ಬಂಟ್ವಾಳ: ಪುರಸಭೆ ವತಿಯಿಂದ ಕುಡಿಯುವ ನೀರಿನ ಪೈಪ್ ದುರಸ್ತಿಗೊಳಿಸಿದ ಕಾರ್ಮಿಕ ತಂಗವೇಲು ಎಂಬವರಿಗೆ ಈಚೆಗೆ ನೀಡಿದ್ದ ರೂ 24,437 ಮೊತ್ತದ ಕಾರ್ಪೊರೇಶನ್ ಬ್ಯಾಂಕಿನ ಚೆಕ್ಕು ಇಲ್ಲಿನ ಎಚ್‍ಡಿಎಫ್‍ಸಿ ಬ್ಯಾಂಕಿನಲ್ಲಿ ಮೂರು ಬಾರಿ ತಿರಸ್ಕ್ರತಗೊಂಡ ಘಟನೆ ನಡೆದಿದೆ.
ಬಂಟ್ವಾಳ ಪುರಸಭೆ ಕಚೇರಿ ಕಟ್ಟಡದಲ್ಲೇ ಇರುವ ಎಚ್‍ಡಿಎಫ್‍ಸಿ ಬ್ಯಾಂಕಿನ ಶಾಖೆಯಲ್ಲಿ ಇದೇ ತಿಂಗಳ 1, 5 ಮತ್ತು 10ರಂದು ಚೆಕ್ ತಿರಸ್ಕøತಗೊಂಡಿದ್ದು, ಇಲ್ಲಿನ ಮುಖ್ಯಾಧಿಕಾರಿ ಅವರ ಸಹಿ ತಾಳೆಯಾಗುತ್ತಿಲ್ಲ ಎಂಬ ಕಾರಣ ಮುಂದಿಟ್ಟಿದೆ.
ಕಳೆದ ಮೂರು ತಿಂಗಳ ಹಿಂದೆಯೇ ಮುಖ್ಯಾಧಿಕಾರಿ ಸುಧಾಕರ ಭಟ್ ಅವರ ಸಹಿ ಬ್ಯಾಂಕಿಗೆ ನೀಡಲಾಗಿದ್ದರೂ ಸಹಿ ತಾಳೆಯಾಗುತ್ತಿಲ್ಲ ಎಂಬ ನೆಪವೊಡ್ಡುವ ಮೂಲಕ ಅಚ್ಚರಿ ಮೂಡಿಸಿದೆ.
ಪುರಸಭೆ ಕಟ್ಟಡದಲ್ಲಿದರೂ ಮುಖ್ಯಾಧಿಕಾರಿ ಸಹಿ ತಾಳೆಯಾಗುತ್ತಿಲ್ಲ ಎಂಬ ನೆಪವೊಡ್ಡಿ ಮೂರು ಬಾರಿ ಚೆಕ್ ತಿರಸ್ಕಾರಗೊಂಡಿರುವುದನ್ನು ಪ್ರಶ್ನಿಸಿ ಬ್ಯಾಂಕಿನ ವಿರುದ್ಧ ಪುರಸಭೆ ವಿರೋಧ ಪಕ್ಷ ನಾಯಕ ಎ.ಗೋವಿಂದ ಪ್ರಭು ಅವರು ಒಂಬುಡ್ಸ್‍ಮೆನ್‍ಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *