ಮೂಡುಬಿದರೆ: ಪುರಾತನ ಪ್ರಸಿದ್ಧ 18 ಮಾಗಣೆಗಳಿಗೆ ಪ್ರಮುಖವಾದ ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ
ಹದಿನಾರು ದಿನಗಳ ವೈಭವದ ವರ್ಷಾವಧಿ ಪುತ್ತಿಗೆ ಜಾತ್ರೆ ಏ.13 ರಿಂದ 28 ರವರೆಗೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಏ. 13 ರಂದು ಮಧ್ಯಾಹ್ನ ಧ್ವಜಾರೋಹಣ, ಏ.17 ರಂದು ಹೂವಿನ ರಥೋತ್ಸವ, ಸಂಜೆ ಚೆಂಡು ಆರಂಭ, ಏ. 18 ಮರುಹೂವಿನ ರಥೋತ್ಸವ, ಏ. 19 ರಂದು ಭೂಮಂಡಲ ರಥೋತ್ಸವ, ಎ. 20 ಮರು ಭೂಮಂಡಲ ರಥೋತ್ಸವ, ಎ. 21 ರಂದು ಕೆರೆ ದೀಪೋತ್ಸವ, ಎ. 22 ಸವಾರಿ ಉತ್ಸವ, ಎ.23 ಬಾಕಿಮಾರು ದೀಪೋತ್ಸವ, ಎ. 24 ಗುಡ್ಡೆ ತೇರು ಜರಗಲಿದೆ. ಏ. 25 ರಂದು ಮಹಾಜಾತ್ರೆ ವಿಶಿಷ್ಠ ಆಳುಪಲ್ಲಕ್ಕಿ ಮಹೋತ್ಸವ ಕಡೇ ಚೆಂಡು ನಡೆಯಲಿದೆ. ಎ. 26 ರಂದು ಹಗಲು ರಥೋತ್ಸವ, ಅಪರಾಹ್ನ ಮಹಾ ಅನ್ನ ಸಂತರ್ಪಣೆ, ಸಂಜೆ ರಥ ಹೂವಿನ ಪೂಜೆ, ರಥೋತ್ಸವ, ಎ. 27 ಅವಭೃತ, ಎ. 28 ರಂದು ಪಂಚ ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ.

mbd_april11_3
ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಏ. 14 ರಂದು ಸಂಜೆ 7 ರಿಂದ ಹೊಸನಗರ ಮೇಳದವರ ಯಕ್ಷಗಾನ ಬಯಲಾಟ ಅಂಧಕ ಕೌಂಡ್ಲಿಕ, 16ರ ಮಧ್ಯಾಹ್ನ 2.30 ರಿಂದ ಯಕ್ಷಗಾನ ತಾಳ ಮದ್ದಳೆ, 21 ರಂದು ರಾತ್ರಿ 7.30 ರಂದು ಕೆರೆಯಲ್ಲಿ ಗಾನಸುಧಾ, 25 ರಂದು ಸಂಜೆ 6ರಿಂದ 8 ಕಟೀಲು ಮಕ್ಕಳ ಮೇಳದಿಂದ ಸುದರ್ಶನ ವಿಜಯ ಯಕ್ಷಗಾನ, 26 ಮಧ್ಯಾಹ್ನ 3ರಿಂದ 6 ಡ್ಯಾನ್ಸಿಂಗ್ ಸ್ಟಾರ್ ಎಡಪದವು ಅವರ ನೃತ್ಯ ಕಾರ್ಯಕ್ರಮ, ಸಂಜೆ ಯಕ್ಷನಿಧಿ ಮೂಡುಬಿದಿರೆಯ ಬಾಲಕಲಾವಿದರಿಂದ ಶಾಪಾನುಗ್ರಹ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ. ತಿಳಿಸಿದ್ದಾರೆ

By Suddi9

Leave a Reply

Your email address will not be published. Required fields are marked *