ಬಂಟ್ವಾಳ: ಸುಮಾರು ಒಂದು ಲಕ್ಷ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಚಿಕ್ಕಬಳ್ಳಾಪುರದ ವ್ಯಕ್ತಿಯೋರ್ವನನ್ನು ಬಂಟ್ವಾಳ ಪೋಲೀಸರು ಕಡೆಗೋಳಿಯಲ್ಲಿ ಮುಂಜಾನೆ ಬಂದಿಸಿದ್ದಾರೆ. ಈತನ ಬಳಿಯಿದ್ದ 1ಕೆಜಿ 230 ಗ್ರಾಂ. ಗಾಂಜಾ ವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿ ಚಿಕ್ಕಬಳ್ಳಾಪುರ ಜಿಲ್ಲೆಯ, ಚಿಂತಾಮಣಿ ತಾಲೂಕಿನ ದೊಡ್ಡಹಳ್ಳಿ ತಾಲೂಕಿನ ಸುರೇಶ್. ಬಂಟ್ವಾಳ ಗ್ರಾಮಾಂತರ ಪೋಲಿಸರು ಮುಂಜಾನೆಯ ವೇಳೆ ಮಾರಿಪಳ್ಳ ಸಮೀಪದ ಕಡೆಗೋಳಿ ಎಂಬಲ್ಲಿ ವಾಹನ ತಪಾಸಣೆ ಮಾಡುತಿದ್ದ ವೇಳೆ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತುಂಬೆ ಜಂಕ್ಸನ್‍ನಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವ ಸಂದರ್ಭ ಆರೋಪಿ ಸುರೇಶ್ ಪೋಲೀಸರನ್ನು ಕಂಡು ತುಂಬೆಯಿಂದ ಕಡೆಗೋಳಿ ಕಡೆಗೆ ಒಡಲಾರಂಬಿಸಿದ. ಅನುಮಾನಗೊಂಡ ಪೋಲೀಸರು ಈತನನ್ನು ಹಿಡಿದು ವಿಚಾರಿಸದಾಗ ಈತನ ಕೈಯಲ್ಲಿ ಗಾಂಜಾ ಪತ್ತೆಯಾಯಿತು. ಅಲ್ಲದೆ ಈತ ಮಾರಿಪಳ್ಳ, ಕಡೆಗೋಳಿ, ತುಂಬೆ, ಮೆಲ್ಕಾರ್, ಪರಂಗಿಪೇಟೆ ಹೀಗೆ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಿಗೆ ಗಾಂಜಾವನ್ನು ಮಾರಾಟಕ್ಕೆ ತರುತ್ತಿದ್ದ ಎಂದು ಹೇಳಿದ್ದಾನೆ. ಇದರ ಹಿಂದೆ ಗಾಂಜಾ ಮಾರಾಟದ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ, ಈ ಬಗ್ಗೆ ಪೋಲೀಸರ ವಿಚಾರಣೆಯ ಬಳಿಕವೇ ತಿಳಿಯಬೇಕಾಗಿದೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು ಅತನಿಗೆ 15 ದಿವಸಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ರಕ್ಷಿತ್ ಗೌಡ, ಎಚ್.ಸಿಗಳಾದ ಜನಾರ್ಧನ, ಲೋಕೇಶ್, ಕಾನ್ಸ್‍ಸ್ಟೇಬಲ್ ಸುರೇಶ್ , ನಜೀರ್ ಮತ್ತು ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು.

ಗಾಂಜಾದ ತವರು: ಮಾರಿಪಳ್ಳದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರು ಪ್ರತಿ ಬಾರಿಯೂ ಕೇಳಿ ಬರುತ್ತಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ನಡೆಯುತ್ತಿದ್ದ ಕೊಲೆ, ಕೊಲೆಯತ್ನ, ಹಲ್ಲೆಗಳಿಗೆ ಗಾಂಜಾ ಮಾಫಿಯಾವೇ ಪ್ರಮುಖ ಕಾರಣವಾಗತಿತ್ತು ಎನ್ನವುದು ಪೋಲೀಸ್ ಮೂಲಗಳಿಂದ ವರದಿಯಾಗಿತ್ತು. ಈ ಬಗ್ಗೆ ಪೋಲೀಸರು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರು ಅದು ಪ್ರಯೋಜನವಾಗಿಲ್ಲ. ಗಾಂಜಾ ಮಾರಾಟದ ಸಂತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಅದನ್ನು ತಡೆಯುವದಕ್ಕೆ ಪೋಲಿಸರು ಸಾಹಸ ಪಡುತ್ತಿದ್ದರು. ಸುರೇಶ್ನ ಬಂಧನ ಬಳಿಕ ಮಾರಿಪಳ್ಳ ಪರಿಸರಕ್ಕೆ ಹೊರಗಿನ ವ್ಯಕ್ತಿಗಳು ಗಾಂಜಾ ಸಪ್ಲಾಯಿ ಮಾಡುವದರ ಬಗ್ಗೆ ಪೋಲಿಸರಿಗೆ ಅರಿವಾಯಿತು. ಇನ್ನಾದರೂ ಪೋಲಿಸರು ಎಚ್ಚೆತ್ತು ಕೊಂಡು ಕೆಲಸ ಮಾಡಬೇಕಾಗಿದೆ.
