ಮೂಡುಬಿದರೆ: ಪುರಸಭೆ ತೆರವುಗೊಳಿಸಿದ ಅನಧಿಕೃತ ಗೂಡಂಗಡಿಗಳಿಗೆ ತಲಾ ರೂ 500 ದಂಡವಿಧಿಸಿ, ವಶಪಡಿಸಿಕೊಂಡ ಸೊತ್ತುಗಳನ್ನು ವಾರೀಸುದಾರರಿಗೆ ಬಿಟ್ಟುಕೊಡುವುದು ಹಾಗೂ ಗೂಡಂಗಡಿಗಳು, ಪುರಸಭೆ ಸೂಚಿಸುವ ಸ್ಥಳದಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡುವ ಕುರಿತು ಮಂಗಳವಾರ ನಡೆದ ಪುರಸಭಾ ಅಧಿವೇಶನದಲ್ಲಿ ತೀರ್ಮಾ ನಿಸಲಾಯಿತು.
ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೂಡಂಗಡಿ ತೆರವು, ಕಟ್ಟಡ ಲೈಸೆನ್ಸ್, ವಾರ್ಡ್ಗಳಿಗೆ ಅನುದಾನ ಹಂಚಿಕೆ ವಿಷಯಗಳು ಪ್ರಮುಖವಾಗಿ ಚರ್ಚೆಯಾದವು.

mdb_march29_5 (3)
ಸಮಿತಿ ರಚನೆಯ ಸಲಹೆ:
ಗೂಡಂಗಡಿಗಳ ಬಗ್ಗೆ ಹಿಂದಿನ ಸಭೆ0ುಲ್ಲಿ ತೆಗೆದುಕೊಂಡ ನಡವಳಿ0ುನ್ನು ಮುಖ್ಯಾಧಿಕಾರಿ ಶೀನ ನಾಯ್ಕ್  ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಹಿರಿ0ು ಸದಸ್ಯ ಪಿ.ಕೆ ಥೋಮಸ್ ಗೂಡಂಗಡಿಗಳ ಹೆಸರಿನಲ್ಲಿ ಒಳಬಾಡಿಗೆ ವ್ಯವಹಾರ ನಡೆ0ುುತ್ತಿದೆ. ಗೂಡಂಗಡಿ ಹೊಂದಿದವರೆ ಅಲ್ಲಿ ವ್ಯಾಪಾರ ಮಾಡುತ್ತಿದ್ದವರು ಕಡಿಮೆ. ಒಬ್ಬೊಬ್ಬ ಮೂರ್ನಾಲ್ಕು ಗೂಡಂಗಡಿ0ುನ್ನು ಹೊಂದಿ ದಿನಕ್ಕೆ ತಲಾ ರೂ 300ರಂತೆ ಒಳಬಾಡಿಗೆ ಪಡೆ0ುುತ್ತಾರೆ. ಇದೇ ರೀತಿ ನಾನು ಬ್ಯಾಂಕ್ ಸಾಲ ಪಡೆದು ಮೂರು ಗೂಡಂಗಡಿ ಹಾಕಲು ಪುರಸಭೆ ಅನುಮತಿ ಕೊಡುತ್ತದೆ0ೆು ಎಂದು ಪ್ರಶ್ನಿಸಿದ ಅವರು ಸ್ವಂತ ವ್ಯಾಪಾರಿಗಳಿಗೆ ತೊಂದರೆ ಆಗುವುದು ಬೇಡ. ಈಗ ವಶಪಡಿಸಿಕೊಂಡ ಅನಧಿಕೃತ ಗೂಡಂಗಡಿಗಳಿಗೆ ತಲಾ ರೂ 500 ದಂಡ ವಿಧಿಸಿ ವಾರೀಸುದಾರರಿಗೆ ಬಿಟ್ಟುಕೊಡಿ. ಮುಂದೆ ಪುರಸಭೆ ಸೂಚಿಸಿದ ಸ್ಥಳದಲ್ಲೆ ಅವರು ವ್ಯಾಪಾರ ಮಾಡಲಿ. ಈ ಬಗ್ಗೆ ಪುರಸಭೆ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಿ ಎಂದು ಸಲಹೆಯಿತ್ತರು.
ಈಗಾಗಲೇ ವ್ಯಾಪಾರವಿಲ್ಲದೆ ತೊಂದರೆ ಆಗಿರುವುದರಿಂದ ದಂಡ ವಿಧಿಸುವುದು ಬೇಡ ಎಂದು ರಮಣಿ ಮತ್ತು ಅಲ್ವಿನ್ ಮೆನೇಜಸ್ ಹೇಳಿದರು. ದಂಡ ವಿಧಿಸುವುದಕ್ಕೆ ಹೆಚ್ಚಿನ ಸದಸ್ಯರು ಒಪ್ಪಿಗೆ ಸೂಚಿಸಿದರಲ್ಲದೆ ಸ್ವಂತ ವ್ಯಾಪಾರ ಮಾಡುವವರಿಗೆ ಮಾತ್ರ ಗೂಡಂಗಡಿ ಇಡಲು ಅವಕಾಶ ನೀಡುವಂತೆ ಸಲಹೆ ನೀಡಿದರು.
ಮಹಾ0ೋಜನೆ ಅನುಷ್ಠಾನವಾಗದಿದ್ದುರಿಂದ ಅಲ್ಲಿ0ುವರೆಗೆ ಕಟ್ಟಡಗಳಿಗೆ ಪುರಸಭೆ0ೆು ಲೈಸನ್ಸ್ ನೀಡಬೇಕು, ಮೂಡಾದಿಂದ ತಾಂತ್ರಿಕ ಸಲಹೆ ಪಡೆ0ುುವುದು ಬೇಡ ಎಂದು ವಕೀಲ ಬಾಹುಬಲಿ ಪ್ರಸಾದ್ ಹೇಳಿದರು. ಇದಕ್ಕೆ ಹನೀಪ್ ಅಲಂಗಾರ್ ರತ್ನಾಕರ ದೇವಾಡಿಗ ಹಾಗೂ ಪಿ.ಕೆ ಥೋಮಸ್ ದನಿಗೂಡಿಸಿದರು. ಈ ಬಗ್ಗೆ ಮೂಡಾ ಅಧ್ಯಕ್ಷರು ಪುರಸಭೆಗೆ ಒಪ್ಪಿಗೆ ಪತ್ರ ಕೊಟ್ಟರೆ ಅದನ್ನು ಸರಕಾರಕ್ಕೆ ಕಳಿಹಿಸಿಕೊಟ್ಟು ಅನುಮತಿ ಪಡೆ0ೋಣ ಎಂದು ಸದಸ್ಯರು ಹೇಳಿದಾಗ ಅದಕ್ಕೆ ಆಕ್ಷೇಪಿಸಿದ ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ `ಪುರಸಭೆ0ೆು ಸರ್ಕಾ ರ’  ಇಲ್ಲೆ ನಿರ್ಧಾರ ತೆಗೆದುಕೊಳ್ಳೋಣ ಎಂದರು. ಆದರೆ ಸರ್ಕಾರದ ಸುತ್ತೋಲೆ0ುನ್ನು ಉಲ್ಲಂಘಿಸಸಲು ಮುಖ್ಯಾಧಿಕಾರಿ ನಿರಾಕರಿಸಿದರು.
ಕ್ರಿಯಾ ಯೋಜನೆ0ುಲ್ಲಿ ಕಲ್ಲಬೆಟ್ಟು ವಾರ್ಡ್  ಅನುದಾನ ಕಾದಿರಿಸದಕ್ಕೆ ನಾಮನಿರ್ದೇಶನ ಸದಸ್ಯ ಅಲ್ವಿನ್ ಮೆನೇಜಸ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ಭಾಗದ ಜನರನ್ನು ಪುರಸಭೆ ದ್ವಿತೀ0ು ದರ್ಜೆ  ನಾಗರಿಕರಂತೆ ಕಾಣುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಮನವಿ ನೀಡಿದರೂ ಸ್ಪಂದಿಸಿಲ್ಲ ಎಂದು ಏರು ಧ್ವನಿ0ುಲ್ಲಿ ಆರೋಪಿಸಿದರು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಬಿಲ್ ಪಾವತಿಸದಂತೆ ಆಕ್ಷೇಪ ಪತ್ರ ನೀಡಿದರೂ ಅಧಿಕಾರಿಗಳು ಕಮಿಷನ್ ಆಸೆಗೆ ಬಿಲ್ ಪಾವತಿಸಿದ್ದೀರಿ ಎಂಬ ಆರೋಪ ಅಧಿಕಾರಿಗಳ ಅಸಮಧಾನಕ್ಕೆ ಕಾರಣವಾಯಿತು. ಕೊನೆಗೆ ಕ್ರೀಯಾಯೋಜನೆ ಕಟ್ಟೆ0ುಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಕ್ಕೆ ಉಮೇಶ್ ದೇವಾಡಿಗ ಮತ್ತು ಮನೋಜ್ ಶೆಟ್ಟಿ ಆಕ್ಷೇಪ ಎತ್ತಿದರು. ಹಾಸುಕಲ್ಲು ಹಾಕಿ ಸಣ್ಣಪುಟ್ಟ ದುರಸ್ತಿ ಮಾತ್ರ ಎಂದು ಅಧ್ಯಕ್ಷರು ಉತ್ತರಿಸಿದರು.

By suddi9

Leave a Reply

Your email address will not be published. Required fields are marked *