ಮುಂಬಯಿ, ಎ.17: ಈ ಜಗತ್ತು ಸಾಧನೆಯ ಗರಡಿ. ಇಲ್ಲಿ ಎತ್ತರದ ಕನಸು, ವಿಶಾಲ ಮನಸ್ಸು ನಮ್ಮದಾಗಬೇಕು. ಛಲವೇ ಬಲವಾಗಬೇಕು.ಜೊತೆಗೆ ಕಲಿಯುತ್ತಾ ಮುನ್ನಡೆಯುವುದೇ ನಮ್ಮ ಗುರಿಯಾಗಬೇಕು. ಕಲಿತದ್ದನ್ನು ಇತರರೊಡನೆ ಹಂಚಿಕೊಳ್ಳುವ ಇಚ್ಛೆ ನಮ್ಮಲ್ಲಿರಬೇಕು. ಆಗ ನಮ್ಮ ವ್ಯಕ್ತಿತ್ವಕ್ಕೆ ಹೊಸ ಹೊಸ ರೂಪ ದೊರೆಯುತ್ತದೆ. ಈ ರೂಪ ವಿರೂಪಗಳೇ ಬಗೆಬಗೆಯ ಆಯಾಮಗಳಲ್ಲಿ ಚಿತ್ರಿತವಾಗುತ್ತದೆ. ಇದು ಸುಂದರವಾಗಿದ್ದರೆ ಇತರರಿಗೆ ಪ್ರೇರಣೆಯಾಗುತ್ತದೆ. ಅದಕ್ಕೆ ಬದಲು ಇದು ದ್ವೇಶ ಮತ್ಸರದಿಂದ ಕೂಡಿದ್ದರೆ ಸಮಾಜಕ್ಕೆ ಭಾದಕವಾಗುತ್ತದೆ. ಈ ಎಚ್ಚರ ನಮಗೆ ಸದಾ ಬೇಕು ಎಂದು ಯುವ ಪ್ರತಿಭೆ, ತುಳುಕನ್ನಡತಿ ವೈದ್ಯಾಧಿಕಾರಿ, ಬಹುಭಾಷಾ ಪ್ರಭುತ್ವದ ನಿರ್ವಾಹಕಿ ಡಾ| ಅಕ್ಷರಿ ರವಿ ಅಂಚನ್ ನುಡಿದರು.
ಕಳೆದ ಶನಿವಾರ ನವಿ ಮುಂಬಯಿಯ `ಹೋಟೆಲ್ ಯೋಗಿ ಮಿಡ್ ಟೌನ್’ ಇಲ್ಲಿ ಐ-3 ಕಾನ್ಪರೆನ್ಸ್ ಸಂಸ್ಥೆ 18 ರಿಂದ 24 ವರ್ಷದ ವಿಧ್ಯಾಥಿರ್üಗಳಿಗೆ ಆಯೋಜಿಸಿದ್ದ 12 ವಾರಗಳ `ಐ-3 ಕಾರ್ಯಾಗಾರ’ (ವರ್ಕ್ ಶಾಪ್) ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಡಾ| ಅಕ್ಷರಿ ಮಾತನಾಡಿದರು.
“ನಾನು ಬಿಡಿಎಸ್ ಅಂತಿಮ ವರ್ಷದಲ್ಲಿದ್ದೆ. ಇನ್ನೇನು ಪರೀಕ್ಷೆಗೆ ಮೂರು ದಿನ ಇದೆ ಎನ್ನುವಾಗ ನನ್ನ ತಾಯಿಯ ಅನಿರೀಕ್ಷಿತ ಸಾವು ನನ್ನ ಬದುಕನ್ನೇ ಅಲ್ಲಾಡಿಸಿತು. ಆದರೂ ನಾನು ವಿಚಲಿತಳಾಗದೆ ಮಂಗಳೂರಿಗೆ ಹೋಗಿ ಪರೀಕ್ಷೆ ನೀಡಿದೆ. ಅದರಲ್ಲೂ ನನ್ನ ರ್ಯಾಕ್ ಪಡೆ. ಈಗಲೂ ವಿದೇಶದಲ್ಲಿ ಕಲಿಯಬೇಕೆನ್ನುವ ಕನಸನ್ನು ಕೈಬಿಡದೆ ಇಲ್ಲೇ ಇದ್ದೂ ಎರಡೆರಡು ಕ್ಲಿನಿಕಿನಲ್ಲಿ ಕೆಲಸಮಾಡುತ್ತಾ ಪುಣೆಯಿಂದ ಕಾಸ್ಮೆಟಿಕ್ ಸರ್ಜರಿ ಪೆÇೀಸ್ಟು ಗ್ರಾಜುವೆಟ್ ಪದವಿ ಪಡೆದೆ. ಈಗ ಅಮೇರಿಕಾದ ಕೊಲೆರಾಡೋ ವಿಶ್ವವಿಧ್ಯಾನಿಲಯಕ್ಕೆ ವಿಧ್ಯಾಥಿರ್ü ಸಂದರ್ಶನಕ್ಕೆ ಮುಂದಿನ ವಾರ ತೆರಳುತ್ತಿರುವೆ. ಜೊತೆಗೆನೆ `ಲಿಪ್ ಪ್ರಿಂಟ್ಸ್’ ಅಂದರೆ ತುಟಿ ಮುದ್ರೆಯಿಂದ ಕ್ಯಾಸರ್ ರೋಗವನ್ನು ಕಂಡು ಹುಡುಕಬದುದೆಂದು ನಾನು ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಶಂಶೋಧನಾ ಪ್ರಭಂಧ ಈಗ `ಇಂಡಿಯನ್‍ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್’ ಪತ್ರಿಕೆಯಲ್ಲಿ ಶೀಘ್ರವೇ ಪ್ರಕಟವಾಗಲಿದೆ. ಇದಲ್ಲದೆ ಇದು ನನ್ನ ಮುಂದಿನ ಶೋಧನೆಗೆ ಮೆಟ್ಟಲಾಗಬದು. ಇದೇ ರೀತಿ ನೀವೂ ನಿಮ್ಮ ಕಲಿಕೆ, ಗಳಿಕೆ ಮತ್ತು ಆಸಕ್ತಿಗಳಿಗೆ ನಿರಂತರ ಶ್ರಮಿಸಬೇಕು. ನಿಮ್ಮ ಈ ಕಾರ್ಯಾಗಾರ ನಿಮ್ಮ ಬದುಕಿಗೆ ಅಪೂರ್ವ ತಿರುವನ್ನು ನೀಡಲಿ ಎಂದು ಶಿಬಿರಥಿರ್üಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಮುಖ್ಯ ಸಂಚಾಲಕರಾದ ಭರತ್ ಜಿ.ಸಿ. ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಹರಿಯಂತ್ ಜೈನ್ ವಂದಿಸಿದರು.







