ಬಂಟ್ವಾಳ:ಫೆ. 18: ಸಜಿಪನಡುವಿನ ಬಸ್ ನಿಲ್ದಾಣ ಬಳಿ ಸಿಸಿ ಕೆಮರಾ ಅಳವಡಿಸುವ ಮೂಲಕ ತಾಲೂಕಿನಲ್ಲೇ ಪ್ರಥಮ ಬಾರಿಗೆ ಗ್ರಾಮ ಪಂಚಾಯತ್ವೊಂದು ಮಾದರಿ ಎನಿಸಿದೆ. ಈ ಕಾರ್ಯಕ್ಕೆ ಪೊಲೀಸ್ ಇಲಾಖೆಯಿಂದೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಸಜಿಪ ಮುಹಮ್ಮದ್ ನಾಸಿರ್ ತಿಳಿಸಿದರು.
ಸಜಿಪನಡು ಗ್ರಾಪಂನಲ್ಲಿ ಎಸ್ಡಿಪಿಐ ಬೆಂಬಲಿತರ ಆಡಳಿತ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತನ್ನು ಆಡಳಿತದಲ್ಲಿ ಚುರುಕುಗೊಳಿಸಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.
ಪಂಚಾಯತ್ಗೆ ವೈಫೈ ಅಳವಡಿಸಿದ್ದು, ಗ್ರಾಮ ಮೂಲ ಸಮಸ್ಯೆಗಳೊಂದಾಗ ಚರಂಡಿಗೆ ಮೋರಿ ನಿಮಾರ್ಣ, ರಸ್ತೆ ಅಭಿವೃದ್ಧಿ, ದಾರಿ ದೀಪ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಪಂಚಾಯತ್ ಆಡಳಿತ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಕೊಲ್ಯ ಹಾಗೂ ಕೋಟೆಕಣಿ ಎಂಬಲ್ಲಿ ನೆನೆಗುದಿಗೆ ಬಿದ್ದಿದ್ದ ಬೋರ್ವೆಲ್ಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ. ತನ್ಮೂಲಕ ಈ ಭಾಗದ ನೀರಿನ ಸಮಸ್ಯೆಯನ್ನು ಶಾಸ್ವತವಾಗಿ ಪರಿಹರಿಸಲಾಗಿದೆ ಎಂದರು.
hqdefault
ಸಜಿಪನಡುವಿನ ಬೈಲಗುತ್ತು ಎಂಬಲ್ಲಿ ಜನ ಸಾಮಾನ್ಯರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಕೊಲಚೆ ನೀರಿನ ಚರಂಡಿಗೆ ಪಕ್ಷದ ವತಿಯಿಂದ ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಮೋರಿ ನಿರ್ಮಿಸಿ ಕೊಡಲಾಗಿದೆ. ಆಗೆಯೇ ಸಜಿಪನಡು ಗ್ರಾಮದಲ್ಲಿ ಬಸ್ ತಂಗುದಾನ ಹಾಗೂ ಆಟೋ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ಎಂಬ ಧ್ಯೇಯವಾಕ್ಯದಡಿಯಲ್ಲಿ ಪರಿಸರ ಸ್ನೇಹಿ ಗ್ರಾಮ, ಮಗು ಸ್ನೇಹಿ ಗ್ರಾಮ, ಆಹಾರ ಅದಾಲತ್ ಕಾರ್ಯಕ್ರಮಗಳನ್ನು ರೂಪಿಸಿ ಅದನ್ನು ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದ ಅವರು, ಇಡೀ ಗ್ರಾಮಸ್ಥರ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಾದರಿ ಗ್ರಾಮ ಪಂಚಾಯತನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ತ್ಯಾಜ ಘಟಕಕ್ಕೆ ವಿರೋಧ: ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆ ನಿರ್ಮಿಸುತ್ತಿರುವ ತ್ಯಾಜ ಘಟಕಕ್ಕೆ ಪಂಚಾಯತ್ ಆಡಳಿತ ವಿರೋಧ ವ್ಯಕ್ತಪಡಿಸುತ್ತದೆ. ಈಗಾಗಲೇ ಪುರಸಭೆಗೆ ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತ್ಯಾಜ ಘಟಕದ ಕಾಮಗಾರಿಗೆ ವಿರೋಧಿಸುವುದಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಕಡಕ್ಕಾಗಿ ಉತ್ತರಿಸಿದರು.
ಕಾಮಗಾರಿಗೆ ಪ್ರಸ್ತಾವನೆ ಹೋದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಆಗಿನ ಪಂಚಾಯತ್ ಆಡಳಿತ ಹಾಗೂ ಜಿಲ್ಲಾಡಳಿತದ ಎಡವಟ್ಟಿನಿಂದ ಈಗ ಇಡೀ ಗ್ರಾಮವೇ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಲ್ಲಿನ 141 ಮನೆಗಳು, ಶಾಲೆ, ಅಂಗನವಾಡಿ, ಮದರಸ ಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಬೇಕು. ಈ ಘಟಕವನ್ನು ಗ್ರಾಮಸ್ಥರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿ ಕೊಡುವ ಖಾತ್ರಿಯನ್ನು ಪುರಸಭೆ ವ್ಯಕ್ತಪಡಿಸಿದ ಬಳಿಕವೇ ಇದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮಂಗಳೂರು ಕ್ಷೇತ್ರ ಅಧ್ಯಕ್ಷ ಲತೀಫ್ ಕೋಡಿಜಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಎನ್.ಅಬ್ದುರ್ರಹ್ಮಾನ್, ಇಕ್ಬಾಲ್ ಬೈಲಗುತ್ತು, ಅಬ್ದುಲ್ ರಶೀದ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *