ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ 13ಯಿಂದ 8 ಅಡಿಗೆ ಇಳಿದಿದೆ. ಇದರಿಂದಾಗಿ ಮಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಎಎಂಆರ್ ಪವರ್ ಪ್ರಾಜೆಕ್ಟ್ಗೆ ಲಿಖಿತ ಸೂಚನೆ ನೀಡಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ 13 ಅಡಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೀರುಇ ಬಿಡುಗಡೆ ಮಾಡುವಂತೆ ಮನಪಾದ ಸೂಚನೆಯನ್ವಯ ಮಾ. 28ರಿಂದ ಮಳೆಗಾಲ ಆರಂಭವಾಗುವರೆಗೆ ನೀರು ಹರಿಯ ಬಿಡಲು ಕಂಪೆನಿ ತೀರ್ಮಾನಿಸಿದೆ. ಆದ್ದರಿಂದ ಎಎಂಆರ್ ಡ್ಯಾಂನ ಮೇಲ್ಬಾಘದ ಗ್ರಾಮ ವಾಸಿಗಳು ನದಿಗೆ ಅಳವಡಿಸಿರುವ ಪಂಪ್ ಬಳಕೆದಾರರು ನೀರಿನ ಏರಿಳಿತಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳವಂತೆ ಹಾಗೂ ಕೆಳ ಪ್ರದೇಶದ ಗ್ರಾಮವಾಸಿಗಳು ಮತ್ತು ಸಾಕು ಪ್ರಾಣಿಗಳ ಸಂರಕ್ಷಣೆಯ ದೃಷ್ಟಿಯಿಂದ ಮುಂಜಾಗೃತ ವಹಿಸವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
