ಸಾಮೂಹಿಕ ವಿವಾಹಕ್ಕೆ ಕೇಂದ್ರ ಸರಕಾರದ ಅನುದಾನ-ನಳಿನ್ ಕುಮಾರ್ ಕಟೀಲು
ಬಂಟ್ವಾಳ: ನೊಂದಾಯಿತ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ಸಮಾರಂಭಕ್ಕೆ ಅನುದಾನ ನೀಡುವ ಯೋಜನೆ ಕೇಂದ್ರ ಸರಕಾರದ ಮುಂದಿದ್ದು ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲು ಅವರು ಹೇಳಿದರು.
ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 32ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ,ರಾಜ್ಯ ಪ್ರಶಸ್ತಿ ಪ್ರದಾನಗೈದು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸಾಮೂಹಿಕ,ಸರಳ ವಿವಾಹಗಳಿಗೆ ಹೆಚ್ಚು ಒತ್ತು ನೀಡುವ ಆವಶ್ಯಕತೆ ಇದೆ ಎಂದರು.
ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ,ಸಮಾಜಮುಖಿ ಕಾರ್ಯ ಮಾಡುವಂತಹ ಯುವಜನತೆ ಸಮಾಜಕ್ಕೆ ಮಾದರಿಯಾಗಿದೆ.ಈ ದೆಸೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ ಈ ಸಾಮೂಹಿಕ ವಿವಾಹ ಸಹಿತ ಜನಪರ ಕಾರ್ಯಗಳು ಅಭಿನಂದನೀಯವಾಗಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಮಾತನಾಡಿ ಸಾಮೂಹಿಕ ವಿವಾಹ ಹೃದಯ ಶ್ರೀಮಂತಿಕೆಯನ್ನು ಅರಳಿಸುವ ಕಾರ್ಯವಾಗಿದ್ದು ,ಇಂತಹ ಜನಪಯೋಗಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್ ಕಾರ್ಣಿಕ್ ಅವರು ಶುಭಾಶಂಸನೆ ಗೈದರು.ಬೆಂಗಳೂರು ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ ಮತ್ತು ವಸಂತ ಹೆಗ್ಡೆ ಯವರು ತಾಳಿ ವಿತರಿಸಿದರು. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮುಂಬೈ ಉದ್ಯಮಿಗಳಾದ ಸುಂದರ್ ರಾಜ್ ಹೆಗ್ಡೆ, ರತ್ನಾಕರ ಗೋಪಾಲ ಪೂಜಾರಿ,ಭಿವಂಡಿ ಬಿಲ್ಲವ ಅಸೋಸಿಯೇಷನ್ ಕಾರ್ಯಧ್ಯಕ್ಷ ಮೋಹನದಾಸ ವಿ.ಪೂಜಾರಿ,ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೊಚನಾ ಜಿ.ಕೆ.ಭಟ್,ಉದ್ಯಮಿ ಸಂಪತ್ ಸುವರ್ಣ,ಹರೀಶ್ ಪೂಜಾರಿ ಸಿದ್ದಕಟ್ಟೆ,ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ,ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಸುಂದರ ನಾಯ್ಕ್,ಪಿಲಾತಬೆಟ್ಟು ಗ್ರಾ.ಪಂ.ಚಂದ್ರಶೇಖರ ಶೆಟ್ಟಿ ,ತಾ.ಪಂ.ಸದಸ್ಯ ರಮೇಶ ಕುಡ್ಮೇರ್,ವಾಮದಪದವು ವ್ಯ.ಸೇಸ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ,ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರು,ಉದಯ ಕುಮಾರ್ ರಾವ್ ಬಂಟ್ವಾಳ,ಉಪನ್ಯಾಸಕ ಜೋಸೆಫ್ ಎನ್.ಎಂ,ಸಚಿನ್ ನೋಜಾಡಿ,ಹರೀಂದ್ರ ಪೈ,ಶ್ರೀಧರ ಶೆಟ್ಟಿ ಭಂಡಾರದ ಬೆಟ್ಟು,ಲಕ್ಷ್ಮಿ ಜೆ.ಬಂಗೇರ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಲಬ್‍ನ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಾಜಿ ಅಧ್ಯಕ್ಷÀ ಮಾಧವ ಬಂಗೇರ ,ರಾಜೇಶ್ ಪುಳಿಮಜಲು,ಹಾಗೂ ಕ್ಲಬ್‍ನ ಪದಾ„ಕಾರಿಗಳು ಉಪಸ್ಥಿತರಿದ್ದರು.
ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿ ಕೇಂದ್ರ ಸರಕಾರವು ಈ ರೀತಿಯಾಗಿ ನಡೆಯುವ ಆದರ್ಶ ವಿವಾಹಕ್ಕೆ 50 ಸಾವಿರ ಅನುದಾನ ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲು ಅವರಲ್ಲಿ ಮನವಿ ಮಾಡಿದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು.ರತ್ನದೇವ್ ಪುಂಜಾಲಕಟ್ಟೆ ವಂದಿಸಿದರು.ರಂಗಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
ವೇ| ಮೂ| ಕೃಷ್ಣಭಟ್ ಪೌರೋಹಿತ್ಯದಲ್ಲಿ 20 ಜೋಡಿ ವಧು-ವರರು ನೆರೆದ ಗಣ್ಯರ, ಬಂಧುಮಿತ್ರರ ಸಮ್ಮುಖದಲ್ಲಿ ಹಸೆಮಣೆಗೇರಿದರು. ವಿವಿಧ ಸಾಧಕರಿಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಎಂ.ತುಂಗಪ್ಪ ಬಂಗೇರ ಅವರನ್ನು ಸಮ್ಮಾನಿಸಲಾಯಿತು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ:ಸೀತಾರಾಮ ಕುಮಾರ್ ಕಟೀಲು,ಲ|ಕೃಷ್ಣಯ್ಯ ಎ.ಹೆಗ್ಡೆ,ದಯಾನಂದ ಜಿ.ಕತ್ತಲ್‍ಸಾರ್,ರೋಹಿನಾಥ ಪಾದೆ,ಚಿತ್ರಕುಮಾರ್ ಉಡುಪಿ.
ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ:ಡಾ|ವರದರಾಜ ಪೈ ಮಾವಿನಕಟ್ಟೆ,ಮಂಜಪ್ಪ ಮಡಂತ್ಯಾರು,ಗೋಪಾಲ ಅಂಚನ್,ಮೋಹನ್ ಕೆ. ಶ್ರೀಯಾನ್ ರಾಯಿ, ಕು| ಪಂಚಮಿ,ಕು| ಅದ್ವಿಕಾ ಶೆಟ್ಟಿ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್,ಕರೆಂಕಿ.
ಬಾಕ್ಸ್ ಎಂಡ್

