ಬಜ್ಪೆ: ಈಚರ್ ಲಾರಿ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಡಪದವು ಜಂಕ್ಷನ್ ಬಳಿ ಇಂದು ಬೆಳಿಗ್ಗೆ 11ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಹುಬ್ಬಳ್ಳಿ ನಿವಾಸಿ ಕಲ್ಲಪ್ಪ, ಕಾರ್ಕಳ ನಿವಾಸಿ ಪ್ರಕಾಶ್ ರಾವ್, ಜಾರ್ಖಂಡ್ ನಿವಾಸಿಗಳಾದ ಸೋನು ಹಾಗೂ ರಾಜೇಶ್ ಎಂದು ಗುರುತಿಸಲಾಗಿದೆ.
ಮೂಡಬಿದ್ರೆಯಿಂದ ಬರುತ್ತಿದ್ದ ಈಚರ್ ಲಾರಿ ಎಡಪದವು ಭಜನಾಮಂದಿರ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈಚರ್ ಲಾರಿಯಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಮೃತರಾದರೆಂದು ತಿಳಿದುಬಂದಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹವನ್ನು ವೆನ್‍ಲಾಕ್‍ಗೆ ಕರೆದೊಯ್ಯಲಾಗಿದೆ. ಈಚರ್ ಲಾರಿ ರಿಕ್ಷಕ್ಕೆ ಡಿಕ್ಕಿ ಹೊಡೆಯದೇ ಇರುತ್ತಿದ್ದರೆ ರಿಕ್ಷಾಕ್ಕೆ ಡಿಕ್ಕಿ ಸಂಭವಿಸಿ ಸರಣಿ ಅಪಘಾತವಾಗುವ ಸಂಭವವಿತ್ತು.
ಬಜ್ಪೆ ಪೊಲೀಸರು ಸ್ಥಳಕ್ಕೆ ದೌಢಾಯಿಸಿ ತನಿಖೆ ನಡೆಸಿದ್ದಾರೆ.




