ಕುಪ್ಪೆಪದವು: ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆ ಕಲ್ಲಾಡಿ ಇದರ ಗ್ರಾಮೋತ್ಸವ ಮತ್ತು ಸಾಮರಸ್ಯ ಸಂಗಮ ಹಾಗೂ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿ ಹಾಗೂ ಅಂಗನವಾಡಿ ಕೇಂದ್ರ ಕಲ್ಲಾಡಿ ಇದರ ಜಂಟಿ ವಾರ್ಷಿಕೋತ್ಸವ ಕಾರ್ಯಕ್ರಮ ಎ.9ರಂದು ಕಲ್ಲಾಡಿ ಶಾಲಾ ವಠಾರದಲ್ಲಿ ಜರುಗಿತು.ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯರಾದ ನಾಗೇಶ್ ಶೆಟ್ಟಿ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎ.ಮೊಹಮ್ಮದ್ ಹನೀಫ್, ಇರುವೈಲು ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ, ಗ್ರಾ.ಪಂ. ಸದಸ್ಯರಾದ ಹಿರಣ್ಯಾಕ್ಷ ಕೋಟ್ಯಾನ್, ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆರ್ ಕೆ.ಪ್ರಥ್ವಿರಾಜ್, ಮಾಜಿ ಜಿ.ಪಂ. ಸದಸ್ಯರಾದ ಕೃಷ್ಣ ಅಮೀನ್, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪಿ.ಎಮ್.ಅಹಮದ್ ಬಾರ್ದಿಲ ಸಾಂಬಾ ಸದಾಶಿವ ಕ್ಷೇತ್ರದ ಆಡಳಿತ ಮೋಕ್ತೇಸರಾದ ಸೋಮಶೇಖರ ರೆಡ್ಡಿ, ನಿವೃತ್ತ ಗ್ರಾಮಕರಣಿಕ ರುಕುಮ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 8ಮಂದಿ ಊರಿನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎ.ಮೊಹಮ್ಮದ್ ಹನೀಫ್ ಕಲ್ಲಾಡಿ ಶಾಲೆಗೆ ಕೊಡುಗೆಯಾಗಿ ನೀಡಿದ ಕಂಪ್ಯೂಟರನ್ನು ಅತಿಥಿಗಳು ಶಾಲಾ ಮುಖ್ಯೋಪಾದ್ಯಾಯರಿಗೆ ಹಸ್ತಾಂತರಿದರು. ಪ್ರಾರಂಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಎ.ಅಬೂಬಕ್ಕರ್ ಪ್ರಸ್ತಾವಣೆಗೈದು ಎಲ್ಲರನ್ನು ಸ್ವಾಗತಿಸಿದರು. ಶಾಲಾ ವರದಿಯನ್ನು ಮುಖ್ಯೋಪಾದ್ಯಾರಾದ ಶ್ರೀನಿವಾಸರವರು ವಾಚಿಸಿದರು. ಅಂಗನವಾಡಿ ವರದಿಯನ್ನು ಕಾರ್ಯಕರ್ತೆ ಜಿ.ಸಬೀನಾಬಾನು ವಾಚಿಸಿದರು. ಹೇಮಚಂದ್ರರವರು ಕಾರ್ಯಕ್ರಮ ನಿರೂಪಿಸಿದರು. ಹಿತರಕ್ಷಣಾ ವರದಿಯನ್ನು ಕಾರ್ಯದರ್ಶಿ ಪುನೀತ್ ಕುಮಾರ್ ವಾಚಿಸಿದರು. ನಂತರ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾಥಿಗಳಿಂದ ಮನರಂಜನಾ ಕಾರ್ಯಕ್ರಮ ಕರ್ನಾಟಕ ಬ್ಯಾರಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಹಾಗೂ ದಪ್ ಪ್ರದರ್ಶನ, ವಿದ್ಯಾಶ್ರೀ ಕಲಾವಿದರು ಕೈಕಂಬ ಇವರಿಂದ ನಿಕ್ಕ್ ಗೊತ್ತುಂಡಾ ನಾಟಕ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಅಬ್ಬುಲ್ ಅಝೀದ್ ಧನ್ಯವಾದಗೈದರು.
