ಬಂಟ್ವಾಳ ಪೇಟೆಯ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ನಡೆದ ರಥೋತ್ಸವಕ್ಕೆ ರೂ 50ಲಕ್ಷ ವೆಚ್ಚದಲ್ಲಿ ನಿಮರ್ಾಣಗೊಂಡ ಆಕರ್ಷಕ ಬ್ರಹ್ಮರಥ ಸಮಪರ್ಿಸಲಾಯಿತು. ಪ್ರಭಾರ ಆಡಳಿತಾಧಿಕಾರಿ ಶೇಷಶಯನ ಕಾರಿಂಜ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ರಮೇಶನಂದ ಸೋಮಯಾಜಿ, ಎನ್.ಪ್ರಕಾಶ ಕಾರಂತ, ಬಿ.ರಘುನಾಥ ಸೋಮಯಾಜಿ, ಕೆ.ಸೇಸಪ್ಪ ಕೋಟ್ಯಾನ್ ಮತ್ತಿತರರ ಅಪಾರ ಮಂದಿ ಭಕ್ತರು ಪಾಲ್ಗೊಂಡರು.

