ಬಂಟ್ವಾಳ : ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮಕ್ಕೆ ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಚಾಲನೆ ನೀಡಿದರು. ಧರ್ಮಜಾಗರಣಾ ಪ್ರತಿಷ್ಠಾನ ದ ಸಂಚಾಲಕ ಕೈಯೂರು ನಾರಾಯಣ ಭಟ್ , ಪತ್ತುಮುಡಿ ವಿಠಲ ಪ್ರಭು, ರಾಮ್ ಗಣೇಶ್ , ಜಗ ದೀಶ್ ಶೆಟ್ಟಿ ಮತ್ತು ಊರವರು ಭಾಗವಹಿಸಿದ್ದರು.

