ಮುಂಬಯಿ, : ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ರಚಿತ ಶ್ರೀರಾಮ ಪ್ರಕಾಶನ ಮಂಡ್ಯ ಪ್ರಕಾಶಿತ 23ನೇ ಕೃತಿ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿಯು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಬಿಡುಗಡೆ ಗೊಳಿಸಲ್ಪಟ್ಟಿತು.
ನಾಡಿನ ಹೆಸರಾಂತ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಪ್ರಸಿದ್ಧ ಕವಿ, ಲೇಖಕ ಮೋಹನ್ ನಾಗಮ್ಮನವರ ಅವರು ಕೃತಿಯನ್ನು ಅನಾವರಣ ಗೊಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಶಾಧಿಕಾರಿ ಎಂ.ಡಿ.ರಾವ್, ಡಾ| ಭರತ್ ಕುಮಾರ್ ಪೆÇಲಿಪು, ಕರ್ನಾಟಕ ಸಂಘದ ಗೌ| ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಜಯಲಕ್ಷ್ಮೀ ಶ್ರೀನಿವಾಸ್ ಉಪಸ್ಥಿತರಿದ್ದು, ದುರ್ಗಪ್ಪ ಕೋಟಿಯವರ್ ಕೃತಿ ಸಮೀಕ್ಷೆಗೈದರು.
ನಿಖಿತಾ ಅಂಚನ್ ಪ್ರಾರ್ಥನೆಯನ್ನಾಡಿದರು. ಕರ್ನಾಟಕ ಸಂಘದ ಗೌ| ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣಗೈದರು. ಡಾ| ಭರತ್ ಕುಮಾರ್ ಪೆÇಲಿಪು ಕಾರ್ಯಕ್ರಮ ನಿರೂಪಿಸಿದರು.
ನಂತರ ಕರ್ನಾಟಕ ಸಂಘದ `ಸಾಹಿತ್ಯ ಭಾರತಿ-ಸಾಹಿತ್ಯ ಚಿಂತನ-30′ ಕಾರ್ಯಕ್ರಮ ನಡೆಸಲ್ಪಟ್ಟಿದ್ದು, ಮೋಹನ್ ನಾಗಮ್ಮನವರ ಅವರು `ನನ್ನ ಕವಿತೆ ನಾನು ಕಂಡಂತೆ’ ವಿಚಾರವಾಗಿ ವಿಶೇಷ ಉಪನ್ಯಾಸ ನೀಡಿದರು.








