಂತೆ ಸಂತ್ರಸ್ತರಿಗೆ ಪರಿಹಾರ ಧನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದರು.
ಇಂದು ಪೂರ್ಣ: ಅದೇ ರೀತಿ ತಾಲೂಕಿನಲ್ಲಿ ನರಿಕೊಂಬು ಗ್ರಾಮವೊಂದರಲ್ಲೇ ಅತೀ ಹೆಚ್ಚು ವಿದ್ಯುತ್ ಕಂಬಗಳು ಧರೆಶಾಯಿಯಾಗಿದ್ದು ಒಟ್ಟಾರೆಯಾಗಿ 550 ಕಂಬಗಳು ಹಾನಿಗೊಂಡಿದೆ. ಸಿಬ್ಬಂದಿಯ ಕೊರತೆ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಕೊಂಚ ವಿಲಂಭವಾಗಿದ್ದು, ಮಂಗಳೂರು ಮತ್ತು ಪುತ್ತೂರು ತಾಲೂಕಿನಿಂದ ಸಿಬ್ಬಂದಿಗಳನ್ನು ಕರೆಸಿ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಇಂದು ಸಂಜೆಯೊಳಗೆ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ವಿದ್ಯುತ್ ಮರು ಪೂರೈಕೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿ ಉಮೇಶ್ ಚಂದ್ರ ಸಭೆಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಅಬ್ಬಾಸ್ ಅಲಿ ವೇದಿಕೆಯಲ್ಲಿದ್ದರು. ಕಾರ್ಯನಿವರ್ಾಹಾನಾಧಿಕಾರಿ ಸಿಪ್ರಿಯನ್ ಮಿರಾಂದ ಅವರು ಕಾರ್ಯ ಕಲಾಪ ನಡೆಸಿಕೊಟ್ಟರು. ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾವಾರು ಮಾಹಿತಿ ನೀಡಿದರು. ಸದಸ್ಯರಾದ ಕುಮಾರ ಭಟ್, ಹೈದರ್, ರಮೇಶ್ ಕುಡ್ಮೇರು, ಪ್ರಭಾಕರ್ ಪ್ರಭು, ಸಂಜೀವ ಪೂಜಾರಿ, ಗಣೇಶ್ ಸುವರ್ಣ, ಮಲ್ಲಿಕ ವಿ. ಶೆಟ್ಟಿ, ಗಾಯತ್ರಿ ಸಪಲ್ಯ ಹಾಗೂ ಜಿಪಂ ಸದಸ್ಯರಾದ ಮಮತಾ ಗಟ್ಟಿ, ಮಂಜುಳ ಎಂ. ಮಾವೆ, ರವೀಂದ್ರ ಕಂಬಳಿ, ಪದ್ಮಶೇಕರ್ ಜೈನ್ ಮೊದಲಾದವರು ಚಚರ್ೆಯಲ್ಲಿ ಪಾಲ್ಗೊಂಡರು.
