ಬಂಟ್ವಾಳ; ಬುದ್ದಿಗೆಂದು ದೊಡ್ಡಪ್ಪ ನೀಡಿದ ಕೈಯೇಟು ಬಾಲಕನ ಜೀವಕ್ಕೆ ಮುಳುವಾಗಿ ಬಾಲಕ ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.
ಕಡೇಶ್ವಾಲ್ಯ ಗ್ರಾಮದ ಸರೋಲ್ತಡ್ಕ ನಿವಾಸಿ ಗಣೇಶ್ ನಾಕ್ ಎಂಬವರ ಪುತ್ರ ಸಚಿನ್(16) ಮೃತಪಟ್ಟ ಬಾಲಕ. ಈತನ ತಂದೆ ಗಣೇಶ್ ನ್ಯಾಕ್ ರವರ ಅಣ್ಣ ಸುಂದರ ನಾಕ್ ಎಂಬಾತನೇ ಬಾಲಕನ ಸಾವಿಗೆ ಕಾರಣ ಎನ್ನಲಾಗಿದ್ದು, ಅವರ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ;
ಕಡೇಶ್ವಾಲ್ಯ ಗ್ರಾಮದ ಸರೋಲ್ತಡ್ಕ ಎಂಬಲ್ಲಿ ಗೋಪಾಲ ನಾಕ್, ಸುಂದರ ನಾಕ್ ಹಾಗೂ ಗಣೇಶ್ ನಾಕ್ ರವರ ಮನೆಗಳು ಅಕ್ಕಪಕ್ಕದಲ್ಲಿದೆ. ಕಳೆದ ಮಾ.27 ರಂದು ಸಚಿನ್ ಗೊಪಾಲನಾಕ್ ರವರ ಅಂಗಳದಲ್ಲಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ಸುಂದರ ನಾಕ್, ತನ್ನ ಮನೆಯಿಂದ ಮೊಬೈಲ್ ಹಾಗೂ ಕತ್ತಿಯನ್ನು ಕಳವು ಮಾಡಿದ್ದಾನೆಂದು ಆರೋಪಿಸಿ ಸಚಿನ್ ನ ಕೆನ್ನೆಗೆ ಕೈಯಿಂದ ಬಾರಿಸಿದ್ದರು. ಆ ಬಳಿಕದಿಂದ ಸಚಿನ್ ಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕಡೇಶ್ವಾಲ್ಯ ಸಕರ್ಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲಿ ಕಲಿಯುತ್ತಿದ್ದ ಸಚಿನ್ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒತ್ತಡದಲ್ಲಿಯೂ ಇದ್ದು, ಏಕಾಏಕಿ ಕಾಣಿಸಿಕೊಂಡ ಅನಾರೋಗ್ಯ ಈತನ ಮಾನಸಿಕ ಸ್ಥೈರ್ಯವನ್ನೇ ಕಸಿದಿತ್ತು. ಈ ನಡುವೆ ಮಾ.30 ರ ಮೊದಲ ಕನ್ನಡ ಪರೀಕ್ಷೆಗೆ ಮಾತ್ರ ಸಚಿನ್ ಹಾಜರಾಗಿದ್ದ. ಶನಿವಾರದ ಬಳಿಕ ಈತನ ಸ್ಥಿತಿ ಗಂಭೀರವಾಗಿದ್ದು, ಮನೆಮಂದಿ ಪುತ್ತೂರಿ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ ನಾಲ್ಕರಸುಮಾರಿಗೆ ಸಚಿನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ದೊಡ್ಡಪ್ಪ ಸುಂದರ ರವರು ಈತನ ಕೆನ್ನೆಯ ಭಾಗಕ್ಕೆ ಹಲ್ಲೆನಡೆಸಿದ್ದರಿಂದ ಮೆದುಳಿನಿಲ್ಲಿ ರಕ್ತ ಸಂಚಾರ ಸ್ಥಗಿತಗೊಂಡು ಆತನಿಗೆ ಅನಾರೋಗ್ಯ ಕಾಣಿಸಿಕೊಂಡು, ಸಾವನ್ನಪ್ಪಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಸುಂದರನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಮತ್ತು ಸಿಬ್ಬಂದಿಗಳು ಸ್ಥಳ ತನಿಖೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *