ಬಂಟ್ವಾಳ:ಇಲ್ಲಿನ ನರಿಕೊಂಬು ಗ್ರಾಮದ ಬೋಳಂತೂರು ಸಮೀಪದ ಪೊಯಿತಾಜೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಡೆದಿ ಮತ್ತು ಕೂರ ಪೆರ್ಗಡೆ ದೈವಸ್ಥಾನದಲ್ಲಿ ಇದೇ 22ರಂದು ಬೆಳಿಗ್ಗೆ ಗಂಟೆ 9.36ರ ಶುಭ ಮುಹೂರ್ತದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ನಡೆಯಲಿದೆ.
ಪೊಳಲಿ ವೆಂಕಪ್ಪಯ್ಯ ಭಟ್ ಮತ್ತು ಪೊಳಲಿ ಕೃಷ್ಣರಾಜ ಭಟ್ ಪೌರೋಹಿತ್ಯದಲ್ಲಿ ನಡೆಯುವ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನ ಅಭಿವೃದ್ಧಿ ಸಮಿತಿ ಮುಖ್ಯಸ್ಥ ಪಿ.ಯೋಗೀಶ ಸಪಲ್ಯ ತಿಳಿಸಿದ್ದಾರೆ.

