ಬಂಟ್ವಾಳ: ಹೆಚ್ಚುತ್ತಿರುವ ಸೊತ್ತು ಕಳವು ಸರಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರನ್ನು ಎಚ್ಚರಿಸಲು ಬಂಟ್ವಾಳ ನಗರ ಪೋಲಿಸರು ಕೆಲವೊಂದು ಸುರಕ್ಷಾ ಸಲಹೆಗಳನ್ನೊಳಗೊಂಡ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.ದೇವಸ್ಥಾನ , ದೈವಸ್ತಾನ, ಬ್ಯಾಂಕುಗಳು , ವಾಣಿಜ್ಯ ಸಂಕೀರ್ಣ ,ಜ್ಯುವೆಲ್ಲರಿ ಮಳಿಗೆಗಳಿಗೆ ಸೈರನ್, ಸಿ.ಸಿ ಕೆಮರಾ ಅಳವಡಿಸುವುದರ ಜೊತೆಗೆ ಕಾವಲುಗಾರರನ್ನು ನೇಮಿಸಬೇಕು. ಹಾಗೆಯೇ ಛಾವಣಿಯನ್ನು ಭದ್ರಗೊಳಿಸಲು ಕ್ರಮಕೈಗೊಳ್ಳುವಂತೆ ಕರಪತ್ರದಲ್ಲಿ ಸೂಚಿಸಲಾಗಿದೆ.ಸಾರ್ವಜನಿಕರು ತಮ್ಮ ಅಮೂಲ್ಯ ವಸ್ತುಗಳನ್ನು ತಮ್ಮ ಆಭರಣಗಳನ್ನು ಸೂಕ್ತವಾದ ಬ್ಯಾಂಕ್ ಲಾಕರ್ ನಲ್ಲಿರಿಸಬೇಕು. ಮನೆಗೆ ಬೀಗ ಹಾಕಿ ಪ್ರಯಾಣಕ್ಕೆ ತೆರಳುವವೇಳೆ ಅಕ್ಕಪಕ್ಕದ ಮನೆಯವರಲ್ಲಿ ಮತ್ತು ಸ್ಥಳೀಯ ಪೋಲಿಸ್ ಠಾಣೆಗೂ ಮಾಹಿತಿ ನೀಡಬೇಕು.ವಾಹನಗಳಲ್ಲಿ ಸರ,ಬ್ಯಾಗ್ ಕಳ್ಳತನದ ಬಗ್ಗೆ ಎಚ್ಚರಿಕೆ ನೀಡುವ ಫಲಕವನ್ನು ಅಳವಡಿಸಬೇಕೆಂದು ನಗರಠಾಣೆಯ ಎಸ್.ಐ ನಂದಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *