ಬಂಟ್ವಾಳ; ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ವನ್ನು ಖಂಡಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಬಿ.ಸಿ.ರೋಡಿನ ತಾಲೂಕು ತಹಶೀಲ್ದಾರರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಕ್ರಮ ಮರಳುಸಾಗಾಟ ನಿತ್ಯ ನಿರಂತರವಾಗಿ ನಡೆಯುತ್ತಿದ್ದು ಸ್ಥಳೀಯ ಆಡಳಿತದ ಕೃಪಾಕಟಾಕ್ಷದಿಂದಲೇ ಈ ಧಂದೆ ನಡೆಯುತ್ತಿರುವುದು ಸ್ಷಷ್ಟವಾಗಿದೆ. ಬರಿಮಾರು ,ಕಾಗೆಕಾನ, ತುಂಬೆ ಮೂಲರಪಟ್ನ ಮುಂತಾದ ಪ್ರದೇಶಗಳಿಂದ ದಿನನಿತ್ಯ ರಾತ್ರಿ ವೇಳೆ ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತೀದೆ. ಸ್ಥಳೀಯವಾಗಿ ಮರಳಿನ ಅಭವಾ ಸೃಷ್ಟಿಯಾಗಿದ್ದರೂ ಹೊರ ಜಿಲ್ಲೆಗೆ ನಿರಂತರ ಮರಳು ಸಾಗಾಟ ಮಾಡಲಾಗುತ್ತದೆ. ಇತ್ತೀಚೆಗೆ ಬಿ.ಸಿ.ರೋಡಿನಲ್ಲಿ ರೈಲಿನಲ್ಲಿ ಮರಳು ಸಾಗಾಟವೇ ಇದಕ್ಕೆ ಸ್ಪಷ್ಟ ಉದಾಹರಣೆ. ಈ ಹಿಂದೆ 2 ಬಾರಿ ರೈಲಿನಲ್ಲಿ ಮರಳು ಸಾಗಿಸಿರುವ ಬಗ್ಗೆ ರೈಲ್ವೆ ಅಧಿಕಾರಿಗಳೇ ಮಾಹಿತಿ ನೀಡುತ್ತಿದ್ದು ಜಿಲ್ಲೇಯ ಮರಳುಗಾರಿಕೆಗೆ ಅವಕಾಶ, ಸಾಗಾಟಕ್ಕೆ ಪರವಾನಿಗೆ ಇಲ್ಲದಿರುವಾಗ ಇದು ಹೇಗೆ ಸಾಧ್ಯ. ಇದಕ್ಕೆ ಜಿಲ್ಲಾಡಳಿತದ ಅಸಮರ್ಪಕ ಮರಳು ನೀತಿ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬಳಿಕ ತಹಶೀಲ್ದಾರರಿಗೆ ಮನವಿ ನೀಡಲಾಯಿತು. ಈ ಸಂದರ್ಭ ಬಿಜೆಪಿ ಅಧ್ಯಕ್ಷ ಜಿ.ಆನಂದ, ತುಂಗಪ್ಪ ಬಂಗೇರ,ಗೋವಿಂದ ಪ್ರಭು, ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ ರಾಮ್‍ದಾಸ ಬಂಟ್ವಾಳ ಮತ್ತಿರರ ಬಿಜೆಪಿಯ ಪ್ರಮುಖರು ಹಾಜರಿದ್ದರು.

3

1

By Suddi9

Leave a Reply

Your email address will not be published. Required fields are marked *