ಬಂಟ್ವಾಳ: ದಿ.ನೀರ್ಪಾಜೆ ಭೀಮ ಭಟ್ಟರ ಜನ್ಮದಿನವಾದ ಏ.12 ರಂದು ಅಪರಾಹ್ನ ಸಂಜೆ 3ರಿಂದ “ ಭೀಮ ಭಟ್ಟರ ಸಂಸ್ಮರಣೆ ಹಾಗೂ ಕನ್ನಡದ ಕಲ್ಹಣ ಪ್ರಶಸ್ತಿ” ನೀಡುವ ಕಾರ್ಯಕ್ರಮ ಬಿ.ಸಿ.ರೋಡ್ ನ ರಕ್ತೇ ಶ್ವರಿ ದೇವಿ ಸನ್ನಿಧಾನದ ಮಿನಿ ಹಾಲ್ ನಲ್ಲಿ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ಬಿ.ರಮಾನಾಥ ರೈ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಮಾಡುವರು. ಶಶಿಕಾಂತ ಮಣಿ ಸ್ವಾಮೀಜಿ ಶಿಲಾಂಜನ ಕ್ಷೇತ್ರ ಬಾಳೆಕೋಡಿ ಕನ್ಯಾನ ಇವರು ಸಂಸ್ಮರಣೆ ಹಾಗೂ ಆಶೀರ್ವಚನ ನೀಡಲಿದ್ದಾರೆ. ಗಂಗಾ ಪಾದೆಕಲ್ ಇವರು ಕನ್ನಡದ ಕಲ್ಹಣ ಪ್ರಶಸ್ತಿ ಸ್ವೀಕರಿಸುವರು. ಡಾ.ನಾಗವೇಣಿ ಮಂಚಿ ಅಭಿನಂದನಾ ಭಾಷಣ ಮಾಡುವರು. ಹಾಜಿ.ಜಿ.ಮಹಮ್ಮದ್ ಹನೀಫ್ ರವರು ಮುಖ್ಯ ಅತಿಥಿಗಳಾಗಿರುವರು. ನಿರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಕೋಶಾಧಿಖಾರಿ ಕೊಳಕೆ ಗಂಗಾಧರ ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
