ಮೂಡುಬಿದರೆ: ಅಲಂಗಾರು ಉಳಿಯದ 24 ವರ್ಷ ವಯಸ್ಸಿನ ಯುವಕನೋರ್ವ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡು ಅಸಹಾಯಕನಾಗಿ ಶಸ್ತ್ರಚಿಕಿತ್ಸೆಗಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾನೆ.
ಉಳಿಯ ಜಗದೀಶ ಆಚಾರ್ಯ ಅವರ ಮಗ ಪ್ರಾಣೇಶ್ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವಾತ. ಕಿಡ್ನಿ ಜೋಡಣೆ ಅಥವಾ ಶಸ್ತ್ರಚಿಕಿತ್ಸೆಗೆ ಸುಮಾರು 4 ಲಕ್ಷದಷ್ಟು ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ತಿಂಗಳಿಗೆ ಸುಮಾರು 15 ಸಾವಿರದಷ್ಟು ಔಷದಿಗೆ ಬೇಕಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಅಷ್ಟೊಂದು ದೊಡ್ಡ ಮೊತ್ತವನ್ನು ಒಟ್ಟುಗೂಡಿಸಲು ಅಸಾಧ್ಯವಾಗಿದೆ.
ಧನಸಹಾಯ ಮಾಡಲಿಚ್ಛಿಸುವವರು ಪ್ರಾಣೇಶ್ ಹೆಸರಲ್ಲಿ ಮೂಡುಬಿದಿರೆ ಕರ್ನಾಟಕ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ 4822500101913901 (ಐಎಫ್‍ಎಸ್‍ಸಿ ಕೋಡ್ – ಕೆಎಆರ್‍ಬಿ0000482) ಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಅಥವಾ ಅವರ ಮೊಬೈಲ್ ಸಂಖ್ಯೆ 9611535210 ನ್ನು ಸಂಪರ್ಕಿಸಬಹುದು.
