ಕೈಕಂಬ: ಗುರುಪುರ ಕೈಕಂಬದ ಮೆಸ್ಕಾಂ ಇಲಾಖೆಯ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತಿಗೊಂಡ ಜಗದೀಶ್ ಮೂರ್ತಿಯವರನ್ನು ಗುತ್ತಿಗೆದಾರರಿಂದ ಮಾ.28ರಂದು ಮಂಗಳವಾರ ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 38ವರ್ಷಗಳ ಕಾಲ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತಿಗೊಂಡ ಜಗದೀಶ್ ಮೂರ್ತಿಯವರನ್ನು ಕಾವೂರು ಮೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಲೂಡ್ ಸ್ವಾಮಿ ಅವರು ಗುತ್ತಿಗೆದಾರರ ಪರವಾಗಿ ಸನ್ಮಾನಿಸಿದರು ಹಾಗೂ ಜಗದೀಶ್ ಮೂರ್ತಿಯವರ ಧರ್ಮಪತ್ನಿಯಾದ ಲತಾ.ಜೆ ಮೂರ್ತಿಯವರನ್ನು ಭಾರತೀಯ ಸಂಸ್ಕøತಿಯಂತೆ ಕುಂಕುಮ, ಬಳೆ, ತಲೆಗೆ ಹೂವು ಮುಡಿಸಿ ಗೌರವಿಸಿಲಾಯಿತು.

ಕೈಕಂಬ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ತಿಮ್ಮಪ್ಪ ಗೌಡ, ಹಿರಿಯ ಗುತ್ತಿಗೆದಾರರಾದ ಭಾಸ್ಕರ್ ಭಟ್, ಯಶವಂತ್ ಕೋಟ್ಯಾನ್, ಜಿ.ಮಹಮ್ಮದ್, ರಿಚರ್ಡ್ ಫೆರ್ನಾಂಡಿಸ್ ಮತ್ತಿರರು ಉಪಸ್ಥಿತರಿದ್ದರು. ಗುತ್ತಿಗೆದಾರರಾದ ಜಿ.ಮಹಮ್ಮದ್ ಸ್ವಾಗತಿಸಿ ಯಶವಂತ್ ಕೋಟ್ಯಾನ್ ವಂದಿಸಿದರು, ಮಾಧವಮಯ್ಯ ಕಾರ್ಯಕ್ರಮ ನಿರೂಪಿಸಿದರು.














