ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ 28 ನೇ ದಿನದ ಜಾತ್ರಾ ಉತ್ಸವದಂದು ತುಲಾಭರ ಸೇವೆಯು ಎ.11ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡಿತು. ಬೆಳಗ್ಗಿನಿಂದಲೇ ಹರಕೆ ಹೊತ್ತ ಭಕ್ತಾಧಿಗಳು ದೇವಿ ಸನ್ನಿಧಿಯಲ್ಲಿ ನಂಬರ್ ಪ್ರಕಾರ ಹರಕೆಯ ರೂಪದಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಎಲ್ಲೆಣ್ಣೆ, ಸೀಯಾಳ, ಹೂ ಹಿಂಗಾರದಲ್ಲಿ ತುಲಾಭರ ಸೇವೆ ಮಾಡಿದರು, ದೇವಳದಲ್ಲಿ ಸುಮಾರು 600 ಭಕ್ತರ ತುಲಾಭರ ಸೇವೆ ನಡೆಯಿತು.ಚಿಕ್ಕ ಮಗುವಿನಿಂದ ಹಿಡಿದು 85 ವರ್ಷದವರು ತಮ್ಮಕಷ್ಟಗಳನ್ನು ದೇವಿಯಲ್ಲಿ ಹರಕೆ ಹೊತ್ತವರು ವೀಲ್ ಚೆಯರ್ನಲ್ಲಿ ಬಂದು ಹರಕೆ ಸಲ್ಲಿಸಿದರು.

ದೇವಳದ ಅರ್ಚಕರು ದೇವಿಯ ಚಿನ್ನದ ಹಾರ ಹಾಗೂ ಹೂ ಹಾರವನ್ನು ಹರಕೆಹೊತ್ತ ಭಕ್ತಾಧಿಗಳ ಕೊರಳಿಗೆ ಹಾಕಿ ತೂಕ ಮಾಡಿದರು. ದೇವಳದ ಪವಿತ್ರಪಾಣಿ ಮಾದವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ,ಕೆ.ರಾಮ ಭಟ್ ದೇವಳದ ಇತರ ಅರ್ಚಕರು ಹಾಗೂ ಸಿಬಂಧಿಗಳು ತುಲಾಭಾರ ಸೇವೆಯಲ್ಲಿ ಸಹಕರಿಸಿದರು. ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ ಅಮ್ಮುಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು ಹಾಗೂ ಸಾವಿರಾರು ದೇವಿ ಭಕ್ತರು ಇದ್ದರು.




















