ತೃಕ್ಕರೀಪುರ: ಚಂದೇರ ಪೊಲೀಸ್ ಠಾಣೆ ಬಳಿಯ ಮನೆಯೊಂದರ ಟೆರೇಸ್ ಮೇಲೆ ಸೋಮವಾರ ಬೆಳಗ್ಗೆ ಎರಡು ಸ್ಟೀಲ್ ಬಾಂಬ್ ಪತ್ತೆಯಾಗಿದೆ. ಕೊಲ್ಲಿ ರಾಷ್ಟ್ರ ಉದ್ಯೋಗಿ ಯಾಗಿರುವ ಎಂ.ಕೆ.ಮೊಹಮ್ಮದ್ ಕುಂಞಿ ಅವರ ಮನೆಯ ಟೆರೇಸ್‌ನಲ್ಲಿ ಈ ಬಾಂಬ್‌ಗಳು ಪತ್ತೆಯಾಗಿದೆ.
bomb
ಮೊಹಮ್ಮದ್‌ಕುಂಞಿ ಕೊಲ್ಲಿರಾಷ್ಟ್ರದಲ್ಲಿದ್ದು, ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದರಿಂದ ಮನೆಗೆ ಬೀಗ ಜಡಿದಿದೆ. ಎರಡು ವಾರಗಳಿಗೊಮ್ಮೆ ಮೊಹಮ್ಮದ್‌ಕುಂಞಿ ಅವರ ಸಹೋದರಿ ಮನೆಗೆ ಬಂದು ನೋಡಿ ತೆರಳುತ್ತಿದ್ದರು. ಈ ಮಧ್ಯೆ ಸೋಮವಾರ ಬೆಳಗ್ಗೆ ಮನೆಯ ಟೆರೇಸ್ ಮೇಲೆ ಪೈಂಟ್‌ನ ಡಬ್ಬದೊಳಗೆ ಮರಳು ತುಂಬಿಸಿ ಅದರಲ್ಲಿ ಬಾಂಬ್‌ಗಳನ್ನು ಇಟ್ಟಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಚಂದೇರಾ ಪೊಲೀಸ್ ಠಾಣಾಗೆ ಮಾಹಿತಿ ನೀಡಲಾಯಿತು. ನಂತರ ಪೊಲೀಸರು ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಆಗಮಿಸಿ ತನಿಖೆಗೆ ಕೈಗೊಂಡಿದೆ.

By suddi9

Leave a Reply

Your email address will not be published. Required fields are marked *