ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂಟ್ವಾಳ ಕಲ್ಲಡ್ಕ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ದಶಮಾನೋತ್ಸವ ಕಾರ್ಯಕ್ರಮ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಡ್ಕ ವಲಯ , ಆಡಳಿತ ಜೀರ್ಣೋದ್ದಾರ ಸಮಿತಿ, ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ಶ್ರೀ ಕ್ಷೇತ್ರ ನಿಟಿಲಾಪುರ ಮತ್ತು ಪ್ರಗತಿ ಬಂಧು , ಸ್ವ ಸಹಾಯ ಸಂಘಗಳ ಕಲ್ಲಡ್ಕ ವಲಯದ ಒಕ್ಕೂಟಗಳ ಸಹಕಾರದೊಂದಿಗೆ ಪರಮ ಪೂಜ್ಯ ಪದ್ಮ ಭೂಷಣ ರಾಜಶ್ರೀ ಡಾ| ಡಿ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದೊಂದಿಗೆ, ಶ್ರೀ ಸಾಮೂಹಿಕ ಸತ್ಯ ನಾರಾಯಣ ಪೂಜೆ ಪ್ರಾರಂಭಗೊಂಡು ಈ ಪೂಜಾ ಕಾಯಕ್ರಮವನ್ನು ಒಕ್ಕೂಟದ ಅಧ್ಯಕ್ಷರುಗಳು, ಮೇಲ್ವಿಚಾರಕರು, ಆಡಳಿತ ಮಂಡಳಿಯ ಕಾರ್ಯಧ್ಯಕ್ಷರು , ಸೇವಾ ಪ್ರತಿನಿಧಿಗಳು ಮತ್ತು ಊರ ಗಣ್ಯರ ಸಂಕಲ್ಪದೊಂದಿಗೆ ಪ್ರಾರಂಭಿಸಲಾಯಿತು. ಸುಮಾರು 1000 ದಂಪತಿಗಳು ವೃತಾಧಾರಿಗಳಾಗಿ ಪೂಜೆಯಲ್ಲಿ ಕುಳಿತಿಟ್ಟು , ಪೂಜಾ ಕಾರ್ಯಕ್ರಮವನ್ನು , ಧಾರ್ಮಿಕ ಉಪನ್ಯಾಸವನ್ನು ಪೂಜಾ ಅರ್ಚಕರಾದಂತಹ ಕಶೆಕೋಡಿ ಶ್ರೀ ಸೂರ್ಯ ನಾರಾಯಣ ಭಟ್ ರವರು ನೀಡಿದರು.

ನಂತರ ಒಕ್ಕೂಟ ಪದಗ್ರಹಣ ಕಾರ್ಯಕ್ರಮ , ದಶಮಾನೋತ್ಸವ ಕಾರ್ಯ ಕ್ರಮವನ್ನು ಊರಿನ ಗಣ್ಯರು, ಮಾಜಿ ಅಧ್ಯಕ್ಷರು ಜನಜಾಗೃತಿ ವೇದಿಕೆ , ಬಂಟ್ವಾಳ ಶ್ರೀ ಎ ರುಕ್ಮಯ್ಯ ಪೂಜಾರಿಯವರು ದೀಪ ಬೆಳಗಿಸಿ ಹಿಂಗಾರ ಅರಳಿಸಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಕ್ಕೆ ಸೇರಿ ಸದಸ್ಯರಲ್ಲಿ ಶಿಸ್ತು , ವ್ಯವಹಾರ ಜ್ಞಾನ ಸಂಘಟನಾ ಶಕ್ತಿಯಲ್ಲಿ ವೈಯಕ್ತಿಕ ಬದಲಾವಣೆ ಕುಟುಂಬದ ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿರುತ್ತದೆ. ಈ ಕಾರ್ಯಕ್ರಮದಿಂದ ಗ್ರಾಮದ ಮತ್ತು ವಲಯದ ಹೊಸ ಬದಲಾವಣೆಯಾಗಿರುತ್ತದೆ. ಎಲ್ಲರೂ ಹೊಂದಾಣಿಕೆಯಿಂದ ಬಾಳುವಂತೆ ಪ್ರೇರೇಪಣೆ ನೀಡಿದಂತಾಗಿರುತ್ತದೆ. ಆದುದರಿಂದ ಈ ಒಂದು ಕಾರ್ಯಕ್ರಮ ಅತ್ಯುತ್ತಮ ಆಗಿರುತ್ತದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ನಂತರ ಮಾಜಿ ಶಾಸಕರು ವಿಟ್ಲ ವಿಧಾನ ಸಭಾ ಕ್ಷೇತ್ರ ಶ್ರೀ ಪದ್ಮನಾಭ ಕೊಟ್ಟಾರಿ ಇವರು ಮುಖ್ಯ ಅತಿಥಿಯಾಗಿ ಒಗ್ಗಟ್ಟಿಗೆ , ಯಶಸ್ಸಿಗೆ ಸಮಾನತೆಗೆ ಈ ಕಾರ್ಯಕ್ರಮವನ್ನು ನೋಡಿ ಎಲ್ಲರೂ ಕಲಿಯ ಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾನತೆಗೆ ಮಾದರಿಯಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಮುಖ್ಯ ಅತಿಥಿಯಾಂತಹ ಶ್ರೀ ಮಹಾವೀರ ಅಜ್ರಿ ( ಕರಾವಳಿ ಪ್ರಾದೇಶಿಕ ನಿರ್ದೇಶಕರು, ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಉಡುಪಿ ವಿಭಾಗ) ಇವರು ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನಲ್ಲಿ ಹತ್ತು ವರ್ಷದಿಂದ ನಡೆದು ಬಂದಂತಹ ಹಾದಿ ಮತ್ತು ಬದಲಾವಣೆ ಯಾದಂತಹ ವಿಚಾರ, ಪ್ರಸ್ತುತ ಯೋಜನೆಯಲ್ಲಿ ನಡೆಯುತ್ತಿರುವಂತಹ ಕಾರ್ಯಕ್ರಮ, ವ್ಯಕ್ತಿಯ ಬದಲಾವಣೆ ಎಲ್ಲಾ ಕಾರ್ಯಕ್ರಮದಲ್ಲಿ ಸಮಾನತೆಯಿಂದ ಪಾಲ್ಗೊಳ್ಳುವಂತೆ ಮಾಡಿದೆ, ಆದುದರಿಂದ ತಾಲೂಕಿನಲ್ಲಿಯೇ ಈ ಕಾರ್ಯಕ್ರಮ ಅತ್ಯುತ್ತಮ ಎಂದು ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಶ್ರೀ ಪ್ರಕಾಶ್ ಕಾರಂತರು (ಮಾಜಿ ಅಧ್ಯಕ್ಷ , ರೋಟರಿ ಕ್ಲಬ್ ಬಂಟ್ವಾಳ ಮತ್ತು ಜನಜಾಗೃತಿ ವಲಯಾಧ್ಯಕ್ಷರು ) ಇವರು ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಸ್ತು ಬದ್ಧವಾದ ಕಾರ್ಯಕ್ರಮ, ಯಾವುದೇ ರಾಜಕೀಯವಿಲ್ಲದ ಮತ್ತು ಸಮಾನತೆಯ ಕಾರ್ಯಕ್ರಮ. ಈ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮ ಎಂದು ಹೆಗ್ಗಳಿಕೆ ಗಳಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಶುಭ ಹಾರೈಸಿದರು. ಅದರಂತೆಯೇ ಮತ್ತೋರ್ವ ಅತಿಥಯಾದಂತಹ ಶ್ರೀ ಎ.ಸಿ ಭಂಡಾರಿ (ಸ್ಥಾಪಕಾಧ್ಯಕ್ಷರು, ಜನಜಾಗೃತಿ ವೇದಿಕೆ ಬಂಟ್ವಾಳ ಇವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಶ್ರೀ ಅಶೋಕ್ ಕುಮಾರ್ ಬರಿಮಾರು , ಕಾರ್ಯಧ್ಯಕ್ಷರು , ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ನಿಟಲಾಪುರ ಇವರು ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಪದಗ್ರಹಣ ಕಾರ್ಯಕ್ರಮ, ಶ್ರೀ ಸಾಮೂಹಿಕ ಸತ್ಯ ನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಮೂಡಿ ಬಂದಿದೆ. ಈ ಕಾರ್ಯಕ್ರಮದಲ್ಲಿ ಇಷ್ಟು ಜನ ಸೇರಿರುವುದಕ್ಕೆ ಸಂಘಟನಾಶಕ್ತಿ , ಹೊಂದಾಣಿಕೆ ಮುಖ್ಯ ಮತ್ತು ವ್ಯವಸ್ಥಿತವಾದ ಕಾರ್ಯಕ್ರಮ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಶ್ರೀ ಸಂತೋಷ್ ಕುಮಾರ್ ಶೆಟ್ಟಿ (ಬಿ.ಇ ಸಿವಿಲ್ ಮ್ಯಾನೇಜಿಂಗ್ ಡೈರೆಕ್ಟರ್ , ಮಾತಾ ಡೆವಲಪರ್ಸ್ ಮಂಗಳೂರು) ಇವರು ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ ಮೆಚ್ಚುಗೆ ಸೂಚಿಸಿದರು.
ಈ ಕಾರ್ಯ ಕ್ರಮದಲ್ಲಿ ಶ್ರೀ ಜಗನ್ನಾಥ ಚೌಟ, ನಿಟಿಲಾಕ್ಷ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಇದ್ದು ಈ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು. ಅಂತೆಯೇ ಜೀರ್ಣೋದ್ಧಾರ ಸಮಿತಿ ಸದಸ್ಯರಾದಂತಹ ಶ್ರೀ ಬಟ್ಯಪ್ಪ ಶೆಟ್ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು. ಹಾಗೆಯೇ ಶ್ರೀ ವಿಠಲನಾಯ್ಕ (ಅಧ್ಯಕ್ಷರು, ಬಾಳ್ತಿಲ ಗ್ರಾಮ ಪಂಚಾಯತ್) ಇವರು ಕೂಡ ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯದ ಒಕ್ಕೂಟಗಳ ಪದಾಧಿಕಾರಿಗಳ ವೀಳ್ಯ ತಾಂಬೂಲ ಹಸ್ತಾಂತರ ಮೂಲಕ ವರ್ಷದ ಜವಾಬ್ದಾರಿಯನ್ನು ನೀಡಲಾಯಿತು. ಈ ಎರಡು ವರ್ಷದ ಜವಾಬ್ದಾರಿ ನಿರ್ವಹಿಸಿದಂತಹ ಒಕ್ಕೂಟದ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಂತೆಯೇ ಕಳೆದ 2 ವರ್ಷ ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿದಂತಹ ವಲಯ ಒಕ್ಕೂಟದ ಅಧ್ಯಕ್ಷರಾದಂತಹ ಶ್ರೀ ವೆಂಕಟ್ರಾಯ ಪ್ರಭು , ಜನಜಾಗೃತಿ ವಲಯಾಧ್ಯಕ್ಷರಾದಂತಹ ಶ್ರೀ ಆನಂದ ಸಾಲಿಯಾನ್ ಇವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.ಮತ್ತು ವಲಯದಲ್ಲಿ ಅತ್ಯುತ್ತಮ ಒಕ್ಕೂಟ ಮತ್ತು ಸಂಘ ವನ್ನು ಗುರುತಿಸಲಾಯಿತು. ಶ್ರೀಮತಿ ವಿಜಯ, ರೇಖಾ, ರಾಜೇಶ್ವರಿ ಇವರು ಪ್ರಾರ್ಥಿ ಸಿದರು. ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶ್ರೀಯುತ ಶಿವಪ್ಪ ಎಂ.ಕೆ ಇವರು ಸ್ವಾಗತಿಸಿದರು. ದಶಮಾನೋತ್ಸವ ಕಾರ್ಯಕ್ರಮದ ವರದಿಯನ್ನು ಗೋಳ್ತಮಜಲು ಸೇವಾ ಪ್ರತಿನಿಧಿಯಾದ ಶ್ರೀಮತಿ ಮಾಲತಿ ಇವರು ಮಂಡಿಸಿದರು.
ಒಕ್ಕೂಟದ ಪದಾಧಿಕಾರಿಗಳ ಪರಿಚಯವನ್ನು ಶಂಭೂರು ಸೇವಾಪ್ರತಿನಿಧಿಯಾದ ಶ್ರೀಮತಿ ಲಕ್ಷ್ಮೀರವರು ಮಂಡಿಸಿದರು. ಕಾರ್ಯಕ್ರಮವನ್ನು ಶ್ರೀ ರಾಜೇಶ್ ಕೊಟ್ಟಾರಿ (ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರು) ಇವರು ನಿರೂಪಿಸಿದರು. ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ವಲಯ ಒಕ್ಕೂಟದ ಅಧ್ಯಕ್ಷರಾದಂತಹ ಶ್ರೀ ವೆಂಕಟ್ರಾಯ ಪ್ರಭು ಧನ್ಯವಾದವಿತ್ತರು. ಈ ಕಾರ್ಯಕ್ರಮದಲ್ಲಿ ಸುಮರು 3000 ಮಂದಿ ಪಾಲ್ಗೊಂಡು ಶ್ರೀ ದೇವರ ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಬಳಿಕ ವೇದಿಕೆ ಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮ ನೆರವೇರಿತು.
