ಬಂಟ್ವಾಳ : ಮೂಡಬಿದ್ರೆಯ ವಿವಾಹ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಮಾಡುತ್ತಿದ್ದ ಶಿರ್ತಾಡಿಯ ಹರೀಶ್ ಎಂಬವರಿಗೆ ವಿನಾಕಾರಣ ಹಲ್ಲೆ ನಡೆಸಲಾಗಿದೆ. ಕರ್ತವ್ಯ ನಿರತ ಛಾಯಾಗ್ರಾಹಕನ ಮೇಲೆ ಏಕಾಏಕಿ ಹಲ್ಲೆ ನಡೆಸುವುದರೊಂದಿಗೆ ಅವರಿಗೆ ಮಾನಸಿಕವಾಗಿ ಆಘಾತ ನೀಡಿದ ಈಘಟನೆ ಖಂಡನೀಯ ದೈಹಿಕ ಹಲ್ಲೆಯೊಂದಿಗೆ ಪರಿಕರಗಳನ್ನು ಹಾನಿ ಮಾಡಿದ ಈ ಘಟನೆಯನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ನ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ತಿಳಿಸಿದ್ದಾರೆ. ಅಲ್ಲದೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲೀಸ್ ಅಧಿಕಾರಿಗಳಲ್ಲಿ ವಿನಂತಿಸಲಾಗಿದೆ.

