ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನ ಬಳಿ ಕೊಡಂಗಲ್ಲು ನಿವಾಸಿ,ಪ್ರಾಂತ್ಯ ಗ್ರಾಮದ ಶಂಕರ ಅವರ ಪುತ್ರ ನಾಗರಾಜ (28) ಕಳೆದ ಫೆ 2ರಂದು ಮಂಗಳೂರು ನ್ಯಾಯಾಲಯಕ್ಕೆ ಹೋಗುವುದಾಗಿ ತೆರಳಿದವರು ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಮೂಡುಬಿದರೆ ಠಾಣೆಗೆ ದೂರು ನೀಡಲಾಗಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ನಾಗರಾಜ 5.2 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖದವರಾಗಿದ್ದಾರೆ. ಕನ್ನಡ ತುಳು ಬಲ್ಲ ಅವರು ಎರಡನೇ ತರಗತಿ ಕಲಿತಿದ್ದಾರೆ. ಇವರ ಬಗ್ಗೆ ಸುಳಿವು ಇದ್ದವರು ಮಂಗಳೂರು ಪೊಲೀಸ್ ಕಂಟ್ರೋಲ್ ರೂಂ, ಅಥವಾ ಮೂಡುಬಿದಿರೆ ಠಾಣೆಗೆ ಮಾಹಿತಿ ನೀಡಿಬೇಕೆಂದು ಪ್ರಕಟನೆ ಂ ತಿಳಿಸಿದೆ.
