ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಇದೇ 12ರಂದು ಬೆಳಿಗ್ಗೆ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕದಿಂದ ತುಂಬೆ ಕಿಂಡಿ ಅಣೆಕಟ್ಟೆಗೆ ಹೆಚ್ಚುವರಿ ನೀರು ಹರಿಯ ಬಿಡಲಾಗುತ್ತದೆ. ಇದರಿಂದಾಗಿ ನದಿ ತೀರದ ನಾಗರಿಕರು ನದಿಗೆ ಅಳವಡಿಸಿದ ಪಂಪ್ ತೆರವುಗೊಳಿಸುವುದರ ಜೊತೆಗೆ ಸಾಕುಪ್ರಾಣಿಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಪ್ರಕಟಣೆ ತಿಳಿಸಿದೆ.
