-
ಬಂಟ್ವಾಳ: ಪುರಸಭೆಯ ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ 2016-17ನೇ ಸಾಲಿಗೆ 48.34 ಲಕ್ಷದ ಮಿಗತೆ ಆಯ ವ್ಯಯವನ್ನು ಗುರುವಾರ ಮಧ್ಯಾಹ್ನ ನಡೆದ ವಿಶೇಷಸಭೆಯಲ್ಲಿ ಅಧ್ಯಕ್ಷೆ ವಸಂತಿ ಚಂದಪ್ಪ ಅವರು ಮಂಡಿಸಿದರು.
-

19.65 ಕೋಟಿ ಜಮೆಯನ್ನು ನಿರೀಕ್ಷಿಸಲಾಗಿದೆ. ಶೇ.24.10ರ ನಿಧಿಗೆ ಎಸ್ಎಫ್ಸಿ ಯಿಂದ 49.68 ಲಕ್ಷ, ಪುರಸಭಾ ನಿಧಿಯಿಚಿದ 6.13 ಲಕ್ಷ ಶೇ.7.25ರ ನಿಧಿಗೆ ಎಸ್ಎಫ್ಸಿಯಿಂದ 14.95 ಲಕ್ಷ ಪುರಸಭಾ ನಿಧಿಯಿಂದ 1.84 ಲಕ್ಷ ಶೇ. 3ರ ನಿಧಿಗೆ ಎಸ್ಎಫ್ಸಿಗೆ 6.18 ಲಕ್ಷ, ಪುರಸಭಾ ನಿಧಿಯಿಂದ 76 ಲಕ್ಷ ಕ್ರೀಡಾ ನಿಧಿಗೆ 22 ಲಕ್ಷವನ್ನು ಕಾದಿರಿಸಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 2016-17ನೇ ಸಾಲಿಗೆ 3 ಕೋಟಿಯನ್ನು ನಿರೀಕ್ಷಿಸಲಾಗಿದ್ದು 13-14ನೇ ಹಣಕಾಸು ಸಾಮಾನ್ಯ ಮೂಲ ಅನುದಾನಕ್ಕೆ ಈ ಸಾಲಿನಲ್ಲಿ 172 ಲಕ್ಷ ರು. ನಿರೀಕ್ಷಿಸಲಾಗಿದೆ ಎಂದು ವಿವರಿಸಿದ ಅವರು ಎಸ್ಎಫ್ಸಿ ಮುಕ್ತ ನಿಧಿ ನಿರೀಕ್ಷಿತ ಅನುದಾನದಲ್ಲಿ 140.39 ಲಕ್ಷ ರಸ್ತೆ, 20 ಲಕ್ಷ ನೀರಿನ ಕಾಮಗಾರಿಗೆ ಕಾದಿರಿಸಲಾಗಿದೆ. 14ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ಚ್ಪರಂಡಿ ರಚನೆ, ಉದ್ಯಾನವನ, ಕಟ್ಟಡ ದುರಸ್ತಿ, ನೀರಿನ ಕಾಮಾಗಾರಿ, ದಾರಿದೀಪ, ಘನತ್ಯಾಜ್ಯ, ಸಾರ್ವಜನಿಕ ಶೌಚಾಲಯ ಮೊದಲಾದ ಕಾಮಗಾರಿಗಳಿಗೆ ಅನುದಾನವನ್ನು ಕಾದಿರಿಸಲಾಗಿದೆ.
ಉಪಾಧ್ಯಕ್ಷೆ ಯಾಸ್ಮೀನ್, ಮುಖ್ಯಾಧಿಕಾರಿ ಸುಧಾಕರ ವೇದಿಕೆಯಲ್ಲಿದ್ದರು. ಪ್ರತಿಪಕ್ಷ ಬಿಜೆಪಿ ಮಧ್ಯಾಹ್ನದ ಬಳಿಕ ನಡೆದ ವಿಶೇಷ ಸಭೆಗೆ ಗೈರು ಹಾಜರಾಗಿದ್ದರಿಂದ ಆಯವ್ಯಯ ಮಂಡನೆಯ ಮೇಲೆ ಯಾವುದೇ ಚರ್ಚೆ ನಡೆಯದೇ ಕೆಲವೇ ಹೊತ್ತಿನಲ್ಲಿ ಸಭೆ ಮುಕ್ತಾಯಗೊಂಡಿತು.
-
