ವಿಚಾರ ಸಂಕಿರಣ- ಅಭಿನಂದನ ಗ್ರಂಥ ಬಿಡುಗಡೆ- ಗೌರವಾರ್ಪಣೆ

ಮುಂಬಯಿ, : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಶಿಮುಂಜೆ ಪರಾರಿ ಅಭಿನಂದನಾ ಸಮಿತಿ ಮುಂಬಯಿ ಸಹಯೋಗದಲ್ಲಿ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ವಿದ್ಯಾನಗರಿ ಅಲ್ಲಿನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಶಿಮುಂಜೆ ಪರಾರಿ (ಸೀತಾರಾಮ ಶೆಟ್ಟಿ) ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಉದ್ಯಮಿ ಮುದ್ರಾಡಿ ದಿವಾಕರ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿüಗಳಾಗಿ ಹಿರಿಯ ಸಾಹಿತಿ ಡಾ| ಜಿ.ವಿ.ಕುಲಕರ್ಣಿ, ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಉದ್ಯಮಿಗಳಾದ ಗುಣಪಾಲ ಶೆಟ್ಟಿ ಐಕಳ, ರಘುರಾಮ ಕೆ.ಶೆಟ್ಟಿ (ಬೆಳಗಾಂ), ಭುಜಂಗ ಆರ್.ಶೆಟ್ಟಿ ಉಪಸ್ಥಿತರಿದ್ದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‍ಉಪಾಧ್ಯ ಅವರ ಗೌರವ ಸಂಪಾದಕತ್ವದಲ್ಲಿ, ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಪ್ರಕಾಶಿಸಲ್ಪಟ್ಟ `ಸಂಪ್ರೀತಿ’ ಅಭಿನಂದನ ಗ್ರಂಥವನ್ನು ಮುದ್ರಾಡಿ ದಿವಾಕರ ಶೆಟ್ಟಿ ಬಿಡುಗಡೆ ಗೊಳಿಸಿದರು. ಹಾಗೂ ಹಿರಿಯ ಸಾಹಿತಿ ಶಿಮುಂಜೆ ಪರಾರಿ ಮತ್ತು ಚಂದ್ರಿಕಾ ಸೀತರಾಮ ಎಸ್.ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ ಹಾಗೂ ಗೌರವಧನವನ್ನಿತ್ತು ಗೌರವಿಸಿ ಅಭಿನಂದಿಸಿದರು.

???????????????????????????????

Shimunje Parari Abhinandane-2

Shimunje Parari Abhinandane-3

Shimunje Parari Abhinandane-5

Shimunje Parari Abhinandane-6

ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ ಅವರ ಜೀವನ ಮತ್ತು ಸಾಹಿತ್ಯ ಸಾಧನೆಯ ವಿಚಾರ ಸಂಕಿರಣ ನಡೆದಿದ್ದು, ಶಿಮುಂಜೆ ಅವರ ಜೀವನ ಸಾಧನೆಯ ಕುರಿತು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ಶಿಮುಂಜೆ ಅವರ ನಿತ್ಯ ಆನಂದ ವಚನದ ಕುರಿತಾಗಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್ ಉಪಾಧ್ಯ, ಶಿಮುಂಜೆ ಅವರ ಅನುವಾದ ಸಾಹಿತ್ಯದ ಕುರಿತಾಗಿ ಕವಿ, ಲೇಖಕ ಡಾ| ಕರುಣಾಕರ ಎಸ್.ಶೆಟ್ಟಿ, ತುಳು ಸಾಹಿತ್ಯಕ್ಕೆ ಶಿಮುಂಜೆ ಪರಾರಿ ಅವರ ಕೊಡುಗೆಯ ಕುರಿತಾಗಿ ಕವಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಉಪನ್ಯಾಸ ನೀಡಿದರು. ವಿದುಷಿ ವೀಣಾ ಶಾಸ್ತ್ರಿ, ಲಕ್ಷಿ ್ಮೀ ಶೆಟ್ಟಿ ಹಾಗೂ ಸುಶೀಲಾ ಎಸ್.ದೇವಾಡಿಗ ಅವರ ಕಾವ್ಯಗಾಯನ ಕಾರ್ಯಕ್ರಮ ನಡೆಯಿತು.

ಎಸ್. ಕೆ ಸುಂದರ್, ಕನ್ನಡ ವಿಭಾಗದ ವಿದ್ಯಾಥಿರ್üಗಳಾದ ಶಿವರಾಜ್ ಎಂ.ಜಿ, ಪರ್ಸಪ್ಪ ಹರಿಜನ್, ಸುರೇಖಾ ದೇವಾಡಿಗ, ಅನಿತಾ ಶೆಟ್ಟಿ, ರೂಪಾ ಸಂಗೊಳ್ಳಿ, ಅಶೋಕ್ ವಳದೂರು, ಸಂತೋಷ್ ಮೊಗವೀರ, ಸೂರಪ್ಪ ಕುಂದರ್ ಮೊದಲಾದವರು ಸಹಕರಿಸಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಶಿಮುಂಜೆ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಹಿರಿಯ ಸಾಹಿತಿ, ಕವಿ ಬಿ. ಎಸ್. ಕುರ್ಕಾಲ್ ಸ್ವಾಗತಿಸಿದರು. ಕವಿ, ಸಾಹಿತಿ ಜೀವಿ ಕುಲಕರ್ಣಿ ಅವರು ಅಭಿನಂದನ ಭಾಷಣಗೈದರು. ಸಂಘಟಕ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಪಾದಕ ಮಂಡಳಿ ಸದಸ್ಯ ಜಿ.ಟಿ ಆಚಾರ್ಯ ವಂದಿಸಿದರು.

By suddi9

Leave a Reply

Your email address will not be published. Required fields are marked *