ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ “ಭಗತ್ ಸಿಂಗ್, ಸುಖ್‍ದೇವ್, ರಾಜ್‍ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ” ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ನಡೆಯಿತು.
DSC_1417ದೇಶದ ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಗೈದ ಭಾರತಮಾತೆಯ ಸುಪುತ್ರರಾದ ಭಗತ್‍ಸಿಂಗ್, ರಾಜ್‍ಗುರು, ಸುಖ್‍ದೇವರ ಬಲಿದಾನದ ಸ್ಮರಣೆಯನ್ನು ಅಖಿಲಭಾರತೀಯ ವಿದ್ಯಾರ್ಥಿಯ ಪರಿಷತ್ ವತಿಯಿಂದ ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ರಕ್ತದಾನ ಶಿಬಿರವನ್ನು ಅಯೋಜಿಸಿದ್ದರು. ಕಾರ್ಯಕ್ರಮವನ್ನು ವಕೀಲರಾದ ಪ್ರಸಾದ್ ಕುಮಾರ್ ಉದ್ಘಾಟಿಸಿದರು . ರಕ್ತದಾನ ಶಿಬಿರದಲ್ಲಿ ಬಂಟ್ವಾಳ ವಿವಿಧ ಕಾಲೇಜ್‍ನ ನೂರಾರು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಹುತಾತ್ಮರನ್ನು ಸ್ಮರಿಸಿದರು.

ಈ ಶಿಬಿರದಲ್ಲಿ ಪಾದರ್ ಮುಲ್ಲರ್ ಆಸ್ಪತ್ರೆಯ ಜಿಲ್ಲಾ ಸಂಚಾಲಕರಾದ ಪ್ರಣಾಮ್‍ರಾಜ್, ರಾಜ್ಯ ಕಾರಿಣಿ ಸದಸ್ಯರಾದ ಸುನಿಲ್ ಭಟ್ ಮತ್ತು ಪ್ರಜ್ವಲ್ ಕುಮಾರ್ ಸರಪಾಡಿ, ತಾಲೂಕು ಸಂಚಾಲಕರಾದ ಅಶ್ವಥ್ ರಾವ್, ಕಾಮಾಜೆ ಕಾಲೇಜಿನ ಅ. ಭಾ. ವಿ. ಪ ಘಟಕ ಅಧ್ಯಕ್ಷರಾದ ಪ್ರದೀಪ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸ್ನಾತಕೋತ್ತರ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ನೂಜಿಪಾಡಿ, ನಗರ ಸಹಕಾರ್ಯದರ್ಶಿ ನಿಧಿ ಬಿ. ಎನ್, ಕೀರ್ತನ, ತಾರನಾಥ್, ಸುದರ್ಶನ್, ರಾಘವೇಂದ್ರ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *