ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ತಾಳಿಪಡ್ಪು ನೇತ್ರಾವತಿ ನದಿಯಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಈ ಬಗ್ಗೆ ಮೃತದೇಹ ಕಂಡ ಸ್ಥಳೀಯರು ತಕ್ಷಣವೇ ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಬಂಟ್ವಾಳ ಶವಗಾರಕ್ಕೆ ಸಾಗಿಸಿದ್ದಾರೆ.
ಮೃತ ವ್ಯಕ್ತಿಯು ವಲಸೆ ಕಾರ್ಮಿಕನಾಗಿದ್ದು, ನದಿಯಾಚೆ ಕೆಲಸಕ್ಕೆ ಹೋಗುವುದಕ್ಕಾಗಿ ದೋಣಿ ಸಿಗದೆ ಬಳಿಕ ಈಜಿ ನದಿ ದಾಟುತ್ತಿದ್ದ ವೇಳೆ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ನಗರ ಠಾಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
