ಕೈಕಂಬ: ಕಂದಾವರ ಗುರುನಗರ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಹಾಗೂ ಬಿಲ್ಲವರ ಸಂಘ ಮತ್ತು ಬಿಲ್ಲವ ಮಹಿಳಾ ಮಂಡಳಿ ಇದರ ಗುರು ಮಂದಿರದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಮೂವರು ಸಮಾಜ ಭಾಂದವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಮುರ್ತೆದಾರ ಪೂವಪ್ಪ ಪೂಜಾರಿ, ಕರಾಟೆಪಟು ಸಲೋನಿ ಪೂಜಾರಿ ಅವರನ್ನು ಬಲ್ಯೋಟ್ಟು ಶ್ರೀ ವಿಖ್ಯಾತನಂದ ಸ್ವಾಮೀಜಿ ಹೊಸ್ಮಾರ್ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.
21vp  sanmana

0003

003

005

009

002
ಈ ಸಂದರ್ಭದಲ್ಲಿ ಕಂದಾವರ ಗ್ರಾ.ಪಂ.ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ,ಅಡ್ಡೆ ರವೀಂದ್ರ ಪೂಜಾರಿ, ಪದ್ಮನಾಭ ಸಾಲ್ಯಾನ್, ಗಣೇಶ್ ಪೂಜಾರಿ, ಹರೀಶ್ ಕೆ.ಕೈಕಂಬ , ನೀಲಯ್ಯ ಪೂಜಾರಿ ಕಂದಾವರ, ಚೆನ್ನಮ್ಮ, ವಿಶ್ವನಾಥ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ, ನಾರಾಯಣ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *