ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತದೇಶವೂಒಂದು.ನಮ್ಮದುಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಮುಂಚೂಣಿಯಲ್ಲಿರುವದೇಶವೇನೋ ಹೌದು, ಆದರೆಇಲ್ಲಿನಕೆಲವೊಂದುಜ್ವಲಂತ ಸಮಸ್ಯೆಗಳನ್ನು ಕಂಡರೆಎಂತವನಿಗೂಆಶ್ಚರ್ಯವಾಗದೇಇರಲಾರದು.ಇವುಗಳಲ್ಲಿ ಒಪ್ಪೊತ್ತಿನಊಟಕ್ಕೂ ಹಾಹಾಕಾರ ಹಾಕುವಂತಹಆಹಾರದ ಸಮಸ್ಯೆ.ಭಾರತದದೇಶದಒಟ್ಟು ಮಕ್ಕಳಲ್ಲಿ ಆರನೇಒಂದು ಭಾಗ ಮಕ್ಕಳು ಅಪೌಷ್ಠಿಕತೆಯಿಂದ, ಆಹಾರದಕೊರತೆಯಿಂದಾಗಿಬಳಲುತ್ತಿದ್ದಾರೆ ಹಾಗೂ ಇವರಲ್ಲಿ ನಾಲ್ಕರಲ್ಲಿಒಂದು ಮಗು ತೀರಾ ಅಪೌಷ್ಠಿಕತೆಯಿಂದ ಬಳಲುತ್ತಿದೆ.ಪ್ರತಿದಿನದೇಶದಲ್ಲಿಸುಮಾರು ಮೂರು ಸಾವಿರ ಮಕ್ಕಳು ಅಪೌಷ್ಠಿಕತೆ ಸಂಬಂಧಿತಖಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ.ದೇಶದಒಟ್ಟು ವಾರ್ಷಿಕ ಮರಣ ಪ್ರಮಾಣದಲ್ಲಿ24%ರಷ್ಟ್ಲು5 ವರ್ಷಕ್ಕಿಂತಕಡಿಮೆ ವಯಸ್ಸಿನ ಮಕ್ಕಳೇಸಾಯುತ್ತಿದ್ದಾರೆ ಹಾಗೂ ಪ್ರಪಂಚದಲ್ಲಿಒಟ್ಟುಇಪ್ಪತ್ತು ಸಾವಿರ ಮಕ್ಕಳು ಪ್ರತಿನಿತ್ಯ ಅಪೌಷ್ಠಿಕತೆ ಸಂಬಂಧಿತ ರೋಗಗಳಿಂದ ಮರಣ ಹೊಂದುತ್ತಿದ್ದಾರೆ. ಇನ್ನು ಭಾರತದೇಶದಲ್ಲಿಪ್ರತಿ 9 ಮಂದಿಯಲ್ಲಿಒಬ್ಬವ್ಯಕ್ತಿ ಪ್ರತಿನಿತ್ಯರಾತ್ರಿ ಹಸಿವಿನಿಂದಲೇ ಮಲಗುತ್ತಾನೆ.
ಪ್ರಪಂಚದ ಬಡತನದಲ್ಲಿ 64%ರಷ್ಟು ಬಡತನದ ಪ್ರಮಾಣ ಕಾಂಗೋ, ಚೀನಾ, ಭಾರತ, ಬಾಂಗ್ಲಾದೇಶ ಹಾಗೂ ನೈಜೀರಿಯಾದಲ್ಲೇಅಡಗಿದೆಎಂದರೆಎಂತವರಿಗೂಆಶ್ಚರ್ಯವಾಗದೇಇರಲಾರದು.ಭಾರತವುಅತೀ ಹೆಚ್ಚು ಆಹಾರೋತ್ಪಾನ್ನಗಳನ್ನು ಉತ್ಪಾದಿಸುವ ದೇಶಗಳಲ್ಲೊಂದಾಗಿದ್ದರೂ ಬಹುತೇಕ ಭಾರತೀಯರು ಹಸಿವಿನಿಂದ ನರಳುತ್ತಿದ್ದಾರೆ…..!ಇದಕ್ಕೆ ಬಹಳ ಮುಖ್ಯವಾದಕಾರಣವೆಂದರೆಆಹಾರ ನಿರ್ವಹಣೆ ಸಂಬಂಧಿತಅಸಮರ್ಪಕ ಕಾನೂನು ನೀತಿ ನಿಯಮಗಳು ಹಾಗೂ ಸ್ಥಳೀಯ ಸರ್ಕಾರಗಳ ಆಡಳಿತ ನಿರ್ಲಕ್ಷ್ಯಎಂದರೆತಪ್ಪಾಗಲಾರದು.
ಪ್ರಪಂಚದಒಟ್ಟು ಅಪೌಷ್ಠಿಕತೆಯಲ್ಲಿ 25% ಅಪೌಷ್ಠಿಕತೆ ಭಾರತದಲ್ಲಿಯೇಇದೆ.ಏಕೆಂದರೆ ಭಾರತದಒಟ್ಟುಅಹಾರೋತ್ಪಾದನೆಯಲ್ಲಿ 52% ಆಹಾರ ಧಾನ್ಯಗಳು ಆಹಾರ ಮಳಿಗೆಗಳಲ್ಲಿಯೇ ಹಸಿವಿನಿಂದ ನರಳುತ್ತಿರುವವರಿಗೆ ತಲುಪದೆಆರಂಭಿಕ ಹಂತದಲ್ಲಿಯೇಆಹಾರವು ಪೋಲಾಗುತ್ತಿದೆಹಾಗೂ 40% ಹಣ್ಣು ತರಕಾರಿಗಳು ಮತ್ತು 20% ಆಹಾರ ಧಾನ್ಯಗಳು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆಅವಲಂಬಿತರಿಗೆೆತಲುಪುವಲ್ಲಿ ವಿಫಲವಾಗಿ ನಿರುಪಯುಕ್ತವಾಗುತ್ತಿದೆ.
ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿಕೊಂಡು ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಕಾಶಿಯಲ್ಲಿ 9 ಮಂದಿ ಹುಡುಗಿಯರುವಿಶಾಲ ಭಾರತ ಸೇವಾ ಸಂಸ್ಥಾನ ಎಂಬ ಸೇವಾ ಸಂಸ್ಥೆಯ ಸಹಯೋಗದೊಂದಿಗೆಅನಾಜ್ ಬ್ಯಾಂಕ್(ಆಹಾರ ಧಾನ್ಯಗಳ ಬ್ಯಾಂಕ್)ನ್ನು ಪ್ರಾರಂಭಿಸಿರುತ್ತಾರೆ. ಎಲ್ಲಾ ಬ್ಯಾಂಕುಗಳಂತೆ ಈ ಬ್ಯಾಂಕು ಹಣಕಾಸಿನ ವ್ಯವಹಾರವನ್ನು ಮಾಡುವ ಬದಲಾಗಿಆಹಾರ ಧಾನ್ಯಗಳ ವ್ಯವಹಾರವನ್ನು ಮಾಡುತ್ತದೆ.ಈ ಬ್ಯಾಂಕ್ನ ಘೋಷ ವಾಕ್ಯವೇಕೊಹಿ ಭೀ ಭೂಕಾನಾ ಸೋಯೇ (ಯಾರೊಬ್ಬರೂ ಹಸಿವಿನಿಂದ ಮಲಗಬಾರದು)ಆಗಿದ್ದು, ಇದು ಹಸಿವಿನಿಂದ ನರಳುತ್ತಿರುವವರಿಗೆ ಆಹಾರ ಧಾನ್ಯಗಳನ್ನು ಒದಗಿಸುವಬ್ಯಾಂಕ್ ಆಗಿ ಕೆಲಸ ನಿರ್ವಹಿಸುತ್ತಿದೆ.
ಈ ಬ್ಯಾಂಕ್ ಸದ್ಯಕ್ಕೆಉತ್ತರ ಪ್ರದೇಶಜಿಲ್ಲೆಯ ವಾರಣಾಸಿ ಜಿಲ್ಲೆಯ ಕಾಶಿಯಲ್ಲಿ ಮಾತ್ರತನ್ನಕಾರ್ಯವನ್ನು ನಿರ್ವಹಿಸುತ್ತಿದೆ.ಈ ಬ್ಯಾಂಕ್ನಕಾರ್ಯ ವಿಧಾನಗಳು ಈ ಕೆಳಕಂಡಂತಿದೆ:
ಈ ಬ್ಯಾಂಕ್ನಲ್ಲಿಆಹಾರಧಾನ್ಯವನ್ನು ನೀಡುವವರು ಹಾಗೂ ಪಡೆದುಕೊಳ್ಳುವವರು ಮಾತ್ರಅನಾಜ್ ಬ್ಯಾಂಕ್ಆಹಾರಖಾತೆಯನ್ನುತೆರೆಯಬಹುದಾಗಿದೆ.ಇವರಿಗೆಅನಾಜ್ಬ್ಯಾಂಕ್ ಪಾಸ್ ಪುಸ್ತಕವನ್ನು ನೀಡಲಾಗುತ್ತದೆ.
ಆಹಾರಧಾನ್ಯವನ್ನು ನೀಡುವವರು ಕನಿಷ್ಠ 5 ಕೆ.ಜಿಆಹಾರಧಾನ್ಯವನ್ನು ಪ್ರತಿ ತಿಂಗಳು ಠೇವಣಿಯಾಗಿ ನೀಡಬೇಕಾಗುತ್ತದೆ. ಹಾಗೂ ಗರಿಷ್ಟ ಮಿತಿಇರುವುದಿಲ್ಲ.
ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವ ಅವಲಂಬಿತರಆಯ್ಕೆಯನ್ನುಖುದ್ದಾಗಿ ವಿಶಾಲ ಭಾರತ ಸೇವಾ ಸಂಸ್ಥಾನದ ಸದಸ್ಯರುಅವರ ಬಡತನದ ಮಟ್ಟವನ್ನು ಪರಿಶೀಲಿಸಿ ಆಯ್ಕೆ ಮಾಡುತ್ತಾರೆೆ.
ಆಹಾರ ಧಾನ್ಯಗಳ ಠೇವಣಿದಾರರು ಹಾಗೂ ಪಡೆದುಕೊಳ್ಳುವವರು ದ್ರಢೀಕರಣಕ್ಕಾಗಿ ಆಧಾರ್ ರ್ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರೊಂದನ್ನು ಕಡ್ಡಾಯವಾಗಿ ನೀಡಬೇಕಾಗಿರುತ್ತದೆ.
ಅರ್ಹ ಫಲಾನುಭವಿಗಳ ಆಯ್ಕೆಯ ಸಂದರ್ಭದಲ್ಲಿ ಹಾಗೂ ಪ್ರತಿ ತಿಂಗಳಿಗೊಂದಾವತರ್ಿಯಂತೆ ಫಲಾನುಭವಿಗಳತೂಕವನ್ನು ಸದ್ರಿಯೋಜನೆಯು ಸದುಪಯೋಗವಾಗುತ್ತಿರುವುದನ್ನುಖಾತ್ರಿ ಪಡಿಸುವಉದ್ದೇಶದಿಂದ ಮಾಡಲಾಗುತ್ತದೆ.
ಆಹಾರಧಾನ್ಯ ನೀಡುವವರುಗುಣಮಟ್ಟದಆಹಾರ ಧಾನ್ಯಗಳನ್ನೇ ನೀಡಬೇಕಾಗಿದ್ದು ಪಡೆದುಕೊಳ್ಳುವ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ.
ಸದ್ರಿ ಬ್ಯಾಂಕ್ ಸರ್ವಧರ್ಮ ಸಹಿಷ್ಣುತೆಯಕೇಂದ್ರವಾಗಿ ಕೆಲಸ ನಿರ್ವಹಿಸುತ್ತಿದೆ.
ಸದ್ರಿಯೋಜನೆಯಲ್ಲಿ ಪ್ರತಿ ತಿಂಗಳು ಆಯ್ದ ಫಲಾನುಭವಿಗಳಿಗೆ 4 ಕೆ.ಜಿ ಅಕ್ಕಿ, 1 ಕೆ.ಜಿ ಗೋದಿ ಹಿಟ್ಟು ಮತ್ತು 1 ಕೆ.ಜಿಅಯೋಡಿನ್ಯುಕ್ತಉಪ್ಪನ್ನುಒಂದು ವರ್ಷದವರೆಗೆ ನೀಡಲಾಗುತ್ತದೆ.
ಸದ್ರಿಯೋಜನೆಯಲ್ಲಿ ಸುಮಾರು58ಮಂದಿ ಮಹಿಳೆಯರು ಫಲಾನುಭವಿಗಳನ್ನು ಅನಾಜ್ ಬ್ಯಾಂಕ್ ಗುರುತಿಸಿ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ನೀಡುತ್ತಿದೆ.ಇವರಲ್ಲಿ5 ಮಂದಿ ವಿಚ್ಛೇದಿತರು, ಹದಿಮೂರು ಮಂದಿ ವಿಧವೆಯರು, ಒಬ್ಬರು ಪತಿಯಿಂದ ಪರಿತ್ಯಕ್ತಳಾದ ಮಹಿಳೆ, 4 ಮಂದಿ ಅಂಗವಿಕಲರು ಹಾಗೂ 35 ಮಂದಿ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವವರು. ಹೀಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆಅನ್ನದಾಸೋಹವನ್ನು ಮಾಡುತ್ತಿರುವುದುಅತ್ಯಂತಖುಷಿಯ ವಿಚಾರವಾಗಿದೆ.ಭಾರತದ ಪ್ರಧಾನ ಮಂತ್ರಿಯಾದಶ್ರೀ ನರೇಂದ್ರ ಮೋದಿಯವರುಸದ್ರಿ ಬ್ಯಾಂಕ್ಗೆ ಕನಿಷ್ಠ 5 ಕೆ.ಜಿಆಹಾರಧಾನ್ಯವನ್ನುದಾನವಾಗಿ ನೀಡುವ ಮೂಲಕ ಸದ್ಯದಲ್ಲೇಖಾತೆಯನ್ನು ತೆರೆಯಲಿದ್ದಾರೆ.
ಹಸಿದವರಿಗೆ ಅನ್ನಕೊಡಬೇಕೆಂಬ ಕಳಕಳಿ ಜನ ಸಾಮಾನ್ಯರಲ್ಲಿಇದ್ದರೂ ಸಂಘ-ಸಂಸ್ಥೆಗಳ, ಸರಕಾರದ ವಿವಿಧಕಾರ್ಯಕ್ರಮಗಳ ಮೂಲಕ ಸಹಾಯ ಹಸ್ತ ನೀಡಿದಾಗಆ ದಾನವು ಸದ್ಭಳಕೆಯಾಗುತ್ತಿದೆಯೇ ಎಂಬುದರಉತ್ತರ ಶೂನ್ಯ ಎಂಬ ಭಾವನೆ ಬಹುತೇಕ ಮಂದಿಯಲ್ಲಿಇದೆ. ಆದರೆಅನಾಜ್ ಬ್ಯಾಂಕ್ಒಂದು ಮುಕ್ತ ಅವಕಾಶವಾಗಿದ್ದು ಪಾರದರ್ಶಕವಾಗಿ ಸಹಾಯ ಹಸ್ತ ನೀಡಲುಒಂದು ಮುಕ್ತ ಅವಕಾಶ ಜೊತೆಗೆ ಸದ್ಭಳಕೆಯ ವಿವರವುಸಮರ್ಪಕವಾಗಿತಿಳಿಯುವುದರಿಂದ ಬಹುತೇಕಜನರಲ್ಲಿಆಶಾಭಾವನೆ ನೀಡುತ್ತದೆ.ಒಂದು ಸಮಾಜದಆರೋಗ್ಯಕರ ಬೆಳವಣಿಗೆಗೆ ವೇದಿಕೆಯಾಗಿದೆ.
ಉತ್ತರ ಪ್ರದೇಶದಅತ್ಯಂತ ಬರಪೀಡಿತ ಪ್ರದೇಶವಾದಉತ್ತರಖಾಂಡ್ನಲ್ಲಿ ಹಾಗೂ ಭಾರತದೇಶದಾದ್ಯಂತಅನಾಜ್ ಬ್ಯಾಂಕ್ನ್ನುವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ವಿಶಾಲ್ ಭಾರತ್ ಸೇವಾ ಸಂಸ್ಥೆಯ ಸ್ಥಾಪಕರು ಹಾಗೂ ಅನಾಜ್ ಬ್ಯಾಂಕಿನಅಧ್ಯಕ್ಷರೂಆಗಿರುವಡಾ|| ರಾಜೀವ್ ಶ್ರೀವಾತ್ಸವ್ರ ಪ್ರಕಾರಈ ಬ್ಯಾಂಕ್ ಸಾಮಾಜಿಕ ಸಾಮರಸ್ಯ ಹಾಗೂ ಭ್ರಾತೃತ್ವವನ್ನು ಬೆಸೆಯುವಕೊಂಡಿಯಾಗಿ ಕೆಲಸ ಮಾಡುತ್ತಿದೆ.ಈ ಯೋಜನೆಯಲ್ಲಿ ಸುಮಾರು 80 ಕುಟುಂಬಗಳು ಫಲಾನುಭವಿಗಳಾಗಿದ್ದು ಕೀನ್ಯಾ ಹಾಗೂ ಸಿಂಗಾಪುರದಂತಹ ವೀದೇಶಗಳಿಂದಲೂ ಆಹಾರ ಧಾನ್ಯಗಳು ಠೇವಣಿಯಾಗಿ ಬರುತ್ತಿದೆ.ಎನ್ನುತ್ತಾರೆ ಹಾಗೂಅನಾಜ್ ಬ್ಯಾಂಕಿನ ಪ್ರಬಂಧಕಿಯಾದನಿಧಿ ತ್ರಿಪಾಠಿಯ ಹೇಳುವಂತೆ ಸದ್ರಿ ಬ್ಯಾಂಕ್ ಮೂಲಕ ಆಹಾರ ಧಾನ್ಯಗಳ ಜೊತೆಜೊತೆಗೆ ಹಣ್ಣು ತರಕಾರಿಗಳು ಹಾಗೂ ಸಾಂಬಾರ ಪದಾರ್ಥಗಳನ್ನು ವಿತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ.
ಈಯೋಜನೆಯನ್ನುವಿಶಾಲ್ ಭಾರತ್ ಸೇವಾ ಸಂಸ್ಥಾನವು ನವರಾತ್ರಿಯ ದಿನ ಉತ್ತರ ಪ್ರದೇಶದ ವರುಣಾನಗರಕಾಲೋನಿಯ ಹುಕುಲ್ಗಂಜ್ ಪ್ರದೇಶದಲ್ಲಿಪೇಟ್ ಭರೋ (ಹೊಟ್ಟೆತುಂಬಿಸು) ಎಂಬ ಅಭಿಯಾನದ ಮೂಲಕ ಪ್ರಾರಂಭಿಸಿದ್ದು ಆ ಒಂದು ದಿನದಲ್ಲೇ 688 ಕೆ.ಜಿಆಹಾರಧಾನ್ಯವನ್ನು ಸಂಗ್ರಹಿಸಲಾಗಿತ್ತು.
ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರವುಅತ್ಯಂತ ಪ್ರಮುಖವಾದಅತ್ಯವಶ್ಯಕತೆಯಾಗಿದ್ದುಜಾಗತೀಕರಣದಧಾವಂತದಲ್ಲಿ ಸಂಪತ್ತು ಉಳ್ಳವರಲ್ಲೇ ಕ್ರೋಢಿಕರಣವಾಗುತ್ತಿದೆ. ಹಾಗೂಅದೆಷ್ಟೋ ಮಂದಿಗೆ ಅನ್ನದ ಮೇಲೆ ತಮ್ಮ ಹೆಸರನ್ನೇ ಬರೆದಿರದಂತಹ ಶೋಚನೀಯ ಸನ್ನಿವೇಶಗಳನ್ನು ಕಾಣಬಹುದಾಗಿದೆ.ಪೌಷ್ಠಿಕ ಆಹಾರಒದಗಣೆಒಂದು ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿಯಾಗಿದ್ದುಇದನ್ನು ನಿರ್ವಹಿಸುವುದು ಕೇವಲ ಸರ್ಕಾರದಜವಾಬ್ದಾರಿ ಮಾತ್ರವಲ್ಲದೇ ಸಂಘಸಂಸ್ಥೆಗಳು ಹಾಗೂ ಜನಸಾಮಾನ್ಯರಾಗಿ ನಮ್ಮೆಲ್ಲರಕರ್ತವ್ಯವೂ ಹೌದು.
ಅನ್ನದಾತೋ ಸುಖೀ ಭವ ಎಂಬ ಮಾತಿನಂತೆ 9 ಮಂದಿ ಹುಡುಗಿಯರಮೂಲಕ ಸ್ಥಾಪಿತವಾದಅನಾಜ್ ಬ್ಯಾಂಕ್ಹಸಿವು ಮುಕ್ತ ದೇಶವನ್ನಾಗಿಸಲು ಹೊರಟಿದೆ, ಈ ಮೂಲಕ ಬ್ಯಾಂಕ್ನಆಶಯವುಈಡೇರಿಕೆಯಲ್ಲಿ ನಮ್ಮೆಲ್ಲರ ಸಹಕಾರವುಅಗತ್ಯವಾಗಿದೆ.ಅನಾಜ್ ಬ್ಯಾಂಕಿನ ಪ್ರಯತ್ನಕ್ಕೆ ಶುಭವಾಗಲೆಂದುಒಮ್ಮೆ ಹಾರೈಸೋಣವೇ…….?
ಸಂತೋಷ್ ರಾವ್
ಮೊ:9742884160


