ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಪಂಡ್ಇಂಟರ್ನ್ಯಾಷನಲ್ಯು.ಎಸ್. ಎ. ಇದರ ಆಶ್ರಯದಲ್ಲಿ ಮಂಗಳೂರಿನ ಆಯ್ದ ಶಿಕ್ಷಕ ಶಿಕ್ಷಣ ಶಿಕ್ಷಣಾರ್ಥಿಗಳಿಗೆ ( ಬಿ. ಇಡ್.)2 ದಿನಗಳ ಸಮನ್ವಯ ಶಿಕ್ಷಣ ಕಾರ್ಯಗಾರದಉದ್ಘಾಟನ ಸಮಾರಂಭವು ದಿನಾಂಕ 29-3-2016ರಂದು ಶಾಲಾ ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.??????????????????????????????? ??????????????????????????????? ???????????????????????????????

ಕಾರ್ಯಗಾರವನ್ನುಮಂಗಳೂರು ಆಕಾಶವಾಣಿಕೇಂದ್ರದಕಾರ್ಯಕ್ರಮ ನಿವಾರ್ಹಕರಾದಡಾ| ಸದಾನಂದ ಪೆರ್ಲಉದ್ಘಾಟಿಸಿ ಮಾತನಾಡುತ್ತಾರಾಷ್ಟ್ರದ ಪ್ರಗತಿಯನ್ನು ವಿಶ್ಲೇಷಿಸುವ ಮಾನದಂಡದೇಶದಅಧ್ಯಾಪಕರು, ರಾಷ್ಟ್ರದ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು, ಶಿಕ್ಷಕರು ಸಮಾಜದಲ್ಲಿ ಮಾನವೀಯತೆನ್ನು ಬೆಳೆಸುವ ವ್ಯಕ್ತಿಯಾಗಬೇಕು, ವಿಕಲಚೇತನ ಮಕ್ಕಳನ್ನು ಸಮಾಜದಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡಬೇಕು. ಅವರ ಬಗ್ಗೆ ಚಿಂತನೆ, ಕಾಳಜಿ, ಸ್ಪಂದನೆ, ಮನೋಸ್ಥೆರ್ಯ, ಆತ್ಮ ಬಲವನ್ನುತುಂಬುವ ಕೆಲಸವನ್ನು ಮಾಡಲುಇಂತಹಕಾರ್ಯಗಾರದ ಮೂಲಕ ಬಿ.ಇಡ್.ವಿದ್ಯಾರ್ಥಿಗಳಿಗೆ ಚೈಲ್ಡ್ ಪಂಡ್ ಇಂಟರ್ನ್ಯಾಷನಲ್ಯು.ಎಸ್. ಎ ಯು ಉತ್ತಮ ಅವಕಾಶವನ್ನು ಒದಗಿಸಿ ಕೊಟ್ಟಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಆಯೋಜಕರಾದ ಮಂಗಳ ಜ್ಯೋತಿ ಸಮಗ್ರ ಶಾಲೆಯ ಯೋಜನಾಧಿಕಾರಿಯಾದ   ಪುನೀತ್ ಡಿ. ಶೆಟ್ಟಿಯವರು ಮಾತನಾಡಿ  ಬಿ.ಎಡ್. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ, ಮಕ್ಕಳಲ್ಲಿ ಕಂಡು ಬರುವ ವಿವಿಧ ನ್ಯೂನ್ಯತೆಗಳು, ಕಾರಣಗಳು, ಪರಿಹಾರ ಉಪಾಯಗಳು ತಿಳಿಸಿ ಕೊಡುವುದು, ವಿವಿಧ ರೀತಿಯ ಆಧುನಿಕ ಸಲಹ ಸಲಕರಣೆಗಳ ಬಳಸುವ ಬಗ್ಗೆ ಮತ್ತು ಸಾಮನ್ಯ ಮಕ್ಕಳ ಜೊತೆ ವಿಶೇಷ ಸಾಮಾಥ್ರ್ಯದ ಮಕ್ಕಳಿಗೆ ಏಕ ರೀತಿಯ ಶಿಕ್ಷಣವನ್ನು ಯಾವರೀತಿ ನೀಡಬಹುದು ಎಂಬುದನ್ನು ಈ ಕಾರ್ಯಗಾರದಲ್ಲಿ ತಿಳಿಸಿಕೊಡಲಾಗುತ್ತದೆ  ಎಂದು ತಿಳಿಸಿದರು,
ಕಾರ್ಯಕ್ರಮದ ಅಧ್ಯಕ್ಷರಾದ ಮಂಗಳ ಜ್ಯೋತಿ ಸಮಗ್ರ ಶಾಲೆ,  ಚೈಲ್ಡ್ ಪಂಡ್ಇಂಟರ್ನ್ಯಾಷನಲ್ಯು. ಎಸ್. ಎ.ಯಕಾರ್ಯದರ್ಶಿ ಗಳಾದ ಪ್ರೊ. ಎ. ರಾಜೇಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣ ಎನ್ನುವ ವ್ಯವಸ್ಥೆಅತ್ಯಂತ ಸಂಕೀರ್ಣವಾದ ವ್ಯವಸ್ಥೆ, ಮನುಷ್ಯನಿಗೆ ಎಲ್ಲಿ ಬೆಲೆ ಇರುತ್ತದೋಅಲ್ಲಿ ಮನುಷ್ಯತ್ವಕ್ಕೆ ಬೆಲೆ ಇದೆ. ಅಧ್ಯಾಪನಒಂದು ಶ್ರೇಷ್ಟ ಕಲೆ.ಅಸಹಾಯಕರಕಣ್ಣೊರೆಸಲು ಸಾಧ್ಯವಿಲ್ಲದಿದ್ದರೆ ಅ ಸಮಾಜಯಾಕೆ ಬೇಕು? ನಾವೆಲ್ಲ ಬೆಳಕಲ್ಲಿದ್ದೇವೆ, ಬೆಳಕನ್ನು ಹಂಚಿಕೊಳ್ಳುವ ಕತ್ತಲೆಯಲ್ಲಿರುವವರನ್ನು ಬೆಳಕಿನಡೆಗೆ ತರುವಂತಹ ಮಹತ್ಕಾರ್ಯದಲ್ಲೆ ಕೈ ಜೋಡಿಸುವ,ವಿಶೇಷ ಸಾಮಥ್ರ್ಯ ಮಕ್ಕಳನ್ನು ನಗುವಂತೆ ಮಾಡುವ,ಅವರಿಗೆ ಪ್ರೀತಿಯನ್ನು ನೀಡಿ ಅವಕಾಶವನ್ನು ಒದಗಿಸಿ ಕೊಡುವ, ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿರುವ ಕೆಟ್ಟ ಮುಖವಾಡವನ್ನು ಕಳಚಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುವ ಎಂದು ತಿಳಿಸಿದರು.
ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಪಂಡ್ಇಂಟರ್ನ್ಯಾಷನಲ್ಯು.ಎಸ್. ಎ.ಯ ಯೋಜನಾವಲಯಕ್ಕೆ ಒಳ ಪಟ್ಟ ಒಟ್ಟು 10 ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಮೋಸೆಸ್ಜೈಶೇಖರ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಅಂಗವಿಕಲ ಮಕ್ಕಳಿಗೂ ಸೂಕ್ತವಾದ ಪ್ರೋತ್ಸಾಹ ಮತ್ತುಅವಕಾಶವನ್ನು ನೀಡಿದಾಗಅವರು ಸಮಾಜದಲ್ಲಿಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿಯಾಗಿತ್ತದೆ.ಈ ನಿಟ್ಟಿನಲ್ಲಿಇಂತಹಕಾರ್ಯಗಾರವು ಬಿ.ಎಡ್.ವಿದ್ಯಾರ್ಥಿಗಳಿಗೆ ಪೂರಕವಾಗಿದೆಎಂದು ತಿಳಿಸಿದರು.
ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿಯಾದ ಗಣೇಶ್ ಭಟ್, ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಯರಾದ ಆಶೋಕ್ ಕುಮಾರ್, ಎಸ್. ಡಿ. ಎಂ ಐ.ಟಿ.ಐ. ವಿಭಾಗದ ಪ್ರಾಂಶುಪಾಲರಾದ ಶ್ರೀಯುತ ನರೇಂದ್ರ ಉಪಸ್ಥಿತರಿದ್ದರು.
ಈ ತರಬೇತಿಕಾರ್ಯಗಾರದಲ್ಲಿ ಮಂಗಳೂರಿನ ವಿವಿಧ ಬಿ. ಇಡ್.ಕಾಲೇಜಿನ ಒಟ್ಟು 95 ಶಿಕ್ಷಣಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು  ರಮ್ಯ ಹರೀಶ್ ನಿರೂಪಿಸಿ, ವಾಕ್ ಮತ್ತು ಶ್ರವಣ ತಜ್ಞರಾದ ಗುರುಪ್ರಸಾದ್ ವಂದಿಸಿದರು.

By suddi9

Leave a Reply

Your email address will not be published. Required fields are marked *