ವಾಮಂಜೂರು: ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದಲ್ಲಿ ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವವು ಜರಗಲಿದ್ದು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ಮಾ.6ರಂದು ಭಾನುವಾರ ಸಂಜೆ 5ಗಂಟೆಗೆ ದೇವಳದ ಆವರಣದಲ್ಲಿ ಜರಗಿತು.
ವಿಜ್ಞಾಪನಾ ಪತ್ರ ಬಿಡುಗಡೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀಯುತ ನಾಗರಾಜ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಶೆಡ್ಡೆ ಮಂಜುನಾಥ ಭಂಡಾರಿಯವರು ಬ್ರಹ್ಮಕಲಶೋತ್ಸವದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಠಲ್‍ರಾವ್ ಬೊಂಡಂತಿಲ, ಹರೀಶ್ ಭಟ್, ಚಂದ್ರಹಾಸ್ ಶೆಟ್ಟಿ ಪೆರ್ಮಂಕಿ, ಚಂದ್ರಹಾಸ ರೈ ವಾಮಂಜೂರು, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ರಾಜ್‍ಕುಮಾರ್ ಶೆಟ್ಟಿ ತಿರುವೈಲುಗುತ್ತು, ಮಾರಪ್ಪ ಪೂಜಾರಿ, ಚಂದ್ರಹಾಸ ರಾವ್, ಶರತ್ ಶೆಟ್ಟಿ ಪಡುಪಳ್ಳಿ, ವಸಂತಕುಮಾರ್ ಪೆರ್ಮಂಕಿ, ರಾಮಕೃಷ್ಣ ಮಾಣೈ, ನಿರಂಜನ್ ಶೆಟ್ಟಿ ಸಾಲೆಮಾನೆ, ಶ್ರೀನಿವಾಸ ಮಾಣೈಮಾಂಜ ಉಪಸ್ಥಿತರಿದ್ದರು.
ರಾಜೀವ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ರೈ ವಂದಿಸಿದರು.
