ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ 2016 ಇದರ 14 ನೇ ವಾರ್ಡ್ ನಿಂದ ಭಾರತೀಯ ಜನತಾ ಪಾರ್ಟಿಯ ಚುನಾವಣೆ ಪ್ರಚಾರಕ್ಕೆ ದಿ| ಕೂಡೂರು ಕೃಷ್ಣ ಭಟ್ ನಿವಾಸ ಶ್ರೀವರ ನಿಲಯದಲ್ಲಿ ಕಮಲಾ ಕೆ ಭಟ್ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಸಂದ್ಯಾ ಮೋಹನ್, ವಾರ್ಡ್ ನ ಅಧ್ಯಕ್ಷ ರಾಧಕೃಷ್ಣ ಕೆ, ಕಾರ್ಯದರ್ಶಿ ವಿನೋದ, ಸದಸ್ಯರುಗಳಾದ ವೀರಪ್ಪ ಗೌಡ, ಕುಶಾಲಪ್ಪ ಕೆ, ಮೋಹನ್ ಸೇರಾಜೆ, ವಿಖ್ಯಾತ್, ಧನುಷ್ ಕೆ, ಯಶೋದ, ಬಾಲಕೃಷ್ಣ, ಅಶೋಕ, ಆಕಾಶ್ ಇನ್ನಿತರರು ಉಪಸ್ಥಿತರಿದ್ದರು.

