ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕ್ವಾಲೀಸ್ ವಾಹನವೊಂದು ಕಮರಿಗೆ ಉರುಳಿದ ಘಟನೆ ಕಲ್ಲಡ್ಕ – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಮೈರದಲ್ಲಿ ಭಾನುವಾರ ನಡೆದಿದೆ.
ಪುತ್ತೂರು ನಿವಾಸಿಗಳು ಮಡವೂರಿಗೆ ಹೋಗಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡಿದ್ದು, ಕ್ವಾಲೀಸ್‍ನಲ್ಲಿದ್ದ 6 ಮಂದಿಯೂ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಮಾತ್ರ ರಸ್ತೆಯಿಂದ ಸುಮಾರು 10 ಅಡಿ ಆಳಕ್ಕೆ ಉರುಳಿದೆ. ಭಾನುವಾರ ಬೆಳಗ್ಗೆ 3.30ರ ಸಮಯಕ್ಕೆ ನಡೆದಿದ್ದು, ಬೆಳಗ್ಗೆ ಸಾರ್ವಜನಿಕರ ಸಹಕಾರದಲ್ಲಿ ಪ್ರತ್ಯೇಕ ವಾಹನಕ್ಕೆ ಕಟ್ಟಿ ಹಳ್ಳದಿಂದ ವಾಹನವನ್ನು ಮೇಲಕ್ಕೆತ್ತಲಾಯಿತು.


