ಮೂಡುಬಿದಿರೆ: ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್‍ನ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯವಾಣಿ ಪ್ರತಿನಿಧಿ ಪತ್ರಕರ್ತ ಧನಂಜಯ ಮೂಡುಬಿದಿರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರೆಸ್ ಕ್ಲಬ್‍ನಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

mbd_may4_1
ಉಪಾಧ್ಯಕ್ಷರಾಗಿ ಜೇಸನ್ ತಾಕೋಡೆ, ( ಟೈಮ್ಸ್ ಆಫ್ ಬೆದ್ರ), ಕಾರ್ಯದರ್ಶಿಯಾಗಿ ಯಶೋಧರ ವಿ.ಬಂಗೇರ ( ವಿಜಯವಾಣಿ) ಕೋಶಾಧಿಕಾರಿಯಾಗಿ ಪ್ರೇಮಶ್ರೀ ( ಸಂಯುಕ್ತ ಕರ್ನಾಟಕ), ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ವಾಲ್ಪಾಡಿ (ನಮ್ಮ ಬೆದ್ರ) ಅವರು ಆಯ್ಕೆಯಾಗಿದ್ದಾರೆ.
ಪ್ರಸನ್ನ ಹೆಗ್ಡೆ, ನವೀನ್ ಸಾಲ್ಯಾನ್, ಬಿ.ಸೀತಾರಾಮ ಆಚಾರ್ಯ, ಗಣೇಶ್ ಕಾಮತ್ ಎಂ, ಶಕುಂತಲಾ ಅಂಚನ್, ರಾಮಕೃಷ್ಣ ಶಿಡಗಿನಮೊಳ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲ್ಪಟ್ಟರು.
ನಿರ್ಗಮನ ಅಧ್ಯಕ್ಷ ಗಣೇಶ್ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ವರದಿ ವಾಚಿಸಿದರು. ಲೆಕ್ಕ ಪತ್ರ ಮಂಡನೆ, ಕಳೆದ ಸಾಲಿನ ಕಾರ್ಯ ಚಟುವಟಿಕೆಗಳ ಕುರಿತು ಅವಲೋಕನ ನಡೆಯಿತು. ಅಶ್ರಫ್ ವಾಲ್ಪಾಡಿಯವರನ್ನು ವರ್ಷದ ಕ್ರಿಯಾಶೀಲ ಪತ್ರಕರ್ತ ಎಂದು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *